ETV Bharat / state

ಒಂದೇ ಬೈಕಿನಲ್ಲಿ ಐವರ ಪ್ರಯಾಣ.. ವಿಡಿಯೋ ಶೇರ್​ ಮಾಡಿ ಕ್ರಮಕ್ಕೆ ಒತ್ತಾಯಿಸಿದ ಶಾಸಕ ಕಾಮತ್

ಒಂದೇ ಬೈಕ್‌ನಲ್ಲಿ ಐವರು ತೆರಳುತ್ತಿರುವ ವಿಡಿಯೋ ಬಗ್ಗೆ ಕ್ರಮ ಕೈಗೊಳ್ಳುವಂತೆ ಶಾಸಕ ವೇದವ್ಯಾಸ ಕಾಮತ್ ಒತ್ತಾಯಿಸಿದ್ದಾರೆ.

mla-vedavyasa-kamat-urged-for-action-against-five-people-ride-on-a-bike
ಒಂದೇ ಬೈಕಿನಲ್ಲಿ ಐವರ ಪ್ರಯಾಣ.. ವಿಡಿಯೋ ಶೇರ್​ ಮಾಡಿ ಕ್ರಮಕ್ಕೆ ಒತ್ತಾಯಿಸಿದ ಶಾಸಕ ಕಾಮತ್
author img

By

Published : May 6, 2022, 7:50 PM IST

ಮಂಗಳೂರು: ನಗರದ ರಸ್ತೆಯೊಂದರಲ್ಲಿ ಒಂದೇ ಬೈಕ್‌ನಲ್ಲಿ ಐವರು ತೆರಳುತ್ತಿರುವ ವಿಡಿಯೋವನ್ನು ಮಂಗಳೂರು ದಕ್ಷಿಣ ಶಾಸಕ ವೇದವ್ಯಾಸ ಕಾಮತ್ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದು, ಕ್ರಮಕ್ಕೆ ಒತ್ತಾಯಿಸಿದ್ದಾರೆ. ಮೂವರು ಮಕ್ಕಳು ಸೇರಿದಂತೆ ಐವರು ಒಂದೇ ಬೈಕ್​ನಲ್ಲಿ ಸಂಚರಿಸುತ್ತಿರುವ ವಿಡಿಯೋ ಇದಾಗಿದೆ.

ಶಾಸಕ ವೇದವ್ಯಾಸ್ ಕಾಮತ್ ವಿಡಿಯೋವನ್ನು ತಮ್ಮ ಟ್ವಿಟರ್​ ಹಾಗೂ ಫೇಸ್​ಬುಕ್​ ಖಾತೆಗಳಲ್ಲಿ ಶೇರ್​ ಮಾಡಿದ್ದು, ಮಂಗಳೂರು ನಗರ ಪೊಲೀಸರು ಈ ಬಗ್ಗೆ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದ್ದಾರೆ. ಒಂದೇ ಬೈಕಿನಲ್ಲಿ ಐದು ಮಂದಿ ಕುಳಿತಿದ್ದಾರೆ. ಇಬ್ಬರು ದೊಡ್ಡವರು, ಮೂವರು ಸಣ್ಣ ಮಕ್ಕಳು. ಇದರಲ್ಲಿ ಒಂದು ಮಗು ಟ್ಯಾಂಕ್ ಮೇಲೆ ಕುಳಿತುಕೊಂಡಿದೆ. ಇದರಲ್ಲಿ ಒಂದು ಮಗು ಮಲಗಿಕೊಂಡಿದ್ದು ವಿಡಿಯೋದಲ್ಲಿ ಸೆರೆಯಾಗಿದೆ.

ಈ ವಿಚಾರದಲ್ಲಿ ಡಿಸಿಪಿ ಅಪರಾಧ ಮತ್ತು ಸಂಚಾರ ಮಂಗಳೂರು ನಗರ ಪೊಲೀಸರು ಮಧ್ಯಪ್ರವೇಶಿಸಬೇಕು. ಇಂತಹ ಅಪಾಯಕಾರಿ ಸವಾರಿ‌ ಮಾಡಿದವರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ವೇದವ್ಯಾಸ ಕಾಮತ್ ಒತ್ತಾಯಿಸಿದ್ದಾರೆ.

ಇದನ್ನೂ ಓದಿ: ಚೋಟಾ ಪಾಕಿಸ್ತಾನ ಆಡಿಯೋ ವೈರಲ್ ಪ್ರಕರಣ​.. ಇಬ್ಬರು ಆರೋಪಿಗಳ ಬಂಧನ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.