ಮಂಗಳೂರು: ನಗರದ ಫಳ್ನೀರ್ನ ಯುನಿಟಿ ಆಸ್ಪತ್ರೆ ಹಿಂಭಾಗದಲ್ಲಿರುವ ಮಸ್ಜಿದುಲ್ ಎಹ್ಸಾನ್ ಎಂಬ ಮಸೀದಿ ಕೇವಲ ಧಾರ್ಮಿಕ ಕಾರ್ಯ ಮಾತ್ರವಲ್ಲದೆ ಸಾಮಾಜಿಕ ಚಟುವಟಿಕೆಗಳನ್ನು ಮಾಡುವ ಮೂಲಕ ಗಮನಸೆಳೆದಿದೆ.
ಹೌದು.. ಕೊರೊನಾ ಎರಡನೇ ಅಲೆಯ ಸಂದರ್ಭದಲ್ಲಿ ಆಕ್ಸಿಜನ್ ಕೊರತೆ ಇಡಿ ದೇಶವನ್ನು ತಲ್ಲಣಗೊಳಿಸಿತ್ತು. ಈ ಹಿನ್ನೆಲೆ ಮಸೀದಿಯಲ್ಲಿ ನೀಡುವ ಆಕ್ಸಿಜನ್ ವ್ಯವಸ್ಥೆಗೆ ಕುವೈಟ್ ಕೇರಳ ಮುಸ್ಲಿಂ ಅಸೋಸಿಯೇಷನ್ (KKMA) ಕೈ ಜೋಡಿಸಿದ್ದು,10 ಲೀಟರ್ನ 35 ಆಕ್ಸಿಜನ್ ಸಿಲಿಂಡರ್ ಗಳನ್ನು ಕಳುಹಿಸಿಕೊಟ್ಟಿದೆ. ಕೆಕೆಎಂಎ ಆಕ್ಸಿಜನ್ ಸಿಲಿಂಡರ್ ಜೊತೆಗೆ ಅದನ್ನು ಬಳಸಲು ರೆಗ್ಯುಲೇಟರ್ ಮತ್ತು ಪಲ್ಸ್ ಮೀಟರ್ನ್ನು ಕೊರೊನಾ ರೋಗಿಗಳಿಗೆ ನೀಡಿದೆ.
ಈ ಮಸೀದಿ ನಮಾಜ್ ಮಾಡುವ ಧಾರ್ಮಿಕ ಕಾರ್ಯಗಳಿಗೆ ಮಾತ್ರ ಸೀಮಿತವಾಗಿರದೆ, ಇಂಥ ಕಾರ್ಯಗಳ ಮೂಲಕ ಸಾಮಾಜಿಕ ಕಾರ್ಯ ಮಾಡುತ್ತಿದೆ. ಖಾಸಗಿ ಆಸ್ಪತ್ರೆಯ ಸಹಯೋಗದೊಂದಿಗೆ ಕೊರೊನಾ ಲಸಿಕೆ ನೀಡುವ ವ್ಯವಸ್ಥೆ ಮಾಡಲಾಗಿದೆ. ಕೆಕೆಎಂಎ ನೀಡಿದ ಆಕ್ಸಿಜನ್ನಲ್ಲಿ ಧರ್ಮಭೇಧವಿಲ್ಲದೆ ಕೊರೊನಾ ಸೋಂಕಿತರಿಗೆ ನೀಡಲಾಗಿದ್ದು, ಈ ಸಾಮಾಜಿಕ ಕಾರ್ಯ ಮಸೀದಿ ಸಮಿತಿಗೂ ಖುಷಿ ತಂದಿದೆ.
ಇನ್ನೂ ಕೊರೊನಾ ಎರಡನೆ ಅಲೆಯ ಸಂದರ್ಭದಲ್ಲಿ ಆಸ್ಪತ್ರೆಗಳಲ್ಲಿ ಕೊರೊನಾ ಸೋಂಕಿತರಿಗೆ ಬೆಡ್ ಕೊರತೆ ಕಾಣಿಸಿಕೊಂಡಾಗ ಮಂಗಳೂರಿನಲ್ಲಿ ಇಂತಹ ಸಮಸ್ಯೆ ಎದುರಾದರೆ ಮಸೀದಿಯಲ್ಲಿ ಕೊರೊನಾ ಕೇರ್ ಸೆಂಟರ್ ಮಾಡಲು ಬೆಡ್ಗಳನ್ನು ತರಿಸಿಟ್ಟುಕೊಳ್ಳಲಾಗಿತ್ತು.
ಓದಿ:ರಾಜ್ಯದಲ್ಲಿಂದು 3,979 ಮಂದಿಗೆ ಕೋವಿಡ್ ಪಾಸಿಟಿವ್, 138 ಮಂದಿ ಸಾವು