ಮಂಗಳೂರು: ಪದ್ಮಶ್ರೀ ಪ್ರಶಸ್ತಿ ಪುರಸ್ಕೃತೆ ಸಾಲು ಮರದ ತಿಮ್ಮಕ್ಕನವರಿಗೆ ಸೂರು ಕಟ್ಟಿಕೊಳ್ಳಲು ಎಂ.ಆರ್.ಜಿ. ಗ್ರೂಪ್ ಅಧ್ಯಕ್ಷ ಕೆ.ಪ್ರಕಾಶ್ ಶೆಟ್ಟಿಯವರು 5 ಲಕ್ಷ ರೂ. ನೆರವು ನೀಡಿದ್ದಾರೆ.
ಬುಧವಾರ 5 ಲಕ್ಷ ರೂ. ನೆರವಿನ ಚೆಕ್ಅನ್ನು ಪ್ರಕಾಶ್ ಶಟ್ಟಿಯವರು ಸಾಲುಮರದ ತಿಮ್ಮಕ್ಕನವರಿಗೆ ಹಸ್ತಾಂತರಿಸಿದರು. ತಿಮ್ಮಕ್ಕನವರು ವೃಕ್ಷ ಪ್ರೇಮ ಅತಿಶಯವಾದುದು. ಗಿಡಗಳನ್ನು ನೆಟ್ಟು ಅವುಗಳನ್ನು ಮಕ್ಕಳಂತೆ ಲಾಲನೆ ಪಾಲನೆ ಮಾಡಿ ಅದನ್ನು ಹೆಮ್ಮರವಾಗಿಸುವಲ್ಲಿನ ಅರ್ಪಣಾ ಭಾವಕ್ಕೆ ಪರ್ಯಾಯ ಹೋಲಿಕೆಯಿಲ್ಲ. ಆದ್ದರಿಂದ ಅವರಿಗೆ ಈ ನೆರವನ್ನು ಅತ್ಯಂತ ಗೌರವದಿಂದ ಕೊಡಮಾಡಲಾಗಿದೆ ಎಂದು ಎಂ.ಆರ್.ಜಿ. ಗುಂಪಿನ ಸ್ಥಾಪಕಾಧ್ಯಕ್ಷ ಕೆ. ಪ್ರಕಾಶ ಶೆಟ್ಟಿ ಹೇಳಿದ್ದಾರೆ.
ಯಾವುದೇ ಔಪಚಾರಿಕ ಶಿಕ್ಷಣ ಇಲ್ಲದಿದ್ದರೂ ತಮ್ಮಲ್ಲಿನ ಪರಿಸರ ಕಾಳಜಿಯ ಕಾರ್ಯದಿಂದ ಸಾಲು ಮರದ ತಿಮ್ಮಕ್ಕ ದೇಶ ವಿದೇಶಗಳಲ್ಲಿ ಪ್ರಖ್ಯಾತರಾಗಿದ್ದಾರೆ ನಾವು ಇಲ್ಲಿ ಸ್ಮರಿಸಬಹುದು.
ಇದನ್ನು ಓದಿ:ಪದ್ಮಶ್ರೀ ಪ್ರಶಸ್ತಿ ಸ್ವೀಕರಿಸಿದ ವೃಕ್ಷಮಾತೆ ಅಂಕೋಲದ ತುಳಸಿ ಗೌಡ