ಮಂಗಳೂರು: ಜಿಲ್ಲಾ ವೆನ್ಲಾಕ್ ಆಸ್ಪತ್ರೆಗೆಂದು ಬಂದಿದ್ದ ವ್ಯಕ್ತಿಯೋರ್ವ ದಾರಿ ತಪ್ಪಿ ನಗರ ಹೊರವಲಯದಲ್ಲಿರುವ ಕೋಟೆಕಾರು ಪ್ರದೇಶಕ್ಕೆ ಬಂದಿದ್ದ. ಈ ಸಂದರ್ಭದಲ್ಲಿ ಶಾಸಕ ಯು.ಟಿ.ಖಾದರ್ ಮಾನವೀಯತೆ ಮೆರೆದು ಅವರಿಗೆ ಸ್ಪಂದಿಸಿದ ಘಟನೆ ನಡೆದಿದೆ.
ಕೋಟೆಕಾರು ಪಟ್ಟಣ ಪಂಚಾಯತ್ ವ್ಯಾಪ್ತಿಯಿಂದ ವ್ಯಕ್ತಿಯೊಬ್ಬ ಶಾಸಕ ಯು.ಟಿ.ಖಾದರ್ ಅವರಿಗೆ ಕರೆ ಮಾಡಿ, ಅಪರಿಚಿತ ವ್ಯಕ್ತಿಯ ಬಗ್ಗೆ ಮಾಹಿತಿ ನೀಡಿದ್ದಾರೆ. ತಕ್ಷಣ ಸ್ಥಳಕ್ಕೆ ಆಗಮಿಸಿದ ಅವರು, ಸ್ಥಳಕ್ಕೆ ಆಂಬ್ಯುಲೆನ್ಸ್ ಕಳಿಸುವಂತೆ ಸೂಚಿಸಿದ್ದಾರೆ.
ಈ ಸಂದರ್ಭದಲ್ಲಿ ಯಾವ ಸಿಬ್ಬಂದಿ ಕೂಡ ಅಪರಿಚಿತ ವ್ಯಕ್ತಿಯ ಬಳಿ ಹೋಗಲು ತಯಾರಿರಲಿಲ್ಲ. ಈ ಸಂದರ್ಭದಲ್ಲಿ ಖಾದರ್ ಅವರೇ ಅವರ ಬಳಿಗೆ ಹೋಗಿ ತಾವೇ ಮಾಸ್ಕ್ ತೊಡಿಸಿ ಆಂಬ್ಯುಲೆನ್ಸ್ ಹತ್ತಿಸಿದ್ದಾರೆ. ಅಲ್ಲದೆ ಆ ವ್ಯಕ್ತಿ, ಮನೆಯ ಬಗ್ಗೆ ವಿಚಾರಿಸಿದ್ದಾರೆ. ಅವರಿಂದ ಸರಿಯಾದ ಮಾಹಿತಿ ಲಭ್ಯವಾಗದ ಹಿನ್ನೆಲೆ ಪೊಲೀಸರಿಗೆ ಆ ವ್ಯಕ್ತಿಯ ಬಗ್ಗೆ ಮಾಹಿತಿ ಪಡೆದು ಮನೆಯವರಿಗೆ ಸುದ್ದಿ ಮುಟ್ಟಿಸಲು ಸೂಚಿಸಿದ್ದಾರೆ.
ಅಪರಿಚಿತನಿಗೂ ಸ್ಪಂದನೆ ನೀಡಿ, ಆತನ ಬಗ್ಗೆ ಮಾನವೀಯತೆ ಮೆರೆದ ಶಾಸಕ ಖಾದರ್ ನಡೆಗೆ ನಾಗರಿಕರಿಂದ ಸಾಮಾಜಿಕ ಜಾಲತಾಣಗಳಲ್ಲಿ ಶ್ಲಾಘನೆ ವ್ಯಕ್ತವಾಗಿದೆ.