ETV Bharat / state

ಮಂಗಳೂರಲ್ಲಿ 200ಕ್ಕೂ ಹೆಚ್ಚು ಕೇರಳ ವಿದ್ಯಾರ್ಥಿಗಳಿಗೆ ಕೊರೊನಾ ದೃಢ: ರೂಪಾಂತರಿ ಸೋಂಕಿನ ಆತಂಕ!

author img

By

Published : Feb 10, 2021, 7:26 AM IST

Updated : Feb 10, 2021, 7:45 AM IST

ಕೇರಳದಿಂದ ದ.ಕ. ಜಿಲ್ಲೆಗೆ ಬಂದು, ಕೊರೊನಾ ಸೋಂಕಿಗೆ ತುತ್ತಾದ 200ಕ್ಕೂ ವಿದ್ಯಾರ್ಥಿಗಳ ಗಂಟಲು ದ್ರವ ಮಾದರಿಯನ್ನು ಬೆಂಗಳೂರಿನ ನಿಮ್ಹಾನ್ಸ್​​ಗೆ ಕಳುಹಿಸಲಾಗಿದೆ. ಇದು ರೂಪಾಂತರಿ ಕೊರೊನಾ ಎಂಬುದನ್ನು ಪರಿಶೀಲಿಸಲು ಬೆಂಗಳೂರಿಗೆ ಗಂಟಲು ದ್ರವ ರವಾನಿಸಲಾಗಿದೆ.

swab of kerala students will send to bangalore Niemans
ಮಂಗಳೂರು: ಸೋಂಕು ದೃಢಪಟ್ಟ 200ಕ್ಕೂ ಹೆಚ್ಚು ಕೇರಳ ವಿದ್ಯಾರ್ಥಿಗಳ ಗಂಟಲ ದ್ರವ ನಿಮಾನ್ಸ್​​​ಗೆ ರವಾನೆ

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಗೆ ಕೇರಳದಿಂದ ‌ವ್ಯಾಸಂಗಕ್ಕೆಂದು ಬಂದಿರುವ 200ಕ್ಕೂ ಹೆಚ್ಚು ವಿದ್ಯಾರ್ಥಿಗಳಲ್ಲಿ ಕೊರೊನಾ ಸೋಂಕು ದೃಢಪಟ್ಟಿದೆ. ಹಾಗಾಗಿ ಮುನ್ನೆಚ್ಚರಿಕೆ ಕ್ರಮವಾಗಿ ರೂಪಾಂತರಿ ಕೊರೊನಾ ಇದೆಯೇ ಇಲ್ಲವೇ ಎಂಬುದನ್ನು ದೃಢಪಡಿಸಲು ಅವರ ಗಂಟಲು ದ್ರವ ಮಾದರಿಯನ್ನು ಬೆಂಗಳೂರಿನ ನಿಮ್ಹಾನ್ಸ್‌ ಆಸ್ಪತ್ರೆಗೆ ಕಳುಹಿಸಲು ನಿರ್ಧರಿಸಲಾಗಿದೆ.

ಈ ಸುದ್ದಿಯನ್ನೂ ಓದಿ: ರಾಜ್ಯದಲ್ಲಿಂದು 366 ಮಂದಿಗೆ ಸೋಂಕು ದೃಢ: 2 ಸೋಂಕಿತರು ಬಲಿ

ಇತ್ತೀಚೆಗೆ ಇಂಗ್ಲೆಂಡ್‌ನಿಂದ ಭಾರತಕ್ಕೆ ಆಗಮಿಸಿರುವ ಕೆಲವರಲ್ಲಿ ರೂಪಾಂತರಿ ಸೋಂಕು ಕಂಡು ಬಂದಿತ್ತು. ಇದಾದ ಬಳಿಕ ಇಂಗ್ಲೆಂಡ್‌ನಿಂದ ಆಗಮಿಸಿದ ಎಲ್ಲರ ಗಂಟಲು ದ್ರವ ಮಾದರಿಯನ್ನು ತಪಾಸಣೆ ನಡೆಸಲಾಗುತ್ತಿದೆ. ಬ್ರಿಟನ್‌ನಿಂದ ಕೇರಳಕ್ಕೆ ಆಗಮಿಸಿದ್ದವರಿಗೂ ರೂಪಾಂತರಿ ಕೊರೊನಾ ವೈರಸ್‌ ಲಕ್ಷಣಗಳು ಕಂಡು ಬಂದಿದ್ದವು.

ಈ ಹಿನ್ನೆಲೆ, ಮುಂಜಾಗ್ರತಾ ಕ್ರಮವಾಗಿ ಕೇರಳದಿಂದ ಈವರೆಗೆ ದ.ಕ. ಜಿಲ್ಲೆಗೆ ಬಂದು, ಕೊರೊನಾ ಸೋಂಕಿಗೆ ತುತ್ತಾದ ವಿದ್ಯಾರ್ಥಿಗಳ ಗಂಟಲು ದ್ರವ ಮಾದರಿಯನ್ನು ಬೆಂಗಳೂರಿನ ನಿಮ್ಹಾನ್ಸ್​​ಗೆ ಕಳುಹಿಸಲಾಗಿದೆ.

Last Updated : Feb 10, 2021, 7:45 AM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.