ETV Bharat / state

ಕ್ವಾರಂಟೈನ್ ನಿಯಮ ಮುರಿದರೇ ಕಾಂಗ್ರೆಸ್‌ ಮುಖಂಡ ಮಿಥುನ್ ರೈ?

ಕ್ವಾರಂಟೈನ್​​ನಲ್ಲಿ‌ರಬೇಕಾದ ದಕ್ಷಿಣ ಕನ್ನಡ ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷ‌ ಮಿಥುನ್ ರೈ ಇಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರ ಜತೆ ಕಾಣಿಸಿಕೊಂಡಿದ್ದಾರೆ.

author img

By

Published : Jul 31, 2020, 9:07 PM IST

Mithun Rai broke the Quarantine rule
ಡಿಕೆಶಿ ಜೊತೆ ಮಿಥುನ್ ರೈ

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷ‌ ಮಿಥುನ್ ರೈ ಕ್ವಾರಂಟೈನ್ ನಿಯಮವನ್ನು ಉಲ್ಲಂಘಿಸಿದ್ದಾರೆಯೇ? ಎಂಬ ವಿಚಾರ ಭಾರಿ ಚರ್ಚೆಗೆ ಗ್ರಾಸವಾಗಿದೆ‌.

ಕ್ವಾರಂಟೈನ್​​ನಲ್ಲಿ‌ರಬೇಕಾದ ರೈ, ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಇಂದು ದ.ಕ. ಜಿಲ್ಲಾ ಪ್ರವಾಸ ಕೈಗೊಂಡಿರುವುದರಿಂದ ಅವರ ಜತೆ ಕಾಣಿಸಿಕೊಂಡಿದ್ದಾರೆ.

ಡಿಕೆಶಿ ಜತೆ ಮಿಥುನ್ ರೈ

ಜುಲೈ 17ರಂದು ತಮಗೆ ಕೊರೊನಾ ಸೋಂಕು ದೃಢಗೊಂಡಿದ್ದು, ಬೆಂಗಳೂರಿನಲ್ಲಿ ‌ಕ್ವಾರಂಟೈನ್​ಗೆ ಒಳಗಾಗಿದ್ದೇನೆ ಎಂದು ಮಿಥುನ್ ರೈ ಟ್ವೀಟ್ ಮಾಡಿ ತಿಳಿಸಿದ್ದರು.

  • I have been tested COVID19 positive & I am under Quarantine at Bangalore. With all your love and blessings, I will recover and be back soon at your service.

    My request to all those who were in close proximity with me in the last few days, kindly get yourselves checked for COVID.

    — Mithun Rai (@TheMithunRai) July 17, 2020 " class="align-text-top noRightClick twitterSection" data=" ">

ಬಳಿಕ‌ ಎಲ್ಲೂ ಕಾಣಿಸಿಕೊಳ್ಳದ ಅವರು, ಇಂದು‌ ಡಿಕೆಶಿಯವರ ಮಂಗಳೂರು ಭೇಟಿಯ ವೇಳೆ ಅವರ ಜತೆ ಕಾಣಿಸಿಕೊಂಡಿದ್ದಾರೆ. ಸರ್ಕಾರದ ನಿಯಮದಂತೆ ಕೊರೊನಾ ಸೋಂಕು ದೃಢಗೊಂಡಿರುವ ವ್ಯಕ್ತಿ ಕನಿಷ್ಠ 17 ದಿನಗಳ‌ ಕಾಲ ಕ್ವಾರಂಟೈನ್​​ಗೆ ಒಳಗಾಗುವುದು ಕಡ್ಡಾಯ. ಆದರೆ ಮಿಥುನ್ ರೈ 14 ದಿನದಲ್ಲೇ ಕ್ವಾರಂಟೈನ್ ನಿಯಮ ಮುರಿದಿದ್ದಾರೆಯೇ? ಎಂಬ ವಿಚಾರ ಚರ್ಚೆಗೊಳಗಾಗಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.