ETV Bharat / state

ಬೆಂಗಳೂರಿನಲ್ಲಿ ಕಂಬಳ; ಐಶ್ವರ್ಯಾ ರೈ, ರಜನಿಕಾಂತ್ ಆಗಮನದ ನಿರೀಕ್ಷೆ: ಶಾಸಕ ಅಶೋಕ್​ ಕುಮಾರ್​ ರೈ

Bengaluru Kambala: ಶಾಸಕ ಅಶೋಕ್​ ಕುಮಾರ್​ ರೈ ಅವರು ಬೆಂಗಳೂರು ಕಂಬಳ ಕುರಿತು ಮಾಹಿತಿ ಹಂಚಿಕೊಂಡಿದ್ದಾರೆ.

MLA Ashok Kumar Rai
ಶಾಸಕ ಅಶೋಕ್​ ಕುಮಾರ್​ ರೈ
author img

By ETV Bharat Karnataka Team

Published : Oct 1, 2023, 9:02 AM IST

Updated : Oct 1, 2023, 9:19 AM IST

ಬೆಂಗಳೂರು ಕಂಬಳ ಕುರಿತು ಶಾಸಕ ಅಶೋಕ್​ ಕುಮಾರ್​ ರೈ ಮಾಹಿತಿ..

ಮಂಗಳೂರು: ನವೆಂಬರ್ 25 ಮತ್ತು 26 ರಂದು ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಮೊಟ್ಟ ಮೊದಲ ಬಾರಿಗೆ ನಡೆಯುತ್ತಿರುವ ಕಂಬಳಕ್ಕೆ ದಕ್ಷಿಣ ಕನ್ನಡ, ಉಡುಪಿ ಮತ್ತು ಕೇರಳದ ಕಾಸರಗೋಡು ಜಿಲ್ಲೆಯ 100 ಜೋಡಿಗೂ ಅಧಿಕ ಕೋಣಗಳು ತೆರಳಲಿವೆ. ಮಂಗಳೂರಿನಿಂದ ಮೆರವಣಿಗೆ ಮೂಲಕ ಅವುಗಳನ್ನು ಬೀಳ್ಕೊಡಲಾಗುವುದು ಎಂದು ಬೆಂಗಳೂರು ಕಂಬಳ ಸಮಿತಿಯ ಅಧ್ಯಕ್ಷ, ಶಾಸಕ ಅಶೋಕ್ ಕುಮಾರ್ ರೈ ತಿಳಿಸಿದರು.

ಸಂಪೂರ್ಣ ಮಾಹಿತಿ ಕೊಟ್ಟ ಶಾಸಕರು: ಬೆಂಗಳೂರಿನಲ್ಲಿ ನಡೆಯುವ ಕಂಬಳಕ್ಕೆ ಸಂಬಂಧಿಸಿದಂತೆ ಕಂಬಳ ಕೋಣಗಳ ಮಾಲೀಕರ ಸಭೆ (ಶನಿವಾರ) ನಡೆಸಲಾಗಿದ್ದು, ಬಳಿಕ ಸಭೆಯ ತೀರ್ಮಾನವನ್ನು ಅವರು ಪತ್ರಿಕಾಗೋಷ್ಟಿಯ ಮೂಲಕ ಹಂಚಿಕೊಂಡರು. ಬೆಂಗಳೂರಿನಲ್ಲಿ ನಡೆಯುವ ಕಂಬಳದಲ್ಲಿ ದಕ್ಷಿಣ ಕನ್ನಡ, ಉಡುಪಿ ಮತ್ತು ಕಾಸರಗೋಡು ಜಿಲ್ಲೆಯ 100ಕ್ಕೂ ಅಧಿಕ ಕೋಣಗಳು ಭಾಗಿಯಾಗಲಿವೆ. ಈ ಕಂಬಳದ ಕೋಣಗಳನ್ನು ನವೆಂಬರ್ 23ರಂದು ಮೆರವಣಿಗೆ ಮೂಲಕ ಬೆಂಗಳೂರಿಗೆ ಬೀಳ್ಕೊಡಲಾಗುವುದು. ನಂತರ ಕೋಣಗಳನ್ನು ಲಾರಿಯಲ್ಲಿ ಕೊಂಡೊಯ್ಯಲಾಗುವುದು. ಮಂಗಳೂರಿನಿಂದ ಅಂದು ಬೆಳಿಗ್ಗೆ 8.30ಕ್ಕೆ ಕೋಣಗಳ ಮೆರವಣಿಗೆ ಹೊರಡಲಿದೆ. ಹಾಸನದಲ್ಲಿ ಎರಡು ಗಂಟೆಗಳ ಕಾಲ ಕೋಣಗಳಿಗೆ ವಿಶ್ರಾಂತಿ ಮತ್ತು ಆಹಾರ ನೀಡಿ ಬಳಿಕ ಚನ್ನರಾಯಪಟ್ಟಣ, ತುಮಕೂರುಗಳಲ್ಲಿ ವಿಶ್ರಾಂತಿ ಪಡೆದು ನಂತರ ಬೆಂಗಳೂರಿಗೆ ಹೋಗಲಾಗುವುದು. ಹಾಸನ, ಚನ್ನರಾಯಪಟ್ಟಣ ಮತ್ತು ತುಮಕೂರುಗಳಲ್ಲಿ ಕರಾವಳಿಯ ಜನರು ಸೇರಿದಂತೆ ಸ್ಥಳೀಯರು ಸ್ವಾಗತಿಸಲಿದ್ದಾರೆ. ಈ ಕೋಣಗಳನ್ನು ಕೊಂಡೊಯ್ಯುವಾಗ ಪಶು ವೈದ್ಯಾಧಿಕಾರಿಗಳು ಮತ್ತು ಪಶು ಆ್ಯಂಬುಲೆನ್ಸ್​​ಗಳು ಜೊತೆಗಿರಲಿದೆ ಎಂದರು.

ಕೋಣಗಳಿಗೆ ಟೆಂಟ್, ನೀರಿನ ವ್ಯವಸ್ಥೆ: ಮಂಗಳೂರಿನಿಂದ ಹೊರಡುವ ಕೋಣಗಳು ಬೆಂಗಳೂರು ತಲುಪಿದಾಗ ಅಲ್ಲಿಯೂ ಅವುಗಳಿಗೆ ಸ್ವಾಗತ ಕೋರಲಾಗುವುದು. 125 ಜೋಡಿ ಕೋಣಗಳಿಗೆ ಬೆಂಗಳೂರಿನಲ್ಲಿ ಟೆಂಟ್ ಮತ್ತು ನೀರಿನ ವ್ಯವಸ್ಥೆ ಮಾಡಲಾಗಿದೆ. ಕೋಣಗಳ ಯಜಮಾನರಿಗೆ ಕೊಠಡಿ ವ್ಯವಸ್ಥೆಯನ್ನು ಮಾಡಲಾಗಿದೆ. ಕೋಣಗಳಿಗೆ ನೀರಿನ ವ್ಯತ್ಯಾಸವಾಗಬಾರದೆಂದು ದಕ್ಷಿಣ ಕನ್ನಡದಿಂದಲೇ 5 ಟ್ಯಾಂಕರ್ ನೀರನ್ನು ಅಲ್ಲಿಗೆ ಕೊಂಡೊಯ್ಯಲಾಗುತ್ತದೆ. ಹಿಂದಿನ ಅನುಭವದ ಪ್ರಕಾರ, ನೀರಿನ ವ್ಯತ್ಯಾಸವಾದರೆ ಕೋಣಗಳಿಗೆ ಓಡಲು ಅನಾನುಕೂಲವಾಗುತ್ತದೆ. ಕೋಣಗಳಿಗೆ ಆಹಾರವನ್ನು ಇಲ್ಲಿಂದಲೇ ಕೊಂಡೊಯ್ದು, ಅಲ್ಲಿ ತಯಾರಿಸಿ ಕೊಡಲಾಗುತ್ತದೆ. ಈ ವರ್ಷ ಬೆಂಗಳೂರಿನಲ್ಲಿ ಆರಂಭಿಸುವ ಕಂಬಳಕ್ಕೆ ಉತ್ತಮ ಸ್ಪಂದನೆ ಸಿಕ್ಕಿದರೆ, ಇದನ್ನು ಮುಂದುವರಿಸಲಾಗುವುದು ಎಂದು ತಿಳಿಸಿದರು.

ಐಶ್ವರ್ಯಾ ರೈ, ರಜನಿಕಾಂತ್ ಆಗಮನದ ನಿರೀಕ್ಷೆ: ಬೆಂಗಳೂರಿನಲ್ಲಿ ನಡೆಯಲಿರುವ ಕಂಬಳದಲ್ಲಿ ಸ್ಟಾರ್ ನಟರು ಭಾಗವಹಿಸಲಿದ್ದಾರೆ. ಭಾರತೀಯ ಚಿತ್ರರಂಗದ ಬಹುಬೇಡಿಕೆ ಕಲಾವಿದರಾದ ಐಶ್ವರ್ಯಾ ರೈ, ರಜನಿಕಾಂತ್ ಅವರು ಈ ಕಾರ್ಯಕ್ರಮಕ್ಕೆ ಬರುವ ನಿರೀಕ್ಷೆ ಇದೆ. ಗುರುಕಿರಣ್, ರಿಷಬ್ ಶೆಟ್ಟಿ, ಅನುಷ್ಕಾ ಶೆಟ್ಟಿ ಅವರು ಈ ಕಾರ್ಯಕ್ರಮಕ್ಕೆ ಬರಲು ಒಪ್ಪಿದ್ದಾರೆ. ಮುಖ್ಯಮಂತ್ರಿ, ಉಪಮುಖ್ಯಮಂತ್ರಿ ಸೇರಿದಂತೆ ಎಲ್ಲಾ ಪಕ್ಷದ ಪ್ರಮುಖರು ಭಾಗಿಯಾಗಲಿದ್ದಾರೆ ಎಂದು ತಿಳಿಸಿದರು.

7-8 ಲಕ್ಷ ಜನರು ಬರುವ ನಿರೀಕ್ಷೆ: ಬೆಂಗಳೂರಿನಲ್ಲಿ ನಡೆಯುವ ಮೊದಲ ಕಂಬಳಕ್ಕೆ 7 ರಿಂದ 8 ಲಕ್ಷ ಜನರು ಬರುವ ನಿರೀಕ್ಷೆ ಇದೆ. ಪೊಲೀಸರು ಕೂಡ 6 ಲಕ್ಷ ಜನರು ಬರುವ ನಿರೀಕ್ಷೆಯನ್ನು ಹೊಂದಿದ್ದಾರೆ. ಅದಕ್ಕಾಗಿ ಅರಮನೆ ಮೈದಾನದಲ್ಲಿ ಪ್ರವೇಶ, ನಿರ್ಗಮನದ ವ್ಯವಸ್ಥೆ ಮಾಡುತ್ತಿದ್ದಾರೆ. 2,000 ವಿಐಪಿ ಗಳಿಗೆ ಆಸನ ವ್ಯವಸ್ಥೆ ಮಾಡಲಾಗುತ್ತದೆ. 15 ಸಾವಿರ ಜನರಿಗೆ ಗ್ಯಾಲರಿಯಲ್ಲಿ ಕುಳಿತು ನೋಡುವ ವ್ಯವಸ್ಥೆ ಮಾಡಲಾಗುತ್ತದೆ ಎಂದು ಮಾಹಿತಿ ಹಂಚಿಕೊಂಡರು.

ವೈವಿಧ್ಯಮಯ ಕಾರ್ಯಕ್ರಮ: ಅರಮನೆ ಮೈದಾನದಲ್ಲಿ ಒಂದೆಡೆ ಕಂಬಳ ನಡೆಯುತ್ತಿದ್ದರೆ, ಮತ್ತೊಂದೆಡೆ ಕರಾವಳಿಯ ಸಂಸ್ಕೃತಿಯನ್ನು ಬಿಂಬಿಸುವ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿದೆ. ಅಲ್ಲದೇ, ನೂರಕ್ಕೂ ಅಧಿಕ ಮಳಿಗೆಗಳಲ್ಲಿ ಕರಾವಳಿಯ ಆಹಾರ ಪದ್ಧತಿಗಳನ್ನು ಪರಿಚಯಿಸಲಾಗುವುದು ಎಂದು ಮಾಹಿತಿ ಕೊಟ್ಟರು.

ದಕ್ಷಿಣ ಕನ್ನಡದ ವೀರ ಕ್ರೀಡೆ ಕಂಬಳವನ್ನು ವಿಶ್ವಕ್ಕೆ ಪರಿಚಯ ಮಾಡುವ ನಿಟ್ಟಿನಲ್ಲಿ ಈ ಪ್ರಯತ್ನ. ಇದಕ್ಕೆ ಕಂಬಳ ಯಜಮಾನರು ಒಪ್ಪಿದ್ದಾರೆ. ಬೆಂಗಳೂರಿನ ಕಂಬಳವು ಕರಾವಳಿಯಲ್ಲಿ ನಡೆಯುವ ಕಂಬಳದಂತೆ ಆಯೋಜನೆಯಾಗಲಿದೆ. ಕಂಬಳಕ್ಕೆ ಸಂಬಂಧಿಸಿದಂತೆ ನೀತಿ ನಿಯಮಗಳನ್ನು, ಕಾನೂನುಗಳನ್ನು, ಸುಪ್ರೀಂ ಕೋರ್ಟ್ ಆದೇಶಗಳನ್ನು ಪಾಲಿಸಿಕೊಂಡು ವ್ಯವಸ್ಥೆ ಮಾಡಲಾಗುತ್ತಿದೆ ಎಂದು ತಿಳಿಸಿದರು.

ತುಳು ಭವನ ನಿರ್ಮಾಣದ ಗುರಿ: ಬೆಂಗಳೂರಿನಲ್ಲಿ ತುಳು ಭವನ ಮಾಡಬೇಕೆಂಬ ಗುರಿ ಹೊಂದಲಾಗಿದೆ. ಅದಕ್ಕೆ ಪೂರಕವಾಗಿ ಈ ಕಂಬಳವನ್ನು ಆಯೋಜಿಸಲಾಗುತ್ತಿದೆ ಎಂದರು.

145 ಮೀಟರ್ ಕೆರೆ: ಬೆಂಗಳೂರಿನ ಕಂಬಳಕ್ಕೆ 145 ಮೀಟರ್​ನ ಕಂಬಳ ಕೆರೆ ನಿರ್ಮಾಣ ಮಾಡಲಾಗುವುದು. ಗ್ಯಾಲರಿಯನ್ನು ದೊಡ್ಡ ಮಟ್ಟದಲ್ಲಿ ಮಾಡಲಾಗುವುದು. 6 ಸಾವಿರ ಕಾರ್​ ಪಾರ್ಕಿಂಗ್​ಗೆ ವ್ಯವಸ್ಥೆ ಮಾಡಲಾಗುವುದು ಎಂದರು.

ಸಚಿವರ ಆಸಕ್ತಿ: ಬೆಂಗಳೂರಿನಲ್ಲಿ ನಡೆಯುವ ಕಂಬಳದಲ್ಲಿ, ಸಚಿವರುಗಳು ತಮ್ಮ ಹೆಸರಿನಲ್ಲಿ ಕೋಣಗಳನ್ನು ಓಡಿಸಲು ಆಸಕ್ತರಾಗಿದ್ದಾರೆ. ರಾಜ್ಯದ 8 ಮಂತ್ರಿಗಳು ಈ ಬಗ್ಗೆ ವಿನಂತಿಸಿದ್ದಾರೆ. ಡಿಸಿಎಂ ಡಿ.ಕೆ ಶಿವಕುಮಾರ್ ಅವರು ಈ ಬಗ್ಗೆ ಕೇಳಿದ್ದಾರೆ. ಸ್ಪೀಕರ್ ಯು.ಟಿ ಖಾದರ್ ಅವರು ಕೂಡ ತಿಳಿಸಿದ್ದಾರೆ. ಇದು ಅವರ ಕಂಬಳದ ಬಗೆಗಿನ ಆಸಕ್ತಿಯನ್ನು ತೋರಿಸುತ್ತದೆ. ಆದರೆ ಈ ಪ್ರಸ್ತಾವನೆಗೆ ಕಂಬಳ ಕೋಣಗಳ ಯಜಮಾನರು ಮುಂದೆ ಬಂದಿಲ್ಲ ಎಂದರು.

ಕಾಂತಾರ ಬಳಿಕ ಜನರಲ್ಲಿ ಕಂಬಳದ ಬಗ್ಗೆ ಆಸಕ್ತಿ: ಕರಾವಳಿಯ ಕಂಬಳದ ಬಗ್ಗೆ ಕಾಂತರ ಸಿನಿಮಾದ ಬಳಿಕ ಜನರಲ್ಲಿ ಆಸಕ್ತಿ ಹೆಚ್ಚಳವಾಗಿದೆ. ಕಾಂತಾರ ಸಿನಿಮಾದ ಬಳಿಕ ಅದಕ್ಕೆ ಮೆರಗು ಸಿಕ್ಕಿದೆ. ಕಾಂತಾರ 2 ತಂಡವು ನಮ್ಮ ಸಹಕಾರ ಕೇಳಿದೆ ಎಂದರು.

ಬೆಂಗಳೂರಿನ ಮಣ್ಣಿನ, ನೀರಿನ ಪರೀಕ್ಷೆ: ಕರಾವಳಿಯ ಕಂಬಳವನ್ನು ಬೆಂಗಳೂರಿನಲ್ಲಿ ನಡೆಸುತ್ತಿರುವುದರಿಂದ, ಅಲ್ಲಿನ ಮಣ್ಣಿನ, ನೀರಿನ ಪರೀಕ್ಷೆಯನ್ನು ನಡೆಸಲಾಗಿದೆ. ನೀರಿನ ಟೆಸ್ಟ್ ರಿಪೋರ್ಟ್ ಪೂರಕವಾಗಿ ಬಂದಿದ್ದು, ಮಣ್ಣಿನ ರಿಪೋರ್ಟ್ ಇನ್ನಷ್ಟೇ ಬರಬೇಕಿದೆ. ಅದರ ಧಾರದ ಮೇಲೆ ಅಲ್ಲಿ ವ್ಯವಸ್ಥೆ ಮಾಡಲಾಗುವುದು. ಕೆರೆ ನಿರ್ಮಾಣ ಮಾಡುವ ಪರಿಣಿತರು ಬೆಂಗಳೂರಿನಲ್ಲಿ ಕಂಬಳದ ಕೆರೆ ನಿರ್ಮಾಣ ಮಾಡಲಿದ್ದಾರೆ. ಅವರು ಅಲ್ಲಿ ಹತ್ತು ದಿನ ಇದ್ದು, ಕರೆ ನಿರ್ಮಾಣ ಮಾಡಲಿದ್ದಾರೆ. ಆ ಬಳಿಕ ನಾಲ್ಕು ದಿನ ಪ್ರಾಯೋಗಿಕವಾಗಿ ಕೋಣಗಳನ್ನು ಓಡಿಸಲಾಗುತ್ತದೆ ಎಂದರು.

ಇದನ್ನೂ ಓದಿ: ಯಲ್ಲಮ್ಮದೇವಿ ಹುಂಡಿ ಎಣಿಕೆ ಕಾರ್ಯ: 40 ದಿನಗಳಲ್ಲಿ 1.03 ಕೋಟಿ ರೂ. ಮೌಲ್ಯದ ಕಾಣಿಕೆ ಸಂಗ್ರಹ

ಎಲ್ಲಾ ಕೋಣಗಳಿಗೆ ಮೆಡಲ್: ಬೆಂಗಳೂರಿಗೆ ಬಂದು ಭಾಗವಹಿಸುವ ಎಲ್ಲಾ ಕೋಣಗಳಿಗೆ ಮೆಡಲ್ ನೀಡಲಾಗುವುದು. ಮೊದಲ ಬಹುಮಾನವಾಗಿ ಎರಡು ಪವನ್ ಚಿನ್ನ, ಎರಡನೇ ಬಹುಮಾನವಾಗಿ ಒಂದು ಪವನ್ ಚಿನ್ನ ನೀಡಲಾಗುತ್ತದೆ ಎಂದು ತಿಳಿಸಿದರು.

Last Updated : Oct 1, 2023, 9:19 AM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.