ETV Bharat / state

ಸುರತ್ಕಲ್‌ ಟೋಲ್ ರದ್ದು- ಕಟೀಲ್; ಹಣ ಸಂಗ್ರಹ ಸ್ಥಗಿತಗೊಳ್ಳುವವರೆಗೂ ಹೋರಾಟ-ಮುನೀರ್ ಕಾಟಿಪಳ್ಳ - ಸುರತ್ಕಲ್ ಎ‌ನ್​​ಐಟಿಕೆ ಟೋಲ್ ಗೇಟ್

ಸುರತ್ಕಲ್​​‌ನ ಎನ್​​ಐಟಿಕೆ ಟೋಲ್ ಗೇಟ್ ರದ್ದಾಗಿರುವ ಬಗ್ಗೆ ಸಂಸದ ನಳಿನ್ ಕುಮಾರ್ ಕಟೀಲ್ ಟ್ವೀಟ್. ಅಧಿಕೃತ ಮಾಹಿತಿ ಹಾಗೂ ಟೋಲ್ ಗೇಟ್​​ನಲ್ಲಿ ಸಂಗ್ರಹ ನಿಲ್ಲುವವರೆಗೂ ಧರಣಿ ಮುಂದುವರಿಯಲಿದೆ- ಸುರತ್ಕಲ್ ಎ‌ನ್​​ಐಟಿಕೆ ಟೋಲ್ ಗೇಟ್ ಹೋರಾಟ ಸಮಿತಿ ಸಂಚಾಲಕ ಮುನೀರ್ ಕಾಟಿಪಳ್ಳ

Muneer Katipalla
ಮುನೀರ್ ಕಾಟಿಪಳ್ಳ
author img

By

Published : Nov 15, 2022, 9:27 AM IST

ಮಂಗಳೂರು: ಸುರತ್ಕಲ್​​‌ನ ಎನ್​​ಐಟಿಕೆ ಟೋಲ್ ಗೇಟ್ ರದ್ದಾಗಿರುವ ಬಗ್ಗೆ ಸಂಸದ ನಳಿನ್ ಕುಮಾರ್ ಕಟೀಲ್ ಟ್ವೀಟ್ ಮಾಡಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿರುವ ಟೋಲ್ ಗೇಟ್ ಹೋರಾಟ ಸಮಿತಿ ಸಂಚಾಲಕ ಮುನೀರ್ ಕಾಟಿಪಳ್ಳ, 'ಟೋಲ್ ಗೇಟ್ ರದ್ದು ಮಾಡುವ ಸರ್ಕಾರದ ಆದೇಶ ತುಳುನಾಡಿನ ಜನತೆಯ ಒಗ್ಗಟ್ಟಿನ ಹೋರಾಟದ ಫಲ. ಟೋಲ್ ಸಂಗ್ರಹ ಸ್ಥಗಿತಗೊಳ್ಳುವವರೆಗೆ ಧರಣಿ ಮುಂದುವರಿಸಲಾಗುತ್ತದೆ' ಎಂದು ತಿಳಿಸಿದ್ದಾರೆ.

ಸುರತ್ಕಲ್ ಟೋಲ್ ಗೆಲುವು ತುಳುವರ ಗೆಲುವು: ಮುನೀರ್ ಕಾಟಿಪಳ್ಳ

6 ವರ್ಷಗಳ ಸತತ ಹೋರಾಟದ ನಂತರ ಟೋಲ್ ಗೇಟ್ ಮುಚ್ಚಲು ಹೆದ್ದಾರಿ ಪ್ರಾಧಿಕಾರ ಆದೇಶ ಹೊರಡಿಸಿದೆ ಎಂದು ತಿಳಿದು ಬಂದಿದೆ. ಇದು ದ‌ಕ್ಷಿಣ ಕ‌ನ್ನಡ, ಉಡುಪಿ ಜಿಲ್ಲೆಯ ಸಮಸ್ತ ಜನತೆಯ ಒಗ್ಗಟ್ಟಿನ ಹೋರಾಟದ ಫಲ. ಜನತೆಯ ಅಖಂಡ ಬೆಂಬಲದೊಂದಿಗೆ ಹೋರಾಟ ಸಮಿತಿ ಕಳೆದ 3 ತಿಂಗಳಿಂದ ನಿರ್ಣಾಯಕ ಹೋರಾಟಗಳನ್ನು ಸಂಘಟಿಸಿತ್ತು. ಈ ಪ್ರಯತ್ನಗಳು ಇಂದು ಗೆಲುವಿನ ಸನಿಹಕ್ಕೆ ತಲುಪಿಸಿದೆ ಎಂದಿದ್ದಾರೆ.

ಇದನ್ನೂ ಓದಿ: ಬಹು ದಿನಗಳ ಹೋರಾಟದ ಬಳಿಕ ಸುರತ್ಕಲ್ ಟೋಲ್ ಗೇಟ್ ರದ್ದು: ನಳಿನ್ ಕುಮಾರ್ ಕಟೀಲ್ ಟ್ವೀಟ್

ETV Bharat Logo

Copyright © 2024 Ushodaya Enterprises Pvt. Ltd., All Rights Reserved.