ETV Bharat / state

ಸುರೇಂದ್ರ ಬಂಟ್ವಾಳ್ ಹತ್ಯೆ ಪ್ರಕರಣ: ತಂಡಗಳನ್ನು ರಚಿಸಿ ತನಿಖೆ ಚುರುಕುಗೊಳಿಸಿದ ಪೊಲೀಸ್​

ಹರಿತವಾದ ಆಯುಧದಿಂದ ತಲೆಗೆ ಹೊಡೆದು ಬಳಿಕ ದೇಹದ ಇತರ ಭಾಗಗಳಿಗೆ ಇರಿಯಲಾಗಿದೆ. ದಾಳಿಯ ತೀವ್ರತೆ ಎಷ್ಟಿತ್ತೆಂದರೆ, ದೇಹದ ಭಾಗಗಳು ಹೊರ ಬಂದಿದ್ದವು. ಸುರೇಂದ್ರ ಅವರಿಗೆ ಗೊತ್ತಿದ್ದವರೇ ಹತ್ಯೆ ಮಾಡಿರಬಹುದೇ ಅಥವಾ ವ್ಯಾವಹಾರಿಕ ದ್ವೇಷವೇನಾದರೂ ಇತ್ತೇ ಎಂಬ ನಿಟ್ಟಿನಲ್ಲಿ ತನಿಖೆ ಸಾಗಿದೆ.

s-p-laxmiprasad
ಎಸ್​​ಪಿ ಲಕ್ಷ್ಮೀಪ್ರಸಾದ್
author img

By

Published : Oct 21, 2020, 8:22 PM IST

Updated : Oct 22, 2020, 6:59 PM IST

ಬಂಟ್ವಾಳ: ನಗರದ ಅಪಾರ್ಟ್​ಮೆಂಟ್ ಒಂದರಲ್ಲಿ ಹತ್ಯೆಗೀಡಾದ ಚಲನಚಿತ್ರ ನಟ ಹಾಗೂ ಸ್ಥಳೀಯ ಪೊಲೀಸ್ ಠಾಣೆಯಲ್ಲಿ ರೌಡಿಶೀಟರ್ ಆಗಿದ್ದ ಸುರೇಂದ್ರ ಬಂಟ್ವಾಳ್ ಹಂತಕರ ಪತ್ತೆಗೆ ಪೊಲೀಸರು ವಿವಿಧ ತಂಡಗಳನ್ನು ರಚಿಸಿ ತನಿಖೆ ನಡೆಸಲಾಗುತ್ತಿದೆ ಎಂದು ಎಸ್​ಪಿ ಡಾ. ಲಕ್ಷ್ಮೀಪ್ರಸಾದ್ ಹೇಳಿದರು.

ಬಂಟ್ವಾಳ ಭಂಡಾರಿಬೆಟ್ಟುವಿನ ಅಪಾರ್ಟ್​ಮೆಂಟ್​ನಲ್ಲಿ ಹತ್ಯೆಗೀಡಾದ ಫ್ಲ್ಯಾಟ್​ಗೆ ಬುಧವಾರ ಸಂಜೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಬಳಿಕ ಡಿವೈಎಸ್​​ಪಿ ವೆಲಂಟೈನ್ ಡಿಸೋಜಾ, ಸಿಐ ನಾಗರಾಜ್, ಎಸ್​ಐಗಳಾದ ನಂದಕುಮಾರ್, ಪ್ರಸನ್ನ ಅವರಿಗೆ ವಿವಿಧ ಸೂಚನೆಗಳನ್ನು ನೀಡಿದರು.

ಸುದ್ದಿಗಾರರೊಂದಿಗೆ ಮಾತನಾಡಿದ ಎಸ್​​ಪಿ ಲಕ್ಷ್ಮೀಪ್ರಸಾದ್

ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ಘಟನೆ ರಾತ್ರಿ ನಡೆದಿರಬಹುದು ಎಂದು ಮೇಲ್ನೋಟಕ್ಕೆ ತಿಳಿದು ಬಂದಿದೆ. ಸಾಕ್ಷಿ ಆಧಾರಗಳ ಸಂಗ್ರಹ ನಡೆಯುತ್ತಿದೆ. ತಂಡಗಳನ್ನು ರಚಿಸಿ ತನಿಖೆ ತೀವ್ರಗತಿಯಲ್ಲಿ ನಡೆಸುತ್ತಿದ್ದೇವೆ. ಅವರು ಎಲ್ಲೆಲ್ಲಿ ವ್ಯವಹಾರ ಮಾಡುತ್ತಿದ್ದಾರೋ ಅದನ್ನು ಪರಿಶೀಲಿಸುತ್ತಿದ್ದೇವೆ. ಎಲ್ಲ ಆಯಾಮಗಳಲ್ಲೂ ತನಿಖೆ ನಡೆಸುತ್ತಿದ್ದೇವೆ ಎಂದರು.

ಹತ್ಯೆಯ ಕುರಿತು ಮಾತನಾಡಿ, ಹರಿತವಾದ ಆಯುಧದಿಂದ ತಲೆಗೆ ಹೊಡೆದು ಬಳಿಕ ದೇಹದ ಇತರ ಭಾಗಗಳಿಗೆ ಇರಿಯಲಾಗಿದೆ. ದಾಳಿಯ ತೀವ್ರತೆ ಎಷ್ಟಿತ್ತೆಂದರೆ, ದೇಹದ ಭಾಗಗಳು ಹೊರ ಬಂದಿದ್ದವು. ಸುರೇಂದ್ರ ಅವರಿಗೆ ಗೊತ್ತಿದ್ದವರೇ ಹತ್ಯೆ ಮಾಡಿರಬಹುದೇ ಅಥವಾ ವ್ಯಾವಹಾರಿಕ ದ್ವೇಷವೇನಾದರೂ ಇತ್ತೇ ಎಂಬ ನಿಟ್ಟಿನಲ್ಲಿ ತನಿಖೆ ಸಾಗಿದೆ.

ಸ್ಥಳೀಯವಾಗಿ ರೌಡಿಶೀಟರ್ ಆಗಿದ್ದ ಸುರೇಂದ್ರ, ಚಲನಚಿತ್ರ ನಟ, ಛಾಯಾಗ್ರಾಹಕ, ಗ್ರಾಫಿಕ್ ಡಿಸೈನರ್ ಆಗಿ ಗುರುತಿಸಿಕೊಂಡಿದ್ದರು. ಬಂಟ್ವಾಳದ ಭಂಡಾರಬೆಟ್ಟುವಿನಲ್ಲಿ ಖಾಸಗಿ ಅಪಾರ್ಟ್​ಮೆಂಟ್​ನಲ್ಲಿ ಕೆಲ ದಿನಗಳಿಂದ ವಾಸವಾಗಿದ್ದರು. ಕೆಲ ವರ್ಷಗಳ ಹಿಂದೆ ಹಿಂದು ಸಂಘಟನೆಯಲ್ಲಿ ಗುರುತಿಸಿಕೊಂಡಿದ್ದ ಅವರು ಬಂಟ್ವಾಳ ಪೊಲೀಸ್ ಠಾಣೆಯಲ್ಲಿ ರೌಡಿಶೀಟರ್ ಎಂದು ಗುರುತಿಸಿಕೊಂಡವರು. ವರ್ಷದ ಹಿಂದೆ ಬಂಟ್ವಾಳ ಪೇಟೆಯಲ್ಲಿ ತಲ್ವಾರ್ ಝಳಪಿಸಿ ಸುದ್ದಿಯಾಗಿದ್ದರು.

ಡಿವೈಎಸ್​​ಪಿ ವೆಲಂಟೈನ್ ಡಿಸೋಜಾ ನೇತೃತ್ವದಲ್ಲಿ ಸರ್ಕಲ್ ಇನ್ಸ್ ಪೆಕ್ಟರ್ ಟಿ.ಡಿ.ನಾಗರಾಜ್ ಮತ್ತು ಎಸ್​ಐ ಪ್ರಸನ್ನ, ರಾಜೇಶ್, ಕಲೈಮಾರ್, ಸಂಜೀವ ಮತ್ತು ಬಂಟ್ವಾಳ ನಗರ ಮತ್ತು ಗ್ರಾಮಾಂತರ ಠಾಣಾ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ದೇರಳಕಟ್ಟೆಯ ಖಾಸಗಿ ಆಸ್ಪತ್ರೆಗೆ ಕೊಂಡೊಯ್ಯಲಾಗಿದೆ. ಬಂಟ್ವಾಳ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Last Updated : Oct 22, 2020, 6:59 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.