ETV Bharat / state

ಯತ್ನಾಳ್ ಅವರಂಥ ಶಾಸಕರ ನಡವಳಿಕೆಗಳು ಪಕ್ಷಕ್ಕೆ ಗೌರವ ತರುವಂಥದ್ದಲ್ಲ: ಸದಾನಂದಗೌಡ - ಯತ್ನಾಳ್ ಹೇಳಿಕೆ ಕುರಿತು ಡಿವಿಎಸ್​ ಪ್ರತಿಕ್ರಿಯೆ

ಶಾಸಕ ಬಸನಗೌಡ ಪಾಟೀಲ್​ ಯತ್ನಾಳ್ ಅವರ ವಿರುದ್ಧ ಸ್ವಪಕ್ಷೀಯರಿಂದಲೇ ಅಸಮಾಧಾನದ ಮಾತುಗಳು ಕೇಳಿಬರುತ್ತಿವೆ. ನಾಯಕತ್ವ ಕುರಿತಂತೆ ಪಾಟೀಲ್ ಹೇಳಿಕೆಗಳಿಗೆ ಇದೀಗ ಕೇಂದ್ರ ಸಚಿವ ಸದಾನಂದಗೌಡ ತಿರುಗೇಟು ನೀಡಿದ್ದು, ಇದು ಪಕ್ಷಕ್ಕೆ ಗೌರವ ತರುವಂಥದ್ದಲ್ಲ ಎಂದಿದ್ದಾರೆ.

Minister DV sadanada gowda
ಕೇಂದ್ರ ಸಚಿವ ಸದಾನಂದ ಗೌಡ
author img

By

Published : Dec 26, 2020, 7:20 PM IST

Updated : Dec 26, 2020, 7:34 PM IST

ಬಂಟ್ವಾಳ ( ದಕ್ಷಿಣ ಕನ್ನಡ): ಶಿಸ್ತುಬದ್ಧ ಪಕ್ಷವಾದ ಬಿಜೆಪಿಯಲ್ಲಿ ಯತ್ನಾಳ್ ಅವರಂಥ ಶಾಸಕರ ನಡವಳಿಕೆಗಳು ಪಕ್ಷಕ್ಕೆ ಗೌರವ ತರುವಂಥದ್ದಲ್ಲ. ಇವುಗಳನ್ನು ಪಕ್ಷದ ನಾಯಕತ್ವ ಗಮನಿಸುತ್ತಿದ್ದು, ಕ್ರಮ ಕೈಗೊಳ್ಳುವ ವಿಚಾರ ಅವರಿಗೆ ಬಿಟ್ಟದ್ದು ಎಂದು ಕೇಂದ್ರ ಸಚಿವ ಡಿ.ವಿ.ಸದಾನಂದಗೌಡ ಹೇಳಿದ್ದಾರೆ.

ಯತ್ನಾಳ್ ಹೇಳಿಕೆ ಕುರಿತು ಡಿವಿಎಸ್​ ಪ್ರತಿಕ್ರಿಯೆ

ದಕ್ಷಿಣ ಕನ್ನಡದ ಕಲ್ಲಡ್ಕದಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಲು ಆಗಮಿಸಿದ್ದ ವೇಳೆ ಮಾತನಾಡಿದ ಅವರು, ಬಸನಗೌಡ ಪಾಟೀಲ್ ಯತ್ನಾಳ್ ಅವರ ಇತ್ತೀಚಿನ ಹೇಳಿಕೆಗಳ ಕುರಿತು ಸುದ್ದಿಗಾರರ ಪ್ರಶ್ನೆಗಳಿಗೆ ಉತ್ತರಿಸಿ, ಇತ್ತೀಚಿನ ದಿನಗಳಲ್ಲಿ ಅವರ ನಡವಳಿಕೆಗಳು, ಪಕ್ಷ ನಾಯಕತ್ವದ ಕುರಿತ ಹೇಳಿಕೆಗಳು ಬಿಜೆಪಿ ಶಾಸಕರಾಗಿ ಶೋಭೆ ತರುವಂಥದ್ದಲ್ಲ. ಹಿಂದೆ ನಾನು ಪಕ್ಷದ ರಾಜ್ಯಾಧ್ಯಕ್ಷನಾಗಿದ್ದಾಗ ಅವರ ವಿರುದ್ಧ ಶಿಸ್ತು ಕ್ರಮ ಕೈಗೊಂಡಿದ್ದೆ ಎಂದರು.

ಇಂದಿಗೂ ಅವರು ಸರಿಯಾಗುವುದಿಲ್ಲ ಎಂದಾದರೆ ಪಕ್ಷದ ನಾಯಕರು ಗಮನ ಹರಿಸಬಹುದು. ಶಿಸ್ತುಬದ್ಧ ಪಕ್ಷ ಎಂದಾದ ಮೇಲೆ ನಾವೆಲ್ಲರೂ ಶಿಸ್ತಿನಿಂದ ಕೆಲಸ ಮಾಡಲು ಪ್ರಯತ್ನಿಸಬೇಕು ಎಂದರು.

ಇದನ್ನೂ ಓದಿ: ನಾಯಕತ್ವದ ಬಗ್ಗೆ ಮಾತನಾಡಲು ಬಸನಗೌಡ ಪಾಟೀಲ್ ಯತ್ನಾಳ್​ ಯಾರು: ಡಿವಿಎಸ್ ಕಿಡಿ

Last Updated : Dec 26, 2020, 7:34 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.