ETV Bharat / state

ಪ್ರತ್ಯೇಕ ರಾಜ್ಯ ಉಮೇಶ್ ಕತ್ತಿಯವರ ವೈಯಕ್ತಿಕ ಅಭಿಪ್ರಾಯ: ಸಚಿವ ಪ್ರಭು ಚೌಹಾಣ್​

author img

By

Published : Jun 30, 2022, 8:06 PM IST

ರಾಮಕುಂಜದಲ್ಲಿ ಜಿಲ್ಲಾ ಗೋಶಾಲೆಗೆ ಶಂಕುಸ್ಥಾಪನೆ ಮತ್ತು ಕೊಯಿಲದಲ್ಲಿ ಕೊಯಿಲ ಪಶುವೈದ್ಯಕೀಯ ಕಾಲೇಜು ಕಟ್ಟಡ ಕಾಮಗಾರಿ ಪರಿಶೀಲನೆ ಬಳಿಕ ಸಚಿವ ಪ್ರಭು ಚೌಹಾಣ್ ಸುದ್ದಿಗಾರರೊಂದಿಗೆ ಮಾತನಾಡಿದರು.

ಸಚಿವ ಪ್ರಭು ಚೌಹಾಣ್​
ಸಚಿವ ಪ್ರಭು ಚೌಹಾಣ್​

ಕಡಬ: ಪ್ರತ್ಯೇಕ ರಾಜ್ಯ ಬೇಕೆನ್ನುವ ಸಚಿವ ಉಮೇಶ್ ಕತ್ತಿ ಅವರ ಹೇಳಿಕೆ ಅವರ ವೈಯಕ್ತಿಕವಾದ ಅಭಿಪ್ರಾಯ. ಅದರ ಬಗ್ಗೆ ಸರ್ಕಾರಕ್ಕೆ ಗೊತ್ತಿಲ್ಲ ಎಂದು ಪಶುಸಂಗೋಪನಾ ಸಚಿವ ಪ್ರಭು ಚೌಹಾಣ್​ ಹೇಳಿದರು.

ಕಡಬದ ಕೊಯಿಲದಲ್ಲಿ ಪಶುವೈದ್ಯಕೀಯ ಕಾಲೇಜು ನಿರ್ಮಾಣ ಹಂತದಲ್ಲಿದ್ದು, ಶೀಘ್ರದಲ್ಲಿ ಅಂತಿಮಗೊಳಿಸಿ ಮುಂದಿನ ಆರು ತಿಂಗಳೊಳಗೆ ಶೈಕ್ಷಣಿಕ ತರಗತಿಗಳನ್ನು ಆರಂಭಿಸಲಾಗುವುದು. ಮುಂದಿನ ಡಿಸೆಂಬರ್ ಅಂತ್ಯಕ್ಕೆ ರಾಮಕುಂಜದಲ್ಲಿ ದ.ಕ.ಜಿಲ್ಲೆಯ ಸರ್ಕಾರಿ ಗೋಶಾಲೆ ಲೋಕಾರ್ಪಣೆಗೊಳ್ಳಲಿದೆ ಎಂದು ಅವರು ತಿಳಿಸಿದರು.

ಕೊಯಿಲದ ಪಶು ವೈದ್ಯಕೀಯ ಕಾಲೇಜು ಕಟ್ಟಡ ಕಾಮಗಾರಿಗೆ ಸರ್ಕಾರದ ಕಡೆಯಿಂದ ಅರ್ಥಿಕ ಸಹಕಾರಕ್ಕೆ ಕೊರತೆಯಾಗಿಲ್ಲ. ಹಂತ ಹಂತವಾಗಿ ಅನುದಾನ ಬಿಡುಗಡೆಗೊಳಿಸಲಾಗಿದೆ. ಕಾಮಗಾರಿ ಅಂತಿಮ ಹಂತಕ್ಕೆ ತಲುಪಿದೆ. ಶೀಘ್ರದಲ್ಲಿ ಲೋಕಾರ್ಪಣೆಗೊಳಿಸಲಾಗುವುದು. ನಿರ್ಮಾಣ ಹಂತದ ಕಟ್ಟಡಗಳಲ್ಲಿ ಮಳೆ ನೀರು ಸೋರುತ್ತಿದೆ ಎನ್ನುವ ಆರೋಪಕ್ಕೆ ಉತ್ತರಿಸಿದ ಸಚಿವರು, ಈ ಬಗ್ಗೆ ಕಾಮಗಾರಿ ಲೋಪವಾಗಿದೆಯೇ ಎಂದು ಇಂಜಿನಿಯರ್​ಗಳ ಮೂಲಕ ಪರಿಶೀಲಿಸಲಾಗುವುದು. ಲೋಪವಾದಲ್ಲಿ ಸರಿಪಡಿಸಿಕೊಡುವ ತನಕ ಬಿಲ್ಲು ಪಾವತಿ ತಡೆಹಿಡಿಯಲಾಗುವುದು ಎಂದರು.

ಇನ್ನು, ಮಂಗಳೂರಿನಲ್ಲಿ ಪಶು ಪಾಲಿ ಕ್ಲಿನಿಕ್ ಕಟ್ಟಡದಲ್ಲಿ ಸಣ್ಣ ಪುಟ್ಟ ಕೆಲಸಗಳು ಬಾಕಿಯಿವೆ. ಇದನ್ನೆಲ್ಲ ಶೀಘ್ರದಲ್ಲಿ ಮುಗಿಸಿ ಉದ್ಘಾಟನೆಗೊಳಿಸಲಾಗುವುದು ಎಂದು ಸಚಿವರು ಹೇಳಿದರು.

ದ.ಕ ಸಂಸದ ನಳಿನ್ ಕುಮಾರ್ ಕಟೀಲ್ ಮಾತನಾಡಿ, ಕೃಷಿ ಸಂಸ್ಕೃತಿಯ ಭಾಗವಾಗಿರುವ ಗೋವುಗಳನ್ನು ಕಟುಕರ ಕೈಗೆ ಸಿಗದಂತೆ ಮಾಡಲು ಸರ್ಕಾರ ಗೋಶಾಲೆಗಳನ್ನು ತೆರೆಯುತ್ತಿದೆ. ಗೋಪಾಲಕರು ಇದನ್ನು ಸದುಪಯೋಗಪಡಿಸಿಕೊಳ್ಳಿ ಎಂದು ಮನವಿ ಮಾಡಿದರು.

ಇದನ್ನೂ ಓದಿ: ಸಾಲುಮರದ ತಿಮ್ಮಕ್ಕ ಪರಿಸರದ ರಾಯಭಾರಿ, ಸರ್ಕಾರದಿಂದ ವಿಶೇಷ ಸೌಲಭ್ಯ: ಸಿಎಂ ಬೊಮ್ಮಾಯಿ

For All Latest Updates

TAGGED:

ETV Bharat Logo

Copyright © 2024 Ushodaya Enterprises Pvt. Ltd., All Rights Reserved.