ETV Bharat / state

ಅಪರಿಚಿತ ವ್ಯಕ್ತಿಯಿಂದ ಬ್ಯಾಂಕ್​ ಖಾತೆಗೆ ಹಣ ಜಮೆ: ಮರಳಿ ಪಡೆಯುಂತೆ ವ್ಯಾಪಾರಿ ಮನವಿ - Request from the dealer News

ಅಪರಿಚಿತರು ಆಕಸ್ಮಿಕವಾಗಿ ನನ್ನ ಖಾತೆಗೆ ಹಣ ಜಮೆ ಮಾಡಿರುವ ಸಾಧ್ಯತೆ ಇದೆ. ಈ ಹಣವನ್ನು ಸ್ಪಷ್ಟ ಮಾಹಿತಿ ನೀಡಿ ಪಡೆದುಕೊಳ್ಳಿ ಎಂದು ವ್ಯಾಪಾರಿ ಕೋರಿದ್ದಾನೆ.

ಅಪರಿಚಿತ ವ್ಯಕ್ತಿಯಿಂದ ಹಣ ಜಮೆ
ಅಪರಿಚಿತ ವ್ಯಕ್ತಿಯಿಂದ ಹಣ ಜಮೆ
author img

By

Published : Aug 19, 2020, 8:23 AM IST

ಸುಳ್ಯ: ಕ್ಯಾಶ್ ಡೆಪಾಸಿಟ್ ಯಂತ್ರವೊಂದರಿಂದ ತನ್ನ ಖಾತೆಗೆ ಯಾರೋ ಅಪರಿಚಿತ ವ್ಯಕ್ತಿ ಸಾವಿರಾರು ರೂ. ಹಣ ಜಮೆ ಮಾಡಿದ್ದಾರೆ. ಈ ಹಣವನ್ನು ಸ್ಪಷ್ಟ ಮಾಹಿತಿ ನೀಡಿ ಪಡೆದುಕೊಳ್ಳುವಂತೆ ಸುಳ್ಯ ಮೂಲದ ವ್ಯಾಪಾರಿ ಜಾಸಿರ್ ಅಹ್ಮದ್ ಕೋರಿದ್ದಾರೆ.

ಕ್ಯಾಶ್ ಡೆಪಾಸಿಟ್ ಯಂತ್ರವೊಂದರಿಂದ ನನ್ನ ಹೆಚ್‌ಡಿಎಫ್‌ಸಿ ಬ್ಯಾಂಕ್​‌ ಖಾತೆಗೆ ಮಂಗಳವಾರ ಬೆಳಗ್ಗೆ ಹಣ ಜಮೆ ಮಾಡಲಾಗಿದೆ. ಈ ಹಣವನ್ನು ನನ್ನ ಖಾತೆಗೆ ಕ್ಯಾಶ್ ಡೆಪಾಸಿಟ್ ಯಂತ್ರದ ಮೂಲಕ ಜಮೆ ಮಾಡಿದವರು ಯಾರು ಎನ್ನುವುದು ಇನ್ನೂ ತಿಳಿದಿಲ್ಲ. ಈ ಬಗ್ಗೆ ಸುಳ್ಯದ ಹೆಚ್‌ಡಿಎಫ್‌ಸಿ ಶಾಖೆಯ ಅಧಿಕಾರಿಗಳ ಗಮನಕ್ಕೆ ತಂದಿದ್ದು, ಈವರೆಗೆ ಯಾವುದೇ ಪ್ರತಿಕ್ರಿಯೆ ಬಂದಿಲ್ಲ.

ಅಪರಿಚಿತರು ಆಕಸ್ಮಿಕವಾಗಿ ನನ್ನ ಖಾತೆಗೆ ಹಣ ಜಮೆ ಮಾಡಿರುವ ಸಾಧ್ಯತೆ ಇದೆ. ಅಂತಹವರು ನನ್ನ ಮೊಬೈಲ್ ಸಂಖ್ಯೆ 9482966561ಕ್ಕೆ ಸಂಪರ್ಕಿಸಿ, ತಾವು ನನ್ನ ಖಾತೆಗೆ ಜಮೆ ಮಾಡಿರುವ ಮೊತ್ತ, ಜಮೆ ಮಾಡಿದ ಸಮಯ, ಜಮೆ ಮಾಡಿದ ಜಾಗ ಮತ್ತು ದಾಖಲೆ ಸಹಿತ ಪೂರ್ಣ ವಿವರಗಳನ್ನು ನೀಡಿ ಅದನ್ನು ಪಡೆದುಕೊಳ್ಳಬಹುದು ಎಂದು ವ್ಯಾಪಾರಿ ಜಾಸಿರ್ ಅಹ್ಮದ್ ಈಟಿವಿ ಭಾರತಕ್ಕೆ ತಿಳಿಸಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.