ETV Bharat / state

ಪ್ರಧಾನಿ ಮೋದಿ ಬಡ ಜನರ ಮೈಕ್ರೋ ಫೈನಾನ್ಸ್​​ ಸಾಲ ಮನ್ನಾ ಮಾಡಲಿ: ಬಿ.ಎಂ.ಭಟ್​​​

ಈ ದೇಶದ ಬಡತನ ನಿರ್ಮೂಲನೆ ಮಾಡಲು ಮೈಕ್ರೋ ಫೈನಾನ್ಸ್ ಕಾಯ್ದೆ ಜಾರಿಗೆ ತರಲಾಯಿತು. ಬಡತನ ನಿರ್ಮೂಲನೆ ಮಾಡುವುದೇ ಇದರ ಪ್ರಥಮ‌ ಆದ್ಯತೆಯಾಗಿದೆ. ಅಲ್ಲದೆ ಸ್ವ ಉದ್ಯೋಗ ಪ್ರೋತ್ಸಾಹಿಸಲು ಮೈಕ್ರೋ ಫೈನಾನ್ಸ್ ಬಡವರಿಗೆ ಸಾಲ ನೀಡಬೇಕು‌ ಎಂದು ದ.ಕ ಜಿಲ್ಲಾ ಋಣಮುಕ್ತ ಹೋರಾಟ ಸಮಿತಿಯ ಅಧ್ಯಕ್ಷ ಬಿ.ಎಂ.ಭಟ್ ಆಗ್ರಹಿಸಿದರು.

wdwd
ಮೋದಿ ಬಡ ಜನರ ಮೈಕ್ರೋ ಫೈನಾನ್ಸ್ ಸಾಲ ಮನ್ನಾ ಮಾಡಲಿ : ಬಿ.ಎಂ.ಭಟ್
author img

By

Published : Nov 28, 2019, 7:13 PM IST

ಮಂಗಳೂರು: ಮೈಕ್ರೋ ಫೈನಾನ್ಸ್​ನಿಂದ ಸಾಲ ಪಡೆದ ಕೋಟ್ಯಂತರ ಮಹಿಳೆಯರ ಸಾಲವನ್ನು ಪ್ರಧಾನಿ ಮೋದಿಯವರು ಮನ್ನಾ ಮಾಡಲಿ. ಇದು ನಿಜವಾದ ದೇಶಭಕ್ತಿ ಎಂದು ದ.ಕ ಜಿಲ್ಲಾ ಋಣಮುಕ್ತ ಹೋರಾಟ ಸಮಿತಿಯ ಅಧ್ಯಕ್ಷ ಬಿ.ಎಂ.ಭಟ್ ಹೇಳಿದರು.

ಮೋದಿ ಬಡ ಜನರ ಮೈಕ್ರೋ ಫೈನಾನ್ಸ್ ಸಾಲ ಮನ್ನಾ ಮಾಡಲಿ: ಬಿ.ಎಂ.ಭಟ್

ಋಣಮುಕ್ತ ಕಾಯ್ದೆಯಡಿ ಮೈಕ್ರೋ ಫೈನಾನ್ಸ್ ಸಾಲ ಮನ್ನಾ ಮಾಡಲು ಒತ್ತಾಯಿಸಿ ನಡೆದ ಬೃಹತ್ ಹೋರಾಟದಲ್ಲಿ ಮಾತನಾಡಿದ ಅವರು, ನಿಮಗೆ ಮತ ನೀಡಿದ ಮತದಾರರ ಕಷ್ಟ ಬಗೆಹರಿಸುವಂತೆ ಸರ್ಕಾರವನ್ನು ಒತ್ತಾಯಿಸಿದರು. ಜನರಿಗೆ ಬೇಕಾದ ಎಲ್ಲವನ್ನೂ ಹೋರಾಟದ ಮೂಲಕ ಪಡೆದುಕೊಳ್ಳಬೇಕಾದರೆ ಜನಪ್ರತಿನಿಧಿಗಳು ಯಾಕೆ ಎಂದು ಪ್ರಶ್ನಿಸಿದರು.

ಈ ದೇಶದಲ್ಲಿ ದನ, ದೇವರು, ಧರ್ಮಕ್ಕೆ ಅನ್ಯಾಯ ಆದರೆ ರಕ್ಷಣೆ ಮಾಡಲು ಇದ್ದಾರೆ. ಆದರೆ ಬಡಜನರ ರಕ್ಷಣೆ ಮಾಡಲು ಯಾರೂ ಇಲ್ಲ. ಮೊದಲು ನಮ್ಮನ್ನು ರಕ್ಷಣೆ ಮಾಡಿ, ದನ, ಧರ್ಮ, ದೇವರ ರಕ್ಷಣೆಯನ್ನು ನಾವು ಮಾಡುತ್ತೇವೆ. ಮೈಕ್ರೋ ಫೈನಾನ್ಸ್ ಸಾಲದ ಸುಳಿಯಿಂದ ಬಡವರನ್ನು ರಕ್ಷಿಸಿ ಎಂದು ಬಿ.ಎಂ.ಭಟ್ ಆಗ್ರಹಿಸಿದರು.

Intro:ಮಂಗಳೂರು: ಮೈಕ್ರೋ ಫೈನಾನ್ಸ್ ನಿಂದ ಸಾಲ ಪಡೆದ ಕೋಟ್ಯಂತರ ಮಹಿಳೆಯರ ಸಾಲವನ್ನು ಪ್ರಧಾನಿ ಮೋದಿಯವರು ಮನ್ನಾ ಮಾಡಲಿ. ಇದು ನಿಜವಾದ ದೇಶಭಕ್ತಿ. ಇದನ್ನು ದ‌.ಕ.ಜಿಲ್ಲೆಯ ಜನಪ್ರತಿನಿಧಿಗಳು ನರೇಂದ್ರ ಮೋದಿಯವರ ಗಮನಕ್ಕೆ ತರಲಿ ಎಂದು ದ.ಕ.ಜಿಲ್ಲಾ ಋಣ ಮುಕ್ತ ಹೋರಾಟ ಸಮಿತಿಯ ಅಧ್ಯಕ್ಷ ಬಿ.ಎಂ.ಭಟ್ ಹೇಳಿದರು.

ಋಣ ಮುಕ್ತ ಕಾಯ್ದೆಯಡಿ ಮೈಕ್ರೋ ಫೈನಾನ್ಸ್ ಸಾಲ ಮನ್ನಾ ಮಾಡಲು ಒತ್ತಾಯಿಸಿ ನಡೆದ ಬೃಹತ್ ಹೋರಾಟ ಸಮಾವೇಶವನ್ನು ಉದ್ದೇಶಿಸಿ ಅವರು ಮಾತನಾಡಿ, ನಿಮಗೆ ಮತದಾನ ನೀಡಿದ ಮತದಾರರ ಕಷ್ಟವನ್ನು‌ ಬಗೆಹರಿಸಲು ಸರಕಾರವನ್ನು ಒತ್ತಾಯಿಸಿ. ಜನರಿಗೆ ಬೇಕಾದ ಎಲ್ಲವನ್ನೂ ಹೋರಾಟದ ಮೂಲಕವೇ ಪಡೆದುಕೊಳ್ಳಬೇಕಾದರೆ, ಜನಪ್ರತಿನಿಧಿಗಳು ಯಾಕೆ. ಎಂದು ಹೇಳಿದರು.

Body:ಈ ದೇಶದಲ್ಲಿ ದನ, ದೇವರು, ಧರ್ಮಕ್ಕೆ ಅನ್ಯಾಯ ಆದರೆ ರಕ್ಷಣೆ ಮಾಡಲು ಇದ್ದಾರೆ. ಆದರೆ ಬಡಜನರ ರಕ್ಷಣೆ ಮಾಡಲು ಯಾರೂ ಇಲ್ಲ. ಮೊದಲು ನಮ್ಮನ್ನು ರಕ್ಷಣೆ ಮಾಡಿ, ದನ, ಧರ್ಮ, ದೇವರ ರಕ್ಷಣೆಯನ್ನು ನಾವು ಮಾಡುತ್ತೇವೆ. ಆದರೆ ಮೈಕ್ರೋ ಫೈನಾನ್ಸ್ ಸಾಲದ ಸುಳಿಯಿಂದ ಒದ್ದೋಡಿಸಿ ಎಂದು ಹೇಳಿದರು.

ಈ ದೇಶದ ಬಡತನ ನಿರ್ಮೂಲನೆ ಮಾಡಲು ಮೈಕ್ರೋ ಫೈನಾನ್ಸ್ ಕಾಯ್ದೆ ಜಾರಿಗೆ ತರಲಾಯಿತು. ಬಡತನ ನಿರ್ಮೂಲನೆ ಮಾಡುವುದೇ ಇದರ ಪ್ರಥಮ‌ ಕರ್ತವ್ಯ. ಅಲ್ಲದೆ ಸ್ವ ಉದ್ಯೋಗಕ್ಕೆ ಪ್ರೋತ್ಸಾಹ ಮಾಡಲು ಮೈಕ್ರೋ ಫೈನಾನ್ಸ್ ಬಡವರಿಗೆ ಸಾಲ ನೀಡಬೇಕು‌. ಅವರಿಗೆ ಆದಾಯ ಬಂದ ಬಳಿಕ ಕಂತು ಪ್ರಕಾರ ಸಾಲ ವಸೂಲಿ ಮಾಡಬೇಕು. ಉದ್ಯೋಗಾವಕಾಶಗಳನ್ನು ಹೆಚ್ಚು ಮಾಡಬೇಕು. ಆದರೆ ಮೈಕ್ರೋ ಫೈನಾನ್ಸ್ ಗಳು ಇದ್ಯಾವುದನ್ನು ಮಾಡದೆ ಖಾಸಗಿ ಲೇವಾದೇವಿಯವರ ತರಹ ಬಡ್ಡಿಗೆ ಹಣ ಮಾಡಲಾಯಿತು. ಇದಕ್ಕಾಗಿಯೇ ಸರಕಾರವು ಈ ಮೈಕ್ರೋ ಫೈನಾನ್ಸ್ ನ್ನು ಖಾಸಗಿಯವರಿಗೆ ನೀಡಿದೆ ಎಂದು ಬಿ.ಎಂ.ಭಟ್ ಕಿಡಿಕಾರಿದರು.

ಈ ಸಂದರ್ಭ ಮೈಕ್ರೋ ಫೈನಾನ್ಸ್ ಗಳ ಅನಾಚಾರಕ್ಕೆ ಒಳಗಾದ ದ.ಕ.ಜಿಲ್ಲೆಯ 25 ಸಾವಿರಕ್ಕೂ ಅಧಿಕ ಮಂದಿ ಪ್ರತಿಭಟನಾ ಸಭೆಯಲ್ಲಿ ಭಾಗವಹಿಸಿದ್ದರು.

Reporter_Vishwanath Panjimogaru

Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.