ETV Bharat / state

ಆಕ್ಸಿಜನ್ ಕೊರತೆಯಾಗದಂತೆ ಕೈಗಾರಿಕೆಗಳ ನೆರವಿಗೆ ನಳಿನ್​ ಕುಮಾರ್ ಕಟೀಲ್ ಸೂಚನೆ

author img

By

Published : Apr 29, 2021, 4:05 AM IST

ದೇಶದಲ್ಲಿ ಹಿಂದೆಂದೂ ಕಾಣದಂತ ಸಾಂಕ್ರಾಮಿಕ ರೋಗ ವ್ಯಾಪಕವಾಗಿ ಹರಡುವುದರೊಂದಿಗೆ ಸಂಕಷ್ಟದ ಪರಿಸ್ಥಿತಿಯಲ್ಲಿ ನಾವಿದ್ದೇವೆ. ಕೊರೊನಾ ಸೋಂಕು ದಿನೆ ದಿನೇ ಹೆಚ್ಚಾಗತೊಡಗಿದ್ದು, ಸೋಂಕಿತರನ್ನು ಉಳಿಸಿಕೊಳ್ಳುವುದು ಸರ್ಕಾರ ಮತ್ತು ವೈದ್ಯರಿಗೆ ದೊಡ್ಡ ಸವಾಲಾಗಿದೆ ಎಂದು ಸಂಸದ ನಳಿನ್​ ಕುಮಾರ್ ಕಟೀಲ್ ಹೇಳಿದರು.

Nalin Kumar Kateel instructs industries
ಆಕ್ಸಿಜನ್ ಕೊರತೆಯಾಗದಂತೆ ಕೈಗಾರಿಕೆಗಳ ನೆರವಿಗೆ ನಳಿನ್​ ಕುಮಾರ್ ಕಟೀಲ್ ಸೂಚನೆ

ಮಂಗಳೂರು: ಕೊರೊನಾ ಸೋಂಕಿತರಿಗೆ ಚಿಕಿತ್ಸೆ ಒದಗಿಸಲು ಆಕ್ಸಿಜನ್ ಘಟಕಗಳ ನಿರ್ಮಾಣ, ಸಿಲೆಂಡರ್ ಸೇರಿದಂತೆ ಮತ್ತಿತರ ಅತ್ಯಗತ್ಯ ವೈದ್ಯಕೀಯ ನೆರವು ನೀಡುವಂತೆ ಸಂಸದ ನಳಿನ್​ ಕುಮಾರ್ ಕಟೀಲ್ ದಕ್ಷಿಣ ಕನ್ನಡ ಜಿಲ್ಲೆಯಲ್ಲಿರುವ ಸರ್ಕಾರಿ ಸಹಭಾಗಿತದ್ವದ ಕಂಪನಿಗಳಿಗೆ ಹಾಗೂ ಖಾಸಗಿ ಕಂಪನಿಗಳಿಗೆ ಸೂಚನೆ ನೀಡಿದರು.

ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ ಕೊರೊನಾ ನಿಯಂತ್ರಣ ಹಾಗೂ ಚಿಕಿತ್ಸೆ ನಿರ್ವಹಣೆ ಕುರಿತು ನಡೆದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ದೇಶದಲ್ಲಿ ಹಿಂದೆಂದೂ ಕಾಣದಂತ ಸಾಂಕ್ರಾಮಿಕ ರೋಗ ವ್ಯಾಪಕವಾಗಿ ಹರಡುವುದರೊಂದಿಗೆ ಸಂಕಷ್ಟದ ಪರಿಸ್ಥಿತಿಯಲ್ಲಿ ನಾವಿದ್ದೇವೆ. ಕೊರೊನಾ ಸೋಂಕು ದಿನೆ ದಿನೇ ಹೆಚ್ಚಾಗತೊಡಗಿದ್ದು, ಸೋಂಕಿತರನ್ನು ಉಳಿಸಿಕೊಳ್ಳುವುದು ಸರ್ಕಾರ ಮತ್ತು ವೈದ್ಯರಿಗೆ ದೊಡ್ಡ ಸವಾಲಾಗಿದೆ. ಇಂತಹ ಸಂಕಷ್ಟ ಪರಿಸ್ಥಿತಿಯಲ್ಲಿ ಸರ್ಕಾರಿ ಸಹಭಾಗಿತ್ವದ ಕಂಪೆನಿಗಳು ಹಾಗೂ ಖಾಸಗಿ ಕಂಪನಿಗಳು ಸರ್ಕಾರಕ್ಕೆ ನೆರವಿನ ಹಸ್ತ ಚಾಚಬೇಕು ಎಂದು ಮನವಿ ಮಾಡಿದರು.

ಜಿಲ್ಲೆಯಲ್ಲಿ ಮುಂದಿನ ದಿನಗಳಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚಾಗುವ ಸಾಧ್ಯತೆಗಳಿದ್ದು, ಅವರುಗಳಿಗೆ ಉತ್ತಮ ಚಿಕತ್ಸೆ ನೀಡಲು ಅತ್ಯಗತ್ಯವಿರುವ ಆಕ್ಸಿಜನ್, ಬೆಡ್ ಗಳನ್ನು ಹೆಚ್ಚು ಕಾಯ್ದಿರಿಸಿಕೊಳ್ಳುವುದರೊಂದಿಗೆ ಅವರುಗಳಿಗೆ ಉತ್ತಮ ಚಿಕಿತ್ಸೆ ನೀಡಲು ಜಿಲ್ಲಾಡಳಿತ ಮುಂದಾಗಬೆಕು ಎಂದಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.