ETV Bharat / state

ರಾಹುಲ್ ಗಾಂಧಿ ಹಾದಿಯಲ್ಲಿ ಸಿದ್ದರಾಮಯ್ಯ: ಕಟೀಲ್ ಲೇವಡಿ

ಮುಖ್ಯಮಂತ್ರಿ ಬಿ.ಎಸ್​.ಯಡಿಯೂರಪ್ಪನವರು ಮಾಡಿರುವ ಘೋಷಣೆಯನ್ನು ಕಾಂಗ್ರೆಸ್​ ಮುಖಂಡರು ಸ್ವಾಗತ ಮಾಡಬೇಕಿತ್ತು. ಆದರೆ ರಾಜಕಾರಣ ಮಾಡಿ ಮೊಸರಿನಲ್ಲಿ ಕಲ್ಲು ಹುಡುಕುವ ಕೆಲಸ ಮಾಡುತ್ತಿದ್ದಾರೆ ಎಂದು ಕೈ ನಾಯಕರ ವಿರುದ್ಧ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ವಾಗ್ದಾಳಿ ನಡೆಸಿದರು.

Nalin Kumar Kateel reaction about Ex CM Siddaramaiah statement
ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್
author img

By

Published : May 7, 2020, 4:52 PM IST

ಮಂಗಳೂರು: ಮುಖ್ಯಮಂತ್ರಿ ಯಡಿಯೂರಪ್ಪನವರು ರಾಜ್ಯದ ರೈತರಿಗೆ ಘೋಷಣೆ ಮಾಡಿರುವ ಯೋಜನೆ ಟೀಕಿಸಿರುವ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಹೇಳಿಕೆ ರಾಹುಲ್ ಗಾಂಧಿ ಅವರ ಬಟಾಟೆಯಲ್ಲಿ ಚಿನ್ನ ಮಾಡುವ ಹೇಳಿಕೆಯಂತಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಲೇವಡಿ ಮಾಡಿದ್ದಾರೆ.

ಮಂಗಳೂರಿನಲ್ಲಿ ‌ಮಾತನಾಡಿದ ಅವರು, ಮುಖ್ಯಮಂತ್ರಿಗಳ ಘೋಷಣೆಯ ವಿರುದ್ಧ ಸಿದ್ದರಾಮಯ್ಯನವರು ಒಂದು ಎಕರೆ ಹೂವು ಬೆಳೆಯಲು 50 ಲಕ್ಷ ರೂ. ಖರ್ಚು ಆಗುತ್ತದೆ ಎಂದು ಹೇಳಿದ್ದಾರೆ. ರಾಹುಲ್ ಗಾಂಧಿ ಬಟಾಟೆಯಲ್ಲಿ ಚಿನ್ನ ತೆಗೆದಂತೆ ಸಿದ್ದರಾಮಯ್ಯ ಹೂವಿನಲ್ಲಿ‌ ಚಿನ್ನ ತೆಗೆಯುವ ಕೆಲಸ ಮಾಡಿದ್ದಾರೆ. ಮುಖ್ಯಮಂತ್ರಿಯಾಗಿ, ವಿತ್ತ ಸಚಿವರಾಗಿ ಹತ್ತಾರು ಬಾರಿ ಬಜೆಟ್ ಮಂಡನೆ ಮಾಡಿರುವ ಸಿದ್ದರಾಮಯ್ಯನವರಿಗೆ ಒಂದು ಎಕರೆ ಹೂವು ಬೆಳೆಯಲು ಎಷ್ಟು ಖರ್ಚು ತಗುಲುತ್ತದೆ ಎಂಬ ಸಾಮಾನ್ಯ ಜ್ಞಾನವೂ ಸಹ ಇಲ್ಲ ಎಂದು ಟೀಕಿಸಿದ್ದಾರೆ.

ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್

ಜನರು ಕಣ್ಣೀರಿಡುವ ಇಂತಹ ಕಷ್ಟದ ಸಮಯದಲ್ಲಿ ಟೀಕೆ ಮಾಡುವುದೇ ನಮ್ಮ ಗುರಿ ಎಂದು ತಿಳಿದುಕೊಂಡು ರಾಜಕೀಯ ಮಾಡುವ ಹೇಯ ಕೃತ್ಯವನ್ನು ಸಿದ್ದರಾಮಯ್ಯ ಮಾಡುತ್ತಿದ್ದಾರೆ. ಯಡಿಯೂರಪ್ಪನವರು ಮಾಡಿರುವ ಘೋಷಣೆಯನ್ನು ಸ್ವಾಗತ ಮಾಡಬೇಕಿತ್ತು. ಆದರೆ ರಾಜಕಾರಣ ಮಾಡಿ ಮೊಸರಿನಲ್ಲಿ ಕಲ್ಲು ಹುಡುಕುವ ಕೆಲಸ ಮಾಡುತ್ತಿದ್ದಾರೆಂದು ಕೈ ನಾಯಕರ ವಿರುದ್ಧ ವಾಗ್ದಾಳಿ ನಡೆಸಿದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.