ETV Bharat / state

ಫಜರ್ ಆಜಾನ್ ಬಗ್ಗೆ ಗೊಂದಲ ದೂರ ಮಾಡಿ: ವಕ್ಫ್ ಬೋರ್ಡ್ ಅಧ್ಯಕ್ಷರಿಗೆ ಶಾಸಕ ಖಾದರ್ ಪತ್ರ - Noise Pollution

ರಾಜ್ಯ ವಕ್ಫ್ ಬೋರ್ಡ್ ಅಧ್ಯಕ್ಷರು, ಮಾ.16ರಂದು ಮಸೀದಿ, ದರ್ಗಾಗಳಲ್ಲಿ ರಾತ್ರಿ 10ರಿಂದ ಬೆಳಗ್ಗೆ 6ರವರೆಗೆ ಧ್ವನಿವರ್ಧಕದ ಬಳಕೆಗೆ ಕಡಿವಾಣ ಹಾಕುವಂತೆ ಆದೇಶ ಹೊರಡಿಸಿತ್ತು. ಅದೇ ರೀತಿ ಆಜಾನ್ ಹೇಳಲು, ಮರಣ ವಾರ್ತೆ, ದಫನ್ ಸಮಯ, ಚಂದ್ರದರ್ಶನದ ಮಾಹಿತಿ ನೀಡಲು ಧ್ವನಿವರ್ಧಕ ಬಳಸಬಹುದು ಎಂದು ಹೇಳಲಾಗಿದೆ.

ಯುಟಿ ಖಾದರ್​
ಯುಟಿ ಖಾದರ್​
author img

By

Published : Mar 18, 2021, 4:32 AM IST

ಮಂಗಳೂರು: ಮಸೀದಿ, ದರ್ಗಾಗಳಲ್ಲಿ ರಾತ್ರಿ 10ರಿಂದ ಬೆಳಗ್ಗೆ 6ರವರೆಗೆ ಧ್ವನಿವರ್ಧಕ ಬಳಕೆಗೆ ಕಡಿವಾಣ ಹಾಕಲು ಆದೇಶ ಹೊರಡಿಸಿರುವ ರಾಜ್ಯ ವಕ್ಫ್ ಬೋರ್ಡ್, ಫಜರ್ ಆಜಾನ್​ನ ಗೊಂದಲವನ್ನು ದೂರ ಮಾಡಬೇಕೆಂದು ವಕ್ಫ್ ಬೋರ್ಡ್ ಅಧ್ಯಕ್ಷರಿಗೆ ಶಾಸಕ ಯು.ಟಿ.ಖಾದರ್ ಪತ್ರ ಬರೆದಿದ್ದಾರೆ.

ರಾಜ್ಯ ವಕ್ಫ್ ಬೋರ್ಡ್ ಅಧ್ಯಕ್ಷರು, ಮಾ.16ರಂದು ಮಸೀದಿ, ದರ್ಗಾಗಳಲ್ಲಿ ರಾತ್ರಿ 10ರಿಂದ ಬೆಳಗ್ಗೆ 6ರವರೆಗೆ ಧ್ವನಿವರ್ಧಕದ ಬಳಕೆಗೆ ಕಡಿವಾಣ ಹಾಕುವಂತೆ ಆದೇಶ ಹೊರಡಿಸಿತ್ತು. ಅದೇ ರೀತಿ ಆಜಾನ್ ಹೇಳಲು, ಮರಣ ವಾರ್ತೆ, ದಫನ್ ಸಮಯ, ಚಂದ್ರದರ್ಶನದ ಮಾಹಿತಿ ನೀಡಲು ಧ್ವನಿವರ್ಧಕ ಬಳಸಬಹುದು ಎಂದು ಹೇಳಲಾಗಿದೆ.

ವಕ್ಫ್ ಬೋರ್ಡ್ ಅಧ್ಯಕ್ಷರಿಗೆ ಶಾಸಕ ಖಾದರ್ ಬರೆದಿರುವ ಪತ್ರ

ಆದರೆ ರಾತ್ರಿ 10ರಿಂದ ಬೆಳಗ್ಗೆ 6ರವರೆಗೆ ಧ್ವನಿವರ್ಧಕ ಬಳಕೆಗೆ ಕಡಿವಾಣ ಹಾಕಲು ಆದೇಶ ಹೊರಡಿಸಿರುವ ಸಮಯದಲ್ಲಿ ಫಜರ್ ಆಜಾನ್ ಹೇಳಲು ಅವಕಾಶ ಇದೆ ಎಂದು ರಾಜ್ಯ ವಕ್ಫ್ ಬೋರ್ಡ್ ಸ್ಪಷ್ಟ ಆದೇಶ ನೀಡಬೇಕು. ಇಲ್ಲದಿದ್ದಲ್ಲಿ ಮುಂದಿನ ದಿನಗಳಲ್ಲಿ ಗ್ರಾಮೀಣ ಮಟ್ಟದಲ್ಲಿ ಈ ಬಗ್ಗೆ ಆದೇಶ ದುರುಪಯೋಗ ಆಗುವ ಸಂಭವ ಇದೆ‌. ಆದ್ದರಿಂದ ಮುಂಜಾನೆ ಫಜರ್ ಆಜಾನ್ ಧ್ವನಿವರ್ಧಕಗಳ ಮೂಲಕ ಹೇಳಲು ಯಾವುದೇ ಗೊಂದಲವಿಲ್ಲ ಎಂಬುದರ ಬಗ್ಗೆ ಸ್ಪಷ್ಟವಾದ ಆದೇಶ ನೀಡಲು ಶಾಸಕ ಯು.ಟಿ.ಖಾದರ್ ಮನವಿ ಮಾಡಿದ್ದಾರೆ.

ಇದನ್ನು ಓದಿ:ರಾತ್ರಿ 10ರಿಂದ ಬೆಳಗ್ಗೆ 6ರವರೆಗೆ ಮಸೀದಿ, ದರ್ಗಾಗಳಲ್ಲಿ ಧ್ವನಿವರ್ಧಕ ನಿಷೇಧಿಸಿದ ರಾಜ್ಯ ವಕ್ಫ್​ ಮಂಡಳಿ!

ETV Bharat Logo

Copyright © 2025 Ushodaya Enterprises Pvt. Ltd., All Rights Reserved.