ETV Bharat / state

ಕ್ಷೇತ್ರದಲ್ಲಿ ಹದಗೆಟ್ಟ ರಸ್ತೆ.. ಜೀಪಿನಿಂದ ಕೆಳಗಿಳಿದು ಕಾಲ್ನಡಿಗೆಯಲ್ಲೇ ತೆರಳಿದ ಸಚಿವ ಅಂಗಾರ! - Sullia News

ಸಚಿವ ಎಸ್​ ಅಂಗಾರ ತೆರಳುತ್ತಿದ್ದ ಜೀಪ್​ ರಸ್ತೆ ಸರಿಯಿಲ್ಲದ ಕಾರಣ ಮುಂದೆ ಹೋಗದೆ ಅಲ್ಲೇ ನಿಂತಿದೆ. ಈ ಪರಿಣಾಮ ಜೀಪ್​ನಿಂದ ಇಳಿದ ಸಚಿವರು ದಾರಿಯುದ್ದಕ್ಕೂ ಕಾಲ್ನಡಿಗೆಯಲ್ಲೇ ಹೋಗಿದ್ದಾರೆ. ಇದರ ವಿಡಿಯೋ ಈಗ ವೈರಲ್​ ಆಗಿದೆ.

sulliaMinister Angara Jeep struck in mud road at sullia
ಜೀಪಿನಿಂದ ಕೆಳಗಿಳಿದು ನಡೆದ ಸಚಿವ ಅಂಗಾರ
author img

By

Published : Aug 9, 2021, 11:46 AM IST

Updated : Aug 9, 2021, 1:19 PM IST

ಸುಳ್ಯ: ಸಚಿವ ಎಸ್​ ಅಂಗಾರ ಸುಳ್ಯದಲ್ಲಿ 6 ಬಾರಿ ಶಾಸಕರಾಗಿ ಕೆಲಸ ಮಾಡಿದ್ದಾರೆ. ಇದೀಗ ಸಚಿವರಾಗಿಯೂ ಸೇವೆ ಸಲ್ಲಿಸುತ್ತಿದ್ದಾರೆ. ಆದರೆ ಇಲ್ಲಿನ ಕೆಲ ಪ್ರದೇಶಗಳು ಇನ್ನೂ ಸಹ ಅಭಿವೃದ್ಧಿಯಾಗದೆ ಉಳಿದಿವೆ. ಇದರ ಸ್ವ ಅನುಭವ ಸಚಿವರಿಗೆ ಆಗಿದೆ.

ಹೌದು, ಸಚಿವರು ತೆರಳುತ್ತಿದ್ದ ಜೀಪ್​ ರಸ್ತೆ ಸರಿಯಿಲ್ಲದ ಕಾರಣ ಮುಂದೆ ಹೋಗದೆ ಅಲ್ಲೇ ನಿಂತಿದೆ. ಈ ಪರಿಣಾಮ ಜೀಪ್​ನಿಂದ ಇಳಿದ ಸಚಿವರು ದಾರಿಯುದ್ದಕ್ಕೂ ನಡೆದುಕೊಂಡು ಹೋಗಿದ್ದಾರೆ. ಇದರ ವಿಡಿಯೋ ಈಗ ವೈರಲ್​ ಆಗಿದೆ. ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲೂಕಿನಲ್ಲಿ 6 ಬಾರಿ ಗೆದ್ದು, ಗೆಲುವಿನ ಸರದಾರನಾಗಿರುವ ಬಂದರು ಮತ್ತು ಮೀನುಗಾರಿಕೆ ಸಚಿವ ಎಸ್. ಅಂಗಾರ ಅಲೆಟ್ಟಿಯ ಕಚ್ಚಾ ರಸ್ತೆಯಲ್ಲಿ ತೆರಳುತ್ತಿರುವಾಗ ಈ ಘಟನೆ ನಡೆದಿದೆ.

ಹದೆಗೆಟ್ಟ ರಸ್ತೆಯಲ್ಲಿ ಪರದಾಡಿದ ಸಚಿವ ಎಸ್​. ಅಂಗಾರ

ಸಚಿವ ಅಂಗಾರರ ತವರು ಕ್ಷೇತ್ರ ಸುಳ್ಯದಲ್ಲಿ ಈಗಾಗಲೇ ಹಲವು ಮೂಲಸೌಕರ್ಯಗಳ ಕೊರತೆಯಿದೆ. ಇತ್ತೀಚೆಗೆ ಇದೇ ಕ್ಷೇತ್ರ ವ್ಯಾಪ್ತಿಯ ಒಂದು ಗ್ರಾಮದಲ್ಲಿ ಅಲ್ಲಿನ ಜನರೇ ಹಣ ಹೊಂದಿಸಿ ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ಸೇತುವೆಯೊಂದನ್ನು ನಿರ್ಮಿಸಿದ್ದರು.

Last Updated : Aug 9, 2021, 1:19 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.