ETV Bharat / state

ಆರೋಪ ಹೊರಿಸುವವರು ಮೊದಲು ತಮ್ಮ ಹಿನ್ನೆಲೆ ಗಮನಿಸಲಿ: ನಳಿನ್ ಕುಮಾರ್ ಕಟೀಲು - Covid Kit Corruption

ಕೋವಿಡ್ ಕಿಟ್​ಗಳ ಖರೀದಿಯ ವಿಚಾರದಲ್ಲಿ ರಾಜ್ಯ ಸರ್ಕಾರದ ಮೇಲೆ ಕಾಂಗ್ರೆಸ್ ಭ್ರಷ್ಟಾಚಾರದ ಆರೋಪ ಹೊರಿಸುತ್ತಿದ್ದು, ಈ ಬಗ್ಗೆ ಐವರು ಸಚಿವರು ಪೂರ್ಣ ಪ್ರಮಾಣದ ಮಾಹಿತಿ ನೀಡಿದ್ದಾರೆ‌. ಮುಖ್ಯಮಂತ್ರಿಗಳೇ ಈ ಬಗ್ಗೆ ಚರ್ಚೆಗೆ ಆಹ್ವಾನ ನೀಡಿದ್ದಾರೆ. ಆರೋಪ ಮಾಡುವವರನ್ನು ನಂಬುವ ಮೊದಲು ಭ್ರಷ್ಟಾಚಾರದ ಆರೋಪ ಹೊರಿಸಿದವರ ಹಿನ್ನೆಲೆಯನ್ನು ಮೊದಲು ಗಮನಿಸಬೇಕಾಗುತ್ತದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲು ಕಾಂಗ್ರೆಸ್​ ನಾಯಕರಿಗೆ ತಿರುಗೇಟು ನೀಡಿದರು.

Nalin Kumar Kateel taunts opposition party
ಭ್ರಷ್ಟಾಚಾರದ ಆರೋಪ ಹೊರಿಸುವವರು ಮೊದಲು ತಮ್ಮ ಹಿನ್ನೆಲೆ ಗಮನಿಸಲಿ: ನಳಿನ್ ಕುಮಾರ್ ಕಟೀಲು
author img

By

Published : Jul 25, 2020, 8:51 PM IST

ಮಂಗಳೂರು: ಕೋವಿಡ್ ಕಿಟ್ ಗಳ ಖರೀದಿ ವಿಚಾರದಲ್ಲಿ ರಾಜ್ಯ ಸರ್ಕಾರದ ಮೇಲೆ ಕಾಂಗ್ರೆಸ್ ಭ್ರಷ್ಟಾಚಾರದ ಆರೋಪ ಹೊರಿಸುತ್ತಿದ್ದು, ಈ ಬಗ್ಗೆ ಐವರು ಸಚಿವರು ಪೂರ್ಣ ಪ್ರಮಾಣದ ಮಾಹಿತಿ ನೀಡಿದ್ದಾರೆ‌. ಮುಖ್ಯಮಂತ್ರಿಗಳೇ ಈ ಬಗ್ಗೆ ಚರ್ಚೆಗೆ ಆಹ್ವಾನ ನೀಡಿದ್ದಾರೆ. ಇವನ್ನೆಲ್ಲ ನಂಬುವ ಮೊದಲು ಭ್ರಷ್ಟಾಚಾರದ ಆರೋಪ ಹೊರಿಸಿದವರ ಹಿನ್ನೆಲೆಯನ್ನು ಮೊದಲು ಗಮನಿಸಬೇಕಾಗುತ್ತದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲು ಕಾಂಗ್ರೆಸ್​ ನಾಯಕರಿಗೆ ತಿರುಗೇಟು ನೀಡಿದರು.

ಭ್ರಷ್ಟಾಚಾರದ ಆರೋಪ ಹೊರಿಸುವವರು ಮೊದಲು ತಮ್ಮ ಹಿನ್ನೆಲೆ ಗಮನಿಸಲಿ: ನಳಿನ್ ಕುಮಾರ್ ಕಟೀಲು

ನಗರದ ಕೊಡಿಯಾಲ್ ಬೈಲ್​ನಲ್ಲಿರುವ ಬಿಜೆಪಿ ಕಚೇರಿಯಲ್ಲಿ ಮಾತನಾಡಿದ ಅವರು, ಆರೋಪ ಮಾಡಿದವರ ಪಕ್ಷದ ರಾಷ್ಟ್ರೀಯ ಅಧ್ಯಕ್ಷರು, ಮಾಜಿ ಅಧ್ಯಕ್ಷರು ಬೇಲ್​ನಲ್ಲಿದ್ದಾರೆ. ಅದೇ ರೀತಿ ರಾಜ್ಯಾಧ್ಯಕ್ಷರೂ ಬೇಲ್​ ಮೇಲಿದ್ದಾರೆ. ಅದರ ತನಿಖೆ ಆಗಬಾರದೆಂದು ಅರ್ಜಿಯನ್ನೂ ಹಾಕಿದ್ದಾರೆ. ಹಾಗಾಗಿ ಅವರ ಮೇಲಿರುವ ಪ್ರಕರಣಗಳ ಹಿನ್ನೆಲೆ ಗಮನಿಸಿದರೆ ಗೊತ್ತಾಗುತ್ತದೆ ಅವರ ಆರೋಪಗಳು ಎಷ್ಟು ಸುಳ್ಳು ಎನ್ನೋದು ಎಂದು ವ್ಯಂಗ್ಯವಾಡಿದರು.

ರಾಜ್ಯ ವೈದ್ಯಕೀಯ ಶಿಕ್ಷಣ ಸಚಿವ ಸುಧಾಕರ್, ಕೋವಿಡ್ ಕಿಟ್ ಖರೀದಿಗೆ ಆಗಿರುವ ಖರ್ಚು-ವೆಚ್ಚದ ಬಗೆಗಿನ ಸ್ಪಷ್ಟ ಚಿತ್ರಣ ನೀಡಿದ್ದಾರೆ‌. ಹಾಗೆಯೇ ಕಾಂಗ್ರೆಸ್​ನ‌ ಅವಧಿಯಲ್ಲಿ ಏನೂ ಅಗತ್ಯವಿಲ್ಲದೆ ಎಷ್ಟು ವೆಂಟಿಲೇಟರ್ ಖರೀದಿ ಮಾಡಲಾಗಿದೆ ಎಂಬುದರ ಸ್ಪಷ್ಟ ಮಾಹಿತಿಯನ್ನೂ ನೀಡಿದ್ದಾರೆ ಎಂದು ಹೇಳಿದರು.

ಸಿಎಂ ಯಡಿಯೂರಪ್ಪನವರು ಕೋವಿಡ್ ಸೋಂಕಿನ ಬಗ್ಗೆ ಸಮರ್ಪಕವಾದ ತೀರ್ಮಾನ ಕೈಗೊಂಡ ಹಿನ್ನೆಲೆ ಕರ್ನಾಟಕ ರಾಜ್ಯ ಸೋಂಕು ನಿಯಂತ್ರಣದಲ್ಲಿ ಎರಡನೇ ಸ್ಥಾನದಲ್ಲಿದೆ. ಎಲ್ಲಾ ಜಿಲ್ಲೆಗಳಲ್ಲಿ ಕೋವಿಡ್ ಆಸ್ಪತ್ರೆಗಳ ನಿರ್ಮಾಣವಾಗಿದೆ. ಪಿಪಿಇ ಕಿಟ್​ಗಳನ್ನು ಪ್ರಾಥಮಿಕ ಆರೋಗ್ಯ ಕೇಂದ್ರಗಳವರೆಗೆ ವಿತರಣೆ ಮಾಡಲಾಗಿದೆ. ಅಗತ್ಯವಿರುವಲ್ಲಿ ವೆಂಟಿಲೇಟರ್​ಗಳನ್ನು ಒದಗಿಸಲಾಗಿದೆ. ಕೋವಿಡ್ ನಿಗ್ರಹ ಮಾಡುವಲ್ಲಿ ಶ್ರಮವಹಿಸುತ್ತಿರುವವರಿಗೆ ವಿಮಾ ಯೋಜನೆಗಳನ್ನು ಒದಗಿಸಲಾಗಿದೆ ಎಂದರು.

ರಾಜ್ಯದಲ್ಲಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದು ನಾಳೆಗೆ ಒಂದು ವರ್ಷವಾಗುತ್ತದೆ. ಯಡಿಯೂರಪ್ಪ ನೇತೃತ್ವದ ಸರ್ಕಾರ ಅದ್ಭುತ ಸಾಧನೆಗಳನ್ನು ಮಾಡಿ ತೋರಿಸಿದೆ. ಅಭಿವೃದ್ಧಿ ಕಾರ್ಯಕ್ರಮಗಳು ಮುಂದಕ್ಕೆ ಬಂದಿದ್ದು, ಹತ್ತಾರು ಯೋಜನೆಗಳನ್ನು ಅನುಷ್ಠಾನಗೊಳಿಸಿದೆ. ಸಿಎಂ ಹಾಗೂ ಅವರ ಸಚಿವ ಮಂಡಲ ತಂಡವಾಗಿ ಕಾರ್ಯವನ್ನು ನಿಭಾಯಿಸುತ್ತಿದೆ.‌ ಎಲ್ಲಾ ಇಲಾಖೆಗಳಿಗೂ ವೇಗ ಕೊಡುವಂತಹ ಕಾರ್ಯಗಳು ನಡೆಯುತ್ತಿವೆ. ರಾಜ್ಯ ಸರಕಾರ ಕೇಂದ್ರ ಸರಕಾರದ ಯೋಜನೆಗಳನ್ನು ಅನುಷ್ಠಾನಗೊಳಿಸುವಲ್ಲಿಯೂ‌ ಮುಂಚೂಣಿಯಲ್ಲಿದೆ ಎಂದು ನಳಿನ್ ಕುಮಾರ್ ಹೇಳಿದರು.

ಭೂಸುಧಾರಣೆ ಕಾಯ್ದೆ ರೈತ ಪರವಾಗಿದ್ದು, ಯಾರು ಇದರ ವಿರುದ್ಧ ಮಾತನಾಡುತ್ತಾರೋ ಅವರು ವಿಧಾನಸಭೆಯಲ್ಲಿ ಚರ್ಚೆ ಮಾಡಲಿ. ಎಪಿಎಂಸಿ ಕಾಯ್ದೆ ಕೇಂದ್ರ ಸರಕಾರ ಹಿಂದೆಯೇ ಅನುಷ್ಠಾನ ಮಾಡಿರುವಂತದ್ದು, ಮಹಾರಾಷ್ಟ್ರ ಮತ್ತಿತರೆಡೆ ಕಳೆದ ವರ್ಷವೇ ಜಾರಿಗೊಂಡಿದೆ. ನಮ್ಮ ಸರ್ಕಾರ ಈ ವರ್ಷ ಜಾರಿಗೊಳಿಸಿದ್ದು, ಇದರ ಬಗ್ಗೆ ಮುಂದೆಯೂ ಚರ್ಚೆ ಮಾಡಬಹುದು. ಈ ಯೋಜನೆ ರೈತ ಪರವಾಗಿದ್ದು, ಅವರು ಬೆಳೆದ ಬೆಳೆಯನ್ನು ಮಧ್ಯವರ್ತಿಗಳಿಲ್ಲದೆ ಎಲ್ಲಿ ಬೇಕಾದರೂ ಮಾರಾಟ ಮಾಡುವ ಅವಕಾಶ ಇದೆ. ಆದ್ದರಿಂದ ರೈತರು ಇದನ್ನು ವಿರೋಧಿಸುತ್ತಿಲ್ಲ. ರಾಜಕಾರಣ ಮಾಡುವವರು ವಿರೋಧಿಸುತ್ತಿದ್ದಾರೆ ಎಂದು ಹೇಳಿದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.