ETV Bharat / state

ಜಾತಿವಾರು ಸಮೀಕ್ಷೆ ಬಳಿಕ ಸದನದಲ್ಲಿ ಚರ್ಚಿಸಿ ಕೇಂದ್ರಕ್ಕೆ ವರದಿ ನೀಡಲಿ : ಮುಖ್ಯಮಂತ್ರಿ ಚಂದ್ರು

ಇತ್ತೀಚೆಗೆ ಘೋಷಣೆ ಮಾಡಿರುವ ರಾಜ್ಯ ಬಜೆಟ್‌ನಲ್ಲಿ‌ ತಲಾ 500 ಕೋಟಿ ರೂ. ಹಣವನ್ನು ವೀರಶೈವ ಸಮುದಾಯ, ಒಕ್ಕಲಿಗ ಸಮುದಾಯಕ್ಕೆ, ಬ್ರಾಹ್ಮಣ ಸಮುದಾಯಕ್ಕೆ 50 ಕೋಟಿ ರೂ. ಹಣ ಮೀಸಲಿರಿಸಲಾಗಿದೆ..

author img

By

Published : Mar 13, 2021, 3:32 PM IST

mukyamantri chandru talk
ಮುಖ್ಯಮಂತ್ರಿ ಚಂದ್ರು

ಮಂಗಳೂರು : ರಾಜ್ಯ ಸರ್ಕಾರ ಪ್ರವರ್ಗ 2(ಎ) ಹಾಗೂ ಪ್ರವರ್ಗ 1ರ ಪಟ್ಟಿಯಲ್ಲಿರುವ ಅತಿ ಹಿಂದುಳಿದ ಸಮುದಾಯಗಳಿಗೆ ರಕ್ಷಣೆ ನೀಡಿ, ಜಾತಿವಾರು ಸಮೀಕ್ಷೆ ಬಿಡುಗಡೆ ಮಾಡಬೇಕು. ಅದನ್ನು ಸದನದಲ್ಲಿ ಚರ್ಚೆಗೆ ಬಿಟ್ಟು ಆ ಬಳಿಕ ಅದನ್ನು ಕೇಂದ್ರ ಸರ್ಕಾರಕ್ಕೆ ವರದಿ ಮಾಡಬೇಕು ಎಂದು ನಟ, ಅತಿ ಹಿಂದುಳಿದ ವರ್ಗಗಳ ಜಾಗೃತ ವೇದಿಕೆ ಗೌರವಾಧ್ಯಕ್ಷ ಮುಖ್ಯಮಂತ್ರಿ ಚಂದ್ರು ಆಗ್ರಹಿಸಿದರು.

ಓದಿ: ಎಸ್ಐಟಿಗೆ ಸ್ವತಂತ್ರ ಅಧಿಕಾರ ಕೊಟ್ಟಿದ್ದೇವೆ: ಸಚಿವ ಬೊಮ್ಮಾಯಿ

ನಗರದ ಪ್ರೆಸ್​​ಕ್ಲಬ್‌ನಲ್ಲಿ ಮಾತನಾಡಿದ ಅವರು, ಹಿಂದಿನ ಸರ್ಕಾರ ಎಲ್ಲಾ ಗೋಜಲುಗಳಿಗೆ ಕಡಿವಾಣ ಹಾಕಿ 162 ಕೋಟಿ ರೂ.ನಲ್ಲಿ ಶಾಶ್ವತ ಆಯೋಗದ ವರದಿ ಮಾಡಿತ್ತು. ಆದರೆ, ಇಂದಿನ ಸರ್ಕಾರ ಈ ವರದಿಯನ್ನು ಇನ್ನೂ ತೆಗೆದುಕೊಂಡಿಲ್ಲ.‌ ಅದನ್ನು ಅನುಷ್ಠಾನ ಮಾಡಿದ್ದಲ್ಲಿ ಹಿಂದುಳಿದ ಸಮಾಜಗಳಿಗೆ ಹೆಚ್ಚಿನ ಅನುಕೂಲಗಳು ಸಿಗುತ್ತವೆ ಎಂಬ ಭಯಕ್ಕೆ ಒತ್ತಡದ ಮೇಲೆ ನಿಲ್ಲಿಸಲಾಗಿದೆ ಎಂದರು.

ಮೀಸಲಾತಿ ಕುರಿತಂತೆ ಮುಖ್ಯಮಂತ್ರಿ ಚಂದ್ರು ಪ್ರತಿಕ್ರಿಯೆ..

ಇಂದು ಪ್ರವರ್ಗ 2(ಎ) ಪಟ್ಟಿಯಲ್ಲಿ 102 ಹಾಗೂ ಪ್ರವರ್ಗ 1ರಲ್ಲಿ ಅತಿ ಹಿಂದುಳಿದ ಸಮುದಾಯಗಳಿವೆ. ಇವರೆಲ್ಲರೂ ಕೃಷಿ ಭೂಮಿ ಇಲ್ಲದೆ ಆರ್ಥಿಕ ಅಭದ್ರತೆಗೊಳಗಾದವರಾಗಿದ್ದಾರೆ. ಕುಲ ಕಸುಬನ್ನೇ ನಂಬಿ ಜೀವನ ಮಾಡುವವರಾಗಿದ್ದಾರೆ. ಆದರೆ, ಇತ್ತೀಚಿನ ದಿನಗಳಲ್ಲಿ ರಾಜಕೀಯ ಒತ್ತಡದಿಂದ ಭೂ ಹಿಡುವಳಿದಾರರು, ಆರ್ಥಿಕವಾಗಿ‌ ಬಲಾಢ್ಯರಾಗಿರುವವರೂ ಕೂಡ ಈ ಪಟ್ಟಿಯಲ್ಲಿ ಸೇರಿ ಮೀಸಲಾತಿ ಪಡೆಯಲು ಹವಣಿಸುತ್ತಿದ್ದಾರೆ‌ ಎಂದರು.

ವೀರಶೈವ ಸಮಾಜದ ಪಂಚಮಸಾಲಿ ವರ್ಗದವರು ಪ್ರವರ್ಗ 2(ಎ)ಗೆ ನಮ್ಮನ್ನು ಸೇರಿಸಿ ಎಂದು ಹೋರಾಟ ಮಾಡುತ್ತಿದ್ದಾರೆ. ಅವರ ಬೇಡಿಕೆಗೆ ನಮ್ಮ ಯಾವುದೇ ತಕರಾರುಗಳಿಲ್ಲ. ಅವರಲ್ಲಿ ಬಡವರಿದ್ದಲ್ಲಿ ಬೇರೆ ರೀತಿಯ ಅನುದಾನಗಳನ್ನು ನೀಡಿ ಅಭಿವೃದ್ಧಿ ಪಡಿಸಬೇಕೆ ಹೊರತು, ನಮ್ಮ ಅನ್ನಕ್ಕೆ ಯಾಕೆ ಕಲ್ಲು ಹಾಕಲಾಗುತ್ತದೆ.

ಇತ್ತೀಚೆಗೆ ಘೋಷಣೆ ಮಾಡಿರುವ ರಾಜ್ಯ ಬಜೆಟ್‌ನಲ್ಲಿ‌ ತಲಾ 500 ಕೋಟಿ ರೂ. ಹಣವನ್ನು ವೀರಶೈವ ಸಮುದಾಯ, ಒಕ್ಕಲಿಗ ಸಮುದಾಯಕ್ಕೆ, ಬ್ರಾಹ್ಮಣ ಸಮುದಾಯಕ್ಕೆ 50 ಕೋಟಿ ರೂ. ಹಣ ಮೀಸಲಿರಿಸಲಾಗಿದೆ.

ಆದರೆ, 107 ಸಮುದಾಯಗಳಿರುವ ಪ್ರವರ್ಗ 2(ಎ), 97 ಸಮುದಾಯಗಳಿರುವ ಪ್ರವರ್ಗ 1, ಎಸ್​​ಸಿ-ಎಸ್​​ಟಿ ಅವರೆಲ್ಲರನ್ನೂ ಸೇರಿಸಿ 500 ಕೋಟಿ ರೂ. ನೀಡಲಾಗಿದೆ. ಇದ್ಯಾವ ರೀತಿಯ ನ್ಯಾಯ?. ಇದು ಸಂವಿಧಾನ, ಪ್ರಜಾಪ್ರಭುತ್ವಕ್ಕೆ ಅಪಚಾರ ಮಾಡಿದಂತೆ. ಉಳ್ಳವರನ್ನು ಬಲಾಢ್ಯರನ್ನಾಗಿ ಮಾಡುವ ಬಜೆಟ್ ಮಾಡಿರುವ ಸರ್ಕಾರಕ್ಕೆ ಸರಿಯಾದ ಚಿಂತನೆ ಇಲ್ಲವೇ ಎಂದು ಮುಖ್ಯಮಂತ್ರಿ ಚಂದ್ರು ಕಿಡಿಕಾರಿದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.