ETV Bharat / state

ಐಟಿ ದಾಳಿಯ ಬಳಿಕ‌ ಸಿದ್ದಾರ್ಥ್ ಕುಗ್ಗಿ ಹೋದರು.. ಶಾಸಕ ರಾಜೇಗೌಡ - ಸಿದ್ದಾರ್ಥ್​ ಜತೆಗಿನ ನೆನಪು‌ ಮೆಲಕು ಹಾಕಿದ ಶಾಸಕ ರಾಜೇಗೌಡ

ಸಿದ್ದಾರ್ಥ್​ ನಾಪತ್ತೆ ವಿಷಯ ತಿಳಿದ ತಕ್ಷಣ ನಾನು‌ ಮಾಜಿ ಸಿಎಂ ಎಸ್ ಎಂ ಕೃಷ್ಣ ಅವರ ಮನೆಗೆ ಹೋಗಿದ್ದೆ. ಅವರೂ ಆತಂಕದಲ್ಲಿದ್ದರು. ಹಾಗಾಗಿ ನಾನು ತಕ್ಷಣ ಬೆಂಗಳೂರಿನಿಂದ ಹೊರಟು ಇಂದು ಬೆಳಗ್ಗೆ ಮಂಗಳೂರು ತಲುಪಿದೆ ಎಂದು ಶಾಸಕ ರಾಜೇಗೌಡ ತಿಳಿಸಿದರು.

ಶಾಸಕ ರಾಜೇಗೌಡ
author img

By

Published : Jul 30, 2019, 1:18 PM IST

ಮಂಗಳೂರು: ಸಿದ್ಧಾರ್ಥ್ ಕಾನೂನು ಬಿಟ್ಟು ಯಾವುದೇ ವ್ಯವಹಾರ ನಡೆಸಿಲ್ಲ. ತೆರಿಗೆ ಕಟ್ಟುವುದರಲ್ಲಿ ಸರ್ಕಾರಕ್ಕೆ ಮೋಸ ಮಾಡಿದವರಲ್ಲ.‌ ಆದರೆ, ಐಟಿ ದಾಳಿಯ ಬಳಿಕ‌ ಸಿದ್ಧಾರ್ಥ್ ಸ್ವಲ್ಪ ಕುಗ್ಗಿ ಹೋದರು ಎಂದು ಶೃಂಗೇರಿ ಶಾಸಕ ರಾಜೇಗೌಡ ಹೇಳಿದರು.

ಸಿದ್ಧಾರ್ಥ್​ ನಾಪತ್ತೆ ವಿಷಯ ತಿಳಿದ ತಕ್ಷಣ ನಾನು‌ ಮಾಜಿ ಸಿಎಂ ಎಸ್ ಎಂ ಕೃಷ್ಣ ಅವರ ಮನೆಗೆ ಹೋಗಿದ್ದೆ. ಅವರೂ ಆತಂಕದಲ್ಲಿದ್ದರು. ಹಾಗಾಗಿ ನಾನು ತಕ್ಷಣ ಬೆಂಗಳೂರಿನಿಂದ ಹೊರಟು ಇಂದು ಬೆಳಗ್ಗೆ ಮಂಗಳೂರು ತಲುಪಿದೆ ಎಂದು ಶಾಸಕ ರಾಜೇಗೌಡ ತಿಳಿಸಿದರು.

ನಾನು ಸಿದ್ಧಾರ್ಥ್ ಅವರೊಂದಿಗೆ 25 ವರ್ಷಗಳಿಂದ ಕಾಫಿ ವ್ಯವಹಾರ ಮಾಡುತ್ತಿದ್ದೇನೆ. ಆದರೆ, ಅವರು ಯಾವುದೇ ತೆರಿಗೆ ವಂಚನೆ ಮಾಡಿದ್ದು ನನ್ನ ಗಮನಕ್ಕೆ ಬಂದಿಲ್ಲ. ಉದ್ಯಮದಲ್ಲಿ ಏಳುಬೀಳು ಸಹಜ. ಆದರೆ, ಅವರಿಗೆ ಇದರಿಂದ ಹೊರಬರುವ ಶಕ್ತಿ, ವಿದ್ಯೆ ಹಾಗೂ ಬಂಡವಾಳ ಇತ್ತು. ಅದನ್ನು ಬಂಡವಾಳ ಹೂಡಿಕೆದಾರರಿಗೆ ಕಟ್ಟುವಂತಹ ಶಕ್ತಿ ಇತ್ತು. ಆದರೆ, ಕೆಲಸಗಳಿಗೆ ಐಟಿಯವರು ತೊಂದರೆ ಕೊಟ್ಟರೆಂಬ ಮಾತುಗಳು ಕೇಳಿ ಬರುತ್ತಿವೆ ಎಂದರು.

ಮಂಗಳೂರಿನಲ್ಲಿ ಶಾಸಕ ರಾಜೇಗೌಡ ಹೇಳಿಕೆ..

ಅತ್ಯಂತ ಪ್ರಾಮಾಣಿಕವಾಗಿ ದೇಶಕ್ಕೋಸ್ಕರ ಹಾಗೂ ರಾಜ್ಯಕ್ಕೋಸ್ಕರ ದುಡಿಯುತ್ತಿದ್ದರು. ಜಿಲ್ಲೆಗೇನಾದರೂ ಕೊಡುಗೆ ಕೊಡುವ ಬಯಕೆ ಹೊಂದಿದ್ದರು. ಯುವಕರಿಗೆ ಉದ್ಯೋಗ ಸೃಷ್ಟಿ ಮಾಡಲು ಪೂರಕವಾಗಿ ಕೆಲಸ ಮಾಡುತ್ತಿದ್ದರು. ಹಾಗಾಗಿಯೇ ಅವರನ್ನು ಅನಗತ್ಯ ಒತ್ತಡಕ್ಕೆ ಸಿಲುಕಿಸಿದರೇನೋ ಎಂದು ತುಂಬಾ ನೋವಾಗುತ್ತಿದೆ. ಆದರೆ, ಊಹಾಪೋಹಗಳು ಏನಾಗಿದೆಯೋ ಗೊತ್ತಿಲ್ಲ. ಈ ರೀತಿಯಲ್ಲಿ ತಪ್ಪು ನಿರ್ಧಾರ ತೆಗೆದುಕೊಳ್ಳುವ ಮನಸ್ಥಿತಿಯವರಲ್ಲ. ನಮಗೆಲ್ಲಾ ಬಹಳ ಧೈರ್ಯ ಹೇಳುವವರು. ಕಾಫಿ ಬೆಲೆ ಕುಸಿತಗೊಂಡ ಸಂದರ್ಭದಲ್ಲಿ ನಮಗೆಲ್ಲಾ ಬಹಳ ಧೈರ್ಯ ಹೇಳಿದವರು. ಆ ಸಂದರ್ಭ ಸಾಕಷ್ಟು ಸಹಕಾರವನ್ನೂ ನೀಡಿದ್ದರು ಎಂದು ಸಿದ್ದಾರ್ಥ್​ ಜತೆಗಿನ ನೆನಪನ್ನು‌ ಶಾಸಕ ರಾಜೇಗೌಡ ಮೆಲುಕು ಹಾಕಿದರು.

Intro:Body:

ಸಿಧಾರ್ಥ್ ನಿವಾಸಕ್ಕೆ ಸಿನಿ ತಾರೆಯರು, ರಾಜಕಾರಣಿಗಳು ಭೇಟಿ  ನೀಡಿ ಸಾಂತ್ವನ

ಮಂಗಳೂರಿನ ನೇತ್ರವಾತಿ ನದಿಯಲ್ಲಿ ಒಂದೆಡೆ ಶೋಧ ಮತ್ತೊಂದೆಡೆ ಬೆಂಗಳೂರಿನ ಸದಾಶಿವನಗರ ನಿವಾಸದ ಬಳಿ ನಿರಾವ ಮೌನ ಆವರಿಸಿದೆ.. ವಿಚಾರ ಗೊತ್ತಾಗ್ತಿದ್ದಂತೆ ಸಿನಿ ತಾರೆಯರು , ರಾಜಾಕಾರಣಿಗಳು, ಸಂಬಂಧಿಕರು ಸ್ನೇಹಿತರು ಭೇಟಿಯಾಗಿ ಮಾಜಿ ಸಿಎಂ ಎಸ್ ಎಂ ಕೃಷ್ಣ ಹಾಗೂ  ಸಿಧಾರ್ಥ್ ತಂದೆ ತಾಯಿ  ಸಿಧಾರ್ಥ್ ಹೆಂಡತಿಗೆ ಸಾಂತ್ವನ ಹೇಳ್ತಿದ್ದಾರೆ..

ರಾಜ್ಯ ಗುಪ್ತಚರ ಇಲಾಖೆ ಐಜಿಪಿ  ದಯಾನಂದ ಎಸ್

,ಅರಗ ಜ್ಙಾನೇಂದ್ರ ತೀರ್ಥಹಳ್ಳಿ ವಿಧಾನಸಭಾ ಕ್ಷೇತ್ರದ ಶಾಸಕ, ಕುಮಾರ್ ಬಂಗಾರಪ್ಪ‌, ಮಾಜಿ ಕುಮಾರಸ್ವಾಮಿ,ಜಗದೀಶ್ ಶೆಟ್ಟರ್

ಶಾಸಕಹ್ಯಾರೀಸ್ , ಹಿರಿಯ ಮುಖಂಡ ವೀರಪ್ಪ ಮೊಯ್ಲಿ 

ಲೋಕಾಯುಕ್ತ ವಿಶ್ವನಾಥ್ ಶೆಟ್ಟಿ ,ರೋಷನ್ ಬೇಗ್ , ಪ್ರಿಯಾಂಕ ಖರ್ಗೆ, ಎಂಬಿ ಪಾಟೀಲ್, ಡಿಕೆ ಶಿವಕುಮಾರ್,  ಶಿವರಾಜುಕುಮಾರ್, ರಾಘವೇಂದ್ರ ರಾಜ್ಕುಮಾರ್, ಮಲ್ಲಿಕಾರ್ಜುನ ಖರ್ಗೆ ಹೀಗೆ ಹಲವಾರು ಮಂದಿ ಭೇಟಿ ನೀಡಿ ಸಾಂತ್ವನ ಹೇಳ್ತಿದ್ದಾರೆ

Conclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.