ETV Bharat / state

ಲಿಂಗಾಯತರಿಗೆ ಸಿಎಂ ಸ್ಥಾನ ನೀಡುವ ಪಕ್ಷ ಬಿಜೆಪಿ: ನಳಿನ್ ಕುಮಾರ್ ಕಟೀಲ್

author img

By

Published : Apr 17, 2023, 9:36 PM IST

Updated : Apr 17, 2023, 10:57 PM IST

ಜಗದೀಶ್ ಶೆಟ್ಟರ್ ರಾಜ್ಯ ನಾಯಕರಾಗಲು ಬಿಜೆಪಿ ಅಭೂತಪೂರ್ವ ಕೊಡುಗೆ ನೀಡಿದೆ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಹೇಳಿದರು.

nalin-kumar-kateel-reaction-on-lingayat-cm
ಮುಂದಿನ ದಿನಗಳಲ್ಲಿ ಲಿಂಗಾಯತರಿಗೆ ಸಿಎಂ ಸ್ಥಾನ ನೀಡುವ ಪಕ್ಷ ಬಿಜೆಪಿ: ನಳಿನ್ ಕುಮಾರ್ ಕಟೀಲ್

ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್

ಮಂಗಳೂರು: ಈವರೆಗೂ ಬಿಜೆಪಿ ಲಿಂಗಾಯತರಿಗೆ ಮುಖ್ಯಮಂತ್ರಿ ಸ್ಥಾನ ನೀಡಿದೆ‌. ಮುಂದಿನ ದಿನಗಳಲ್ಲೂ ಮುಖ್ಯಮಂತ್ರಿ ಸ್ಥಾನವನ್ನು ಲಿಂಗಾಯತರಿಗೆ ನೀಡುವ ಪಕ್ಷ ಬಿಜೆಪಿ ಎಂದು ಪಕ್ಷದ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಹೇಳಿದರು. ಮಂಗಳೂರಿನಲ್ಲಿಂದು ಮಾತನಾಡಿದ ಅವರು, ಲಿಂಗಾಯತರಿಗೆ ಅವಕಾಶ ಕೊಟ್ಟದ್ದು ಬಿಜೆಪಿ. ಪಕ್ಷಕ್ಕೆ ಸಿಕ್ಕ ಕಡಿಮೆ ಅಧಿಕಾರ ಅವಕಾಶದಲ್ಲೇ ಮೂರು ಮಂದಿ ಲಿಂಗಾಯತರಿಗೆ ಸಿಎಂ ಸ್ಥಾನ ನೀಡಲಾಗಿದೆ. ಯಡಿಯೂರಪ್ಪ ಅವರಿಗೆ ನಾಲ್ಕು ಬಾರಿ ಸಿಎಂ ಸ್ಥಾನ ನೀಡಲಾಗಿದೆ ಎಂದರು.

ಪಕ್ಷದ ಅಧ್ಯಕ್ಷ ಸ್ಥಾನ, ವಿರೋಧ ಪಕ್ಷದ ಸ್ಥಾನವನ್ನು ಲಿಂಗಾಯತರಿಗೆ ನೀಡಲಾಗಿದೆ. ಬಿ.ಬಿ.ಶಿವಪ್ಪರಿಂದ ಹಿಡಿದು ಯಡಿಯೂರಪ್ಪರವರೆಗೆ ಲಿಂಗಾಯತರು ಪಕ್ಷ ಕಟ್ಟಿದ್ದಾರೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ವಿರುದ್ದ ಯಾರನ್ನು ಅಭ್ಯರ್ಥಿ ‌ಮಾಡುತ್ತಾರೆ ಎಂಬುದು ಮುಖ್ಯ ಅಲ್ಲ. ಆ ಕ್ಷೇತ್ರದಲ್ಲಿ ‌ಬೊಮ್ಮಾಯಿ ಅವರು ಮತ್ತೊಮ್ಮೆ ಗೆಲುವು ಸಾಧಿಸುತ್ತಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಜಗದೀಶ್ ಶೆಟ್ಟರ್ ಅವರು ನಮ್ಮ ಪಕ್ಷದ ಹಿರಿಯ ‌ನಾಯಕರಾಗಿದ್ದರು. ಬಹಳ ವರ್ಷಗಳಿಂದ ಪಕ್ಷ ಕಟ್ಟಲು ಶ್ರಮ ಪಟ್ಟಿದ್ದಾರೆ. ಅವರು ಈ ಎತ್ತರಕ್ಕೆ ಬೆಳೆಯಲು ಪಕ್ಷ ಮತ್ತು ಕಾರ್ಯಕರ್ತರು ಕಾರಣ. ಅವರಿಗೆ ಎಲ್ಲ ಹುದ್ದೆಗಳನ್ನು ಪಕ್ಷ ಕೊಟ್ಟಿತ್ತು. ಎಲ್ಲ ಗೌರವವನ್ನೂ ನೀಡಿತ್ತು. ಅವರು ಇಂದು ರಾಜ್ಯ ನಾಯಕರಾಗಲು ಬಿಜೆಪಿ ಕೊಡುಗೆ ಅಭೂತಪೂರ್ವವಾದದ್ದು ಎಂದರು.

ಶೆಟ್ಟರ್ ಅವರನ್ನು ಪಕ್ಷದಲ್ಲಿ ಉಳಿಸಿಕೊಳ್ಳಲು ಕೇಂದ್ರ ಸಚಿವರು ಮನೆಗೆ ಹೋಗಿ ಚರ್ಚೆ ನಡೆಸಿ, ಅವರ ಎಲ್ಲಾ ಬೇಡಿಕೆಗಳನ್ನು ಈಡೇರಿಸುವುದಾಗಿಯೂ ಹೇಳಿದರು. ಹೀಗಿದ್ದರೂ ಹಠದಿಂದ ಪಕ್ಷ ಬಿಟ್ಟು ಹೋಗಿದ್ದಾರೆ. ಇದು ಅವರ ವೈಯಕ್ತಿಕ. ಮುಂದೆ ಕಾಂಗ್ರೆಸ್​ನಲ್ಲಿ ಅವರ ಪರಿಸ್ಥಿತಿ ಏನು ಎಂದು ಗೊತ್ತಾಗಲಿದೆ ಎಂದು ಹೇಳಿದರು.

ಯಾರೇ ಪಕ್ಷ ಬಿಟ್ಟರೂ ನಾವು ಧೃತಿಗೆಡುವುದಿಲ್ಲ- ಯಡಿಯೂರಪ್ಪ: ಮತ್ತೊಂದೆಡೆ, ಬೆಂಗಳೂರಿನ ಮಲ್ಲೇಶ್ವರದಲ್ಲಿರುವ ರಾಜ್ಯ ಬಿಜೆಪಿ ಕಚೇರಿಯಲ್ಲಿ ಬಿಜೆಪಿಯ ಸಂಸದೀಯ ಮಂಡಳಿ ಸದಸ್ಯ ಬಿ.ಎಸ್.ಯಡಿಯೂರಪ್ಪ ಮಾತನಾಡಿ, ಯಾರೇ ಪಕ್ಷ ಬಿಟ್ಟರೂ, ಎಲ್ಲಿಗೇ ಹೋದರೂ ನಾವು ಧೃತಿಗೆಡುವುದಿಲ್ಲ. ಈ ಬಾರಿ ರಾಜ್ಯದಲ್ಲಿ ಬಿಜೆಪಿ ಸರ್ಕಾರವೇ ಮತ್ತೊಮ್ಮೆ ರಚನೆಯಾಗಲಿದೆ ಎಂದು ಹೇಳಿದರು. ರಾಜ್ಯದಲ್ಲಿ ನಮ್ಮ ಪರವಾದ ವಾತಾವರಣ ಇದೆ. ಯಾರೇ ಪಕ್ಷ ಬಿಡಲಿ, ಬೇರೆ ಕಡೆ ಹೋಗಲಿ ನಾವಂತೂ ಸರ್ಕಾರ ರಚನೆ ಮಾಡುವುದು ನಿಶ್ಚಿತ, ಪಕ್ಷ ತೊರೆಯುತ್ತಿರುವವರಿಂದಾಗಿ ನಾವು ಧೃತಿಗೆಡುವ ಪ್ರಶ್ನೆಯೇ ಇಲ್ಲ. ನಾಳೆ ನಾಡಿದ್ದಿನಿಂದ ನಮ್ಮ ಪ್ರವಾಸವೂ ಆರಂಭವಾಗುತ್ತದೆ ಎಂದರು.

ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ನಾಳೆ ಹುಬ್ಬಳ್ಳಿಗೆ ಬರುತ್ತಾರೆ, ರಾಷ್ಟ್ರೀಯ ನಾಯಕರು ಓಡಾಡಿದ ಮೇಲೆ ವಾತಾವರಣ ನೂರಕ್ಕೆ ನೂರು ನಮ್ಮ ಪರವಾಗುತ್ತದೆ, ಎರಡು ಮೂರು ದಿನ ಬಿಟ್ಟು ನಾನೂ ಹುಬ್ಬಳ್ಳಿಗೆ ಹೋಗುತ್ತೇನೆ ಪಕ್ಷದ ಪರ ಪ್ರಚಾರ ನಡೆಸುತ್ತೇನೆ. ಎರಡು ಮೂರು ದಿನಗಳಲ್ಲಿ ಪ್ರಧಾನಿ ನರೇಂದ್ರ ಮೋದಿ ಮತ್ತು ಕೇಂದ್ರ ಗೃಹ ಸಚಿವ ಅಮಿತ್ ಶಾ ರಾಜ್ಯ ಪ್ರವಾಸಕ್ಕೆ ಬರುತ್ತಾರೆ ಎಂದು ತಿಳಿಸಿದರು.

ಇನ್ನೆರಡು ಕ್ಷೇತ್ರದ ಹೆಸರು ಸದ್ಯದಲ್ಲೇ ಪ್ರಕಟ: ಇಂದು ಬಿಜೆಪಿ ಹೈಕಮಾಂಡ್ ಅಭ್ಯರ್ಥಿಗಳ ಮೂರನೇ ಪಟ್ಟಿ ಪ್ರಕಟಿಸಿದೆ. 12 ಕ್ಷೇತ್ರಗಳ ಅಭ್ಯರ್ಥಿಗಳು ಮಾತ್ರ ಬಾಕಿ ಇದ್ದು ಅದರಲ್ಲಿ 10 ಕ್ಷೇತ್ರಗಳಿಗೆ ಹೆಸರು ಪ್ರಕಟಿಸಿದೆ. ಇಬ್ಬರು ಮಹಿಳೆಯರಿಗೂ ಅವಕಾಶ ಮಾಡಿಕೊಟ್ಟಿದೆ. ಶಿವಮೊಗ್ಗ ಮತ್ತು ಮಾನ್ವಿ ಕ್ಷೇತ್ರಗಳ ಹೆಸರು ಘೋಷಣೆ ಮಾತ್ರ ಬಾಕಿ ಇದ್ದು, ಶೀಘ್ರದಲ್ಲೇ ಆ ಕ್ಷೇತ್ರಗಳಿಗೂ ಹೆಸರು ಪ್ರಕಟಗೊಳ್ಳಲಿದೆ ಎಂದು ಯಡಿಯೂರಪ್ಪ ತಿಳಿಸಿದರು.

ಇದನ್ನೂ ಓದಿ:ಹುಬ್ಬಳ್ಳಿ-ಧಾರವಾಡ ಸೆಂಟ್ರಲ್‌ ಕ್ಷೇತ್ರದಲ್ಲಿ ಗುರು-ಶಿಷ್ಯರ ಹೋರಾಟ: ಗೆಲುವು ಶೆಟ್ಟರ್‌ಗೋ ಟೆಂಗಿನಕಾಯಿಗೋ?

Last Updated : Apr 17, 2023, 10:57 PM IST

TAGGED:

ETV Bharat Logo

Copyright © 2024 Ushodaya Enterprises Pvt. Ltd., All Rights Reserved.