ETV Bharat / state

ಬಿಟ್ಟಿ ಭಾಗ್ಯ ಕೊಡಲಾಗದ ಕಾಂಗ್ರೆಸ್​ ಸರಕಾರ ಕೇಂದ್ರದ ಮೇಲೆ ಗೂಬೆ ಕೂರಿಸುತ್ತಿದೆ: ನಳೀನ್ ಕುಮಾರ್​ ಕಟೀಲ್​ - ಈಟಿವಿ ಭಾರತ್​ ಕನ್ನಡ ನ್ಯೂಸ್

ಕಾಂಗ್ರೆಸ್ ಘೋಷಣೆ ಮಾಡಿದ್ದ ಗ್ಯಾರಂಟಿಗಳನ್ನು ಕೊಡುವ ವ್ಯವಸ್ಥೆ ಮಾಡುತ್ತಿಲ್ಲ ಎಂದು ನಳೀನ್ ಕುಮಾರ್​ ಕಟೀಲ್​ ಟೀಕಿಸಿದರು.

ನಳೀನ್ ಕುಮಾರ್​ ಕಟೀಲ್​
ನಳೀನ್ ಕುಮಾರ್​ ಕಟೀಲ್​
author img

By

Published : Jun 21, 2023, 10:56 PM IST

ಮಂಗಳೂರಿನಲ್ಲಿ ನಳೀನ್ ಕುಮಾರ್​ ಕಟೀಲ್ ಪ್ರತಿಕ್ರಿಯೆ

ಮಂಗಳೂರು (ದಕ್ಷಿಣ ಕನ್ನಡ) : ವಿಧಾನಸಭಾ ಚುನಾವಣೆಯ ಪೂರ್ವದಲ್ಲಿ ಕಾಂಗ್ರೆಸ್ ಪಕ್ಷ ಬಿಟ್ಟಿ ಭಾಗ್ಯ ಘೋಷಣೆ ಮಾಡಿತ್ತು. ಇದೀಗ ಅದನ್ನು ಕೊಡುವ ವ್ಯವಸ್ಥೆ ಮಾಡುತ್ತಿಲ್ಲ. ಆದ್ದರಿಂದ ಕೇಂದ್ರ ಸರ್ಕಾರದ ಮೇಲೆ ಗೂಬೆ ಕೂರಿಸುವ ಕೆಲಸ ಮಾಡುತ್ತಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲು ಆರೋಪಿಸಿದರು.

ಮಂಗಳೂರಿನಲ್ಲಿಂದು ಮಾತನಾಡಿದ ಅವರು, ಚುನಾವಣೆ ವೇಳೆ ಪ್ರಣಾಳಿಕೆಯಲ್ಲಿ 10 ಕೆಜಿ ಅಕ್ಕಿ ಕೊಡುತ್ತೇವೆ ಎಂದಿರುವ ಕಾಂಗ್ರೆಸ್ ಇಂದು ಅಕ್ಕಿ ಕೊಡುವಲ್ಲಿ ವಿಫಲವಾಗಿದೆ. ಹಾಗಾದರೆ ಅಂದು ಕೇಂದ್ರ ಸರ್ಕಾರ ಕೊಟ್ಟಲ್ಲಿ ಮಾತ್ರ ಕೊಡುತ್ತೇವೆ ಎಂದು ಹೇಳಿದ್ರಾ?. ಕೇಂದ್ರ ಸರ್ಕಾರ 5 ಕೆಜಿ ಅಕ್ಕಿ ಕೊಡುತ್ತಿದೆ. ಕೋವಿಡ್ ಬಂದಾಗಿನಿಂದಲೂ ಕೊಡುತ್ತಿದೆ. ಆದರೆ ಎರಡು ಲಕ್ಷ ಟನ್ ಅಕ್ಕಿಗೆ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರಲ್ಲಿ ಯಾರೂ ಬೇಡಿಕೆಯಿಟ್ಟಿಲ್ಲ. ಸುಮ್ಮನೆ ಪ್ರಚಾರ ಮತ್ತು ರಾಜಕಾರಣ ಮಾಡಲು ಹೇಳಿಕೆ ಕೊಡುತ್ತಿದ್ದಾರೆ.‌ ಅವರ ಭರವಸೆಯಂತೆ ಅಕ್ಕಿ ಕೊಡಲು ಆಗದ್ದಕ್ಕೆ ಕಾಂಗ್ರೆಸ್ ವಿರುದ್ಧವೇ ಪ್ರತಿಭಟನೆ ಮಾಡುತ್ತಿದ್ದಾರೆ. ಆದ್ದರಿಂದ ಪ್ರತಿಭಟನೆ ಮೂರ್ಖತನದ ಪರಮಾವಧಿ ಎಂದು ಕಿಡಿಕಾರಿದರು.

ಇದನ್ನೂ ಓದಿ : ಬಡವರ ಅಕ್ಕಿ ವಿತರಣೆಯಲ್ಲಿ ಕೇಂದ್ರ ಸರ್ಕಾರ ರಾಜಕಾರಣ ಮಾಡಬಾರದು: ಸಚಿವ ಆರ್.ಬಿ.ತಿಮ್ಮಾಪೂರ

ಕಳೆದ ಎರಡು ದಿನಗಳಿಂದ ಸಚಿವ ಸತೀಶ್​ ಜಾರಕಿಹೊಳಿ ಕೇಂದ್ರ ಸರ್ಕಾರ ಸರ್ವರ್​ ಹ್ಯಾಕ್ ಮಾಡಿದೆ ಎಂಬ ಆರೋಪಕ್ಕೆ ಉತ್ತರಿಸಿದ ನಳೀನ್​ ಕುಮಾರ್​, ಕೇಂದ್ರ ಸರ್ಕಾರ ಇಂಥ ಕೆಲಸ ಮಾಡುವುದಿಲ್ಲ. ಇದು ಕಾಂಗ್ರೆಸ್ ವಿಫಲತೆ. ಇವರ ಸರ್ಕಾರ ಹ್ಯಾಕ್ ಮಾಡುತ್ತಾ?. ಬಿಜೆಪಿ ಕೈಯಲ್ಲಿರುವ ಪಾಲಿಕೆ ಹಾಗೂ ಬೇರೆ ಆಡಳಿತದಲ್ಲಿ ಇವರಿಗೆ ಹ್ಯಾಕ್ ಮಾಡಲು ಆಗುತ್ತದೆಯೇ?. ಆರೋಪ ಎಲ್ಲರೂ ಮಾಡಬಹುದು. ಇವರಿಗೆ ನೈತಿಕತೆ ಇಲ್ಲ. ನೈತಿಕತೆ ಇದ್ದಲ್ಲಿ ಜನರಿಗೆ 10 ಕೆಜಿ ಅಕ್ಕಿ ಕೊಡಲಿ. ಕೇಂದ್ರ ಸರ್ಕಾರ ಯಾವುದೇ ಅಕ್ಕಿ ಕಡಿತ ಮಾಡಿಲ್ಲ. ಕಾಂಗ್ರೆಸ್ ಸುಮ್ಮನೆ ಚಿಲ್ಲರೆ ರಾಜಕಾರಣ ಮಾಡುತ್ತಿದೆ ಎಂದರು.

ಇದನ್ನೂ ಓದಿ : ಸರ್ವರ್ ಹ್ಯಾಕ್ ವಿಚಾರ ರಾಜಕೀಯ ಉದ್ದೇಶದಿಂದ ಹೇಳಿದ್ದು: ಸತೀಶ್ ಜಾರಕಿಹೊಳಿ ಸ್ಪಷ್ಟನೆ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.