ETV Bharat / state

ಮಂಗಳೂರಿನಲ್ಲಿ ವಿಶೇಷ ನಾಗರಪಂಚಮಿ.. ಕಲ್ಲನಾಗರ ಬದಲು ರೋಗಿಗಳ ಹೊಟ್ಟೆ ಸೇರಿದ ಹಾಲು! - ಬೆಳ್ತಂಗಡಿ ಸರ್ಕಾರಿ ಆಸ್ಪತ್ರೆ

ನಾಗರ ಪಂಚಮಿ ಅಂದ್ರೇ ಭಕ್ತರಿಗೆ ಎಲ್ಲಿಲ್ಲದ ಸಂತೋಷ. ಅಷ್ಟೇ ಅಲ್ಲ, ಈ ಹಬ್ಬವನ್ನ ಕಲ್ಲಿಗೆ ಅನಗತ್ಯ ಹಾಲು ಎರೆಯುವ ಮೂಲಕ ಆಚರಿಸುವುದು ಸಂಪ್ರದಾಯ. ಆದರೆ, ಈ ಮೂಢನಂಬಿಕೆ ವಿರುದ್ಧ ಬೆಳ್ತಂಗಡಿ ಸರ್ಕಾರಿ ಆಸ್ಪತ್ರೆಯಲ್ಲಿ ರೋಗಿಗಳಿಗೆ ಉಚಿತ ಹಾಲು ವಿತರಣಾ ಕಾರ್ಯಕ್ರಮ ನಡೆಸಲಾಯ್ತು.

ಮಂಗಳೂರಿನಲ್ಲಿ ನಡೆಯಿತು ವಿಶೇಷ ನಾಗರಪಂಚಮಿ
author img

By

Published : Aug 5, 2019, 5:32 PM IST

ಮಂಗಳೂರು: ನಾಗರ ಪಂಚಮಿ ಪ್ರಯುಕ್ತ ಕಲ್ಲಿಗೆ ಹಾಲೆರೆಯುವ ಮೂಢನಂಬಿಕೆಯನ್ನು ವಿರೋಧಿಸಿ ಬೆಳ್ತಂಗಡಿ ಸರ್ಕಾರಿ ಆಸ್ಪತ್ರೆಯಲ್ಲಿ ರೋಗಿಗಳಿಗೆ ಉಚಿತ ಹಾಲು ವಿತರಣಾ ಕಾರ್ಯಕ್ರಮ ಇಂದು ನಡೆದಿದೆ.

ದಕ್ಷಿಣ ಕನ್ನಡ ಜಿಲ್ಲಾ ಸಹಕಾರಿ ಆಸ್ಪತ್ರೆ, ವೈದ್ಯಕೀಯ ಶಿಕ್ಷಣ ಹಾಗೂ ಸಂಶೋಧನಾ ಸಂಘ ಹಾಗೂ ಸಂಗಾತಿ ಎಕೆಜಿ ಬೀಡಿ ಕಾರ್ಮಿಕರ ಗೃಹ ನಿರ್ಮಾಣ ಸಹಕಾರಿ ಸಂಘ ಇದರ ಜಂಟಿ ನೇತೃತ್ವದಲ್ಲಿ ಈ ಮೂಢನಂಬಿಕೆ ವಿರೋಧಿ ಕಾರ್ಯಕ್ರಮ ನಡೆಯಿತು.

nagarapanchami
ಮಂಗಳೂರಿನಲ್ಲಿ ನಡೆಯಿತು ವಿಶೇಷ ನಾಗರಪಂಚಮಿ..

ಅಧ್ಯಾಪಕಿ ಆಶಾ ಸುಜೀತ್ ಮಾತನಾಡಿ, ನಂಬಿಕೆಯ ಹೆಸರಿನಲ್ಲಿ ಹಾಲು ಕುಡಿಯದ ಹಾವಿನ ಹೆಸರಿನಲ್ಲಿ ಲಕ್ಷಾಂತರ ಲೀಟರ್ ಹಾಲನ್ನು ಕಲ್ಲಿಗೆ ಸುರಿಯುವ ಬದಲಾಗಿ, ಅಪೌಷ್ಟಿಕತೆಯಿಂದ ಬಳಲುತ್ತಿರುವ ರೋಗಿಗಳಿಗೆ ನೀಡುವುದು ಉತ್ತಮ ಎಂದರು.

ಹಾವು ಎಂದಿಗೂ ಹಾಲು ಕುಡಿಯುವುದಿಲ್ಲ. ಇಲಿ, ಹುಳ, ಗೆದ್ದಲುಗಳೇ ಹಾವಿನ ಆಹಾರ. ಆದರೆ, ನಂಬಿಕೆಯ ಹೆಸರಿನಲ್ಲಿ ನಾಗರ ಪಂಚಮಿ ದಿನ ಲಕ್ಷಾಂತರ ಲೀಟರ್ ಹಾಲನ್ನು ಕಲ್ಲಿಗೆ ಸುರಿದು ಪೋಲು ಮಾಡುತ್ತಿದ್ದಾರೆ. ಅದೆಷ್ಟೋ ಮಕ್ಕಳು ಹಾಲು ಸಿಗದೆ ಅಪೌಷ್ಟಿಕತೆಯಿಂದ ಬಳಲುತ್ತಿವೆ. ಇಂತಹ ಪರಿಸ್ಥಿತಿಯಲ್ಲಿ ರೋಗಿಗಳಿಗೆ ಹಾಲು ವಿತರಿಸುವ ಕಾರ್ಯ ಶ್ಲಾಘನೀಯ. ಈ ಕಾರ್ಯಕ್ರಮ ಎಲ್ಲರಿಗೂ ಮಾದರಿಯಾಗಲಿ ಎಂದರು.

ಈ ಸಂದರ್ಭದಲ್ಲಿ ಆಸ್ಪತ್ರೆಯ ಆಡಳಿತ ವೈದ್ಯಾಧಿಕಾರಿ ಡಾ.ವಿದ್ಯಾವತಿ, ಡಾ.ಆದಂ, ಡಾ.ಚಂದ್ರಕಾಂತ್, ಸಂಗಾತಿ ಎಕೆಜಿ ಬೀ.ಕಾ.ಗೃ.ನಿ.ಸಹಕಾರಿ ಸಂಘ ಅಧ್ಯಕ್ಷ ಹರಿದಾಸ್ ಎಸ್. ಎಂ, ಜಿಲ್ಲಾ ಸಹಕಾರಿ ಆಸ್ಪತ್ರೆ, ವೈದ್ಯಕೀಯ ಶಿಕ್ಷಣ ಹಾಗೂ ಸಂಶೋಧನಾ ಸಂಘ ನಿರ್ದೇಶಕ ಶಿವಕುಮಾರ್ ಎಸ್.ಎಂ, ಸುಕನ್ಯಾ ಹೆಚ್. ಸದಸ್ಯರಾದ ಸುಜೀತ್ ಅತ್ತಾಜೆ, ಪದ್ಮಾವತಿ, ಕುಸುಮಾ, ಕೃಷ್ಣಪ್ಪ, ಚೇತನ್, ಸುಧಾ.ಕೆ ರಾವ್ ಮೊದಲಾದವರು ಉಪಸ್ಥಿತರಿದ್ದರು.

Intro:ಮಂಗಳೂರು: ನಾಗರ ಪಂಚಮಿ ಪ್ರಯುಕ್ತ ಕಲ್ಲಿಗೆ ಹಾಲರೆಯುವ ಮೂಢನಂಬಿಕೆಯನ್ನು ವಿರೋಧಿಸಿ ಬೆಳ್ತಂಗಡಿ ಸರಕಾರಿ ಆಸ್ಪತ್ರೆಯಲ್ಲಿ ರೋಗಿಗಳಿಗೆ ಉಚಿತ ಹಾಲು ವಿತರಣಾ ಕಾರ್ಯಕ್ರಮ ಇಂದು ನಡೆಯಿತು.

ದ.ಕ.ಜಿಲ್ಲಾ ಸಹಕಾರಿ ಆಸ್ಪತ್ರೆ, ವೈದ್ಯಕೀಯ ಶಿಕ್ಷಣ ಹಾಗೂ ಸಂಶೋಧನಾ ಸಂಘಹಾಗೂ ಸಂಗಾತಿ ಎಕೆಜಿ ಬೀಡಿ ಕಾರ್ಮಿಕರ ಗೃಹ ನಿರ್ಮಾಣ ಸಹಕಾರಿ ಸಂಘ ಇದರ ಜಂಟಿ ನೇತೃತ್ವದಲ್ಲಿ ಈ ಮೂಢನಂಬಿಕೆ ವಿರೋಧಿ ಕಾರ್ಯಕ್ರಮ ನಡೆಯಿತು.

ಅಧ್ಯಾಪಕಿ ಆಶಾ ಸುಜೀತ್ ಮಾತನಾಡಿ, ನಂಬಿಕೆಯ ಹೆಸರಿನಲ್ಲಿ ಹಾಲು ಕುಡಿಯದ ಹಾವಿನ ಹೆಸರಿನಲ್ಲಿ ಲಕ್ಷಾಂತರ ಲೀಟರ್ ಹಾಲನ್ನು ಕಲ್ಲಿಗೆ ಸುರಿಯುವ ಬದಲಾಗಿ ಅಪೌಷ್ಟಿಕತೆಯಿಂದ ಬಳಲುತ್ತಿರುವ ರೋಗಿಗಳಿಗೆ ನೀಡುವುದು ಉತ್ತಮ ಎಂದು ಹೇಳಿದರು.

Body:ಹಾವು ಎಂದಿಗೂ ಹಾಲು ಕುಡಿಯುವುದಿಲ್ಲ. ಇಲಿ, ಹುಳ, ಗೆದ್ದಲುಗಳೇ ಹಾವಿನ ಆಹಾರ. ಆದರೆ ನಾಗರಿಕ ಸಮಾಜ ನಂಬಿಕೆಯ ಹೆಸರಿನಲ್ಲಿ ನಾಗರ ಪಂಚಮಿ ದಿನ ಲಕ್ಷಾಂತರ ಲೀಟರ್ ಹಾಲನ್ನು ಕಲ್ಲಿಗೆ ಸುರಿದು ಪೋಲು ಮಾಡಲಾಗುತ್ತಿದ್ದಾರೆ. ಅದೆಷ್ಟೋ ಮಕ್ಕಳು ಹಾಲು ಸಿಗದೆ ಅಪೌಷ್ಟಿಕತೆಯಿಂದ ಬಳಲುತ್ತಿದ್ದಾರೆ. ಇಂತಹ ಪರಿಸ್ಥಿತಿಯಲ್ಲಿ ರೋಗಿಗಳಿಗೆ ಹಾಲು ವಿತರಿಸುವ ಕಾರ್ಯ ಶ್ಲಾಘನೀಯ. ಈ ಕಾರ್ಯಕ್ರಮ ಎಲ್ಲರಿಗೂ ಮಾದರಿಯಾಗಲಿ ಎಂದು ಅವರು ಹೇಳಿದರು.

ಈ ಸಂದರ್ಭ ಆಸ್ಪತ್ರೆಯ ಆಡಳಿತ ವೈದ್ಯಾಧಿಕಾರಿ ಡಾ.ವಿದ್ಯಾವತಿ , ಡಾ.ಆದಂ , ಡಾ.ಚಂದ್ರಕಾಂತ್, ಸಂಗಾತಿ ಎಕೆಜಿ ಬೀ.ಕಾ.ಗೃ.ನಿ.ಸಹಕಾರಿ ಸಂಘ ಅಧ್ಯಕ್ಷ ಹರಿದಾಸ್ ಎಸ್. ಎಂ., ಜಿಲ್ಲಾ ಸಹಕಾರಿ ಆಸ್ಪತ್ರೆ , ವೈದ್ಯಕೀಯ ಶಿಕ್ಷಣ ಹಾಗೂ ಸಂಶೋಧನಾ ಸಂಘ ನಿರ್ದೇಶಕ ಶಿವಕುಮಾರ್ ಎಸ್.ಎಂ. ಸುಕನ್ಯಾ ಹೆಚ್., ಸದಸ್ಯರಾದ ಸುಜೀತ್ ಅತ್ತಾಜೆ, ಪದ್ಮಾವತಿ, ಕುಸುಮಾ, ಕೃಷ್ಣಪ್ಪ, ಚೇತನ್, ಸುಧಾ.ಕೆ ರಾವ್ ಮೊದಲಾದವರು ಉಪಸ್ಥಿತರಿದ್ದರು.

Reporter_Vishwanath Conclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.