ETV Bharat / state

ಕೊರೊನಾ ಕರ್ಫ್ಯೂ ಜಾರಿ: ಮಂಗಳೂರಿನಿಂದ ಪ್ರಯಾಣ ಬೆಳೆಸಿದ ವಲಸೆ ಕಾರ್ಮಿಕರು - ಮಂಗಳೂರು ತ್ಯಜಿಸಿದ ವಲಸೆ ಕಾರ್ಮಿಕರು

ರಾಜ್ಯದಲ್ಲಿ 14 ದಿನಗಳ ಕೋವಿಡ್​ ಕರ್ಫ್ಯೂ ಘೋಷಣೆಯಾದ ಬೆನ್ನಲೇ ಮಂಗಳೂರಿನಲ್ಲಿ ನೆಲೆಸಿದ್ದ ರಾಜ್ಯದ ವಿವಿಧ ಜಿಲ್ಲೆಗಳ ವಲಸೆ ಕಾರ್ಮಿಕರು ತಮ್ಮ-ತಮ್ಮ ಊರುಗಳಿಗೆ ತೆರಳಲು ಬಸ್​ ನಿಲ್ದಾಣಗಳಲ್ಲಿ ಜಮಾಯಿಸಿದ್ದಾರೆ.

migrant labours
migrant labours
author img

By

Published : Apr 26, 2021, 5:59 PM IST

Updated : Apr 26, 2021, 6:19 PM IST

ಮಂಗಳೂರು: ರಾಜ್ಯ ಸರಕಾರ ನಾಳೆ ರಾತ್ರಿಯಿಂದ 14 ದಿನ ಕೋವಿಡ್​ ಕರ್ಫ್ಯೂ ಜಾರಿಗೊಳಿಸಿದ್ದು, ನಗರದಿಂದ ವಲಸೆ ಕಾರ್ಮಿಕರು ತಮ್ಮ ತಮ್ಮ ಊರಿಗೆ ಪ್ರಯಾಣ ಬೆಳೆಸಲು ಆರಂಭಿಸಿದ್ದಾರೆ‌. ಹೀಗಾಗಿ ಕೆಎಸ್ಆರ್​ಟಿಸಿ ಬಸ್ ನಿಲ್ದಾಣ ಪೂರ್ತಿ‌ ಜನ ಜಂಗುಳಿಯಿಂದ ತುಂಬಿದೆ.

ಮಂಗಳೂರಿನಿಂದ ಪ್ರಯಾಣ ಬೆಳೆಸಿದ ವಲಸೆ ಕಾರ್ಮಿಕರು

ರಾಜ್ಯದ ವಿವಿಧ ಜಿಲ್ಲೆಗಳಿಂದ ಆಗಮಿಸಿರುವ ವಲಸೆ ಕಾರ್ಮಿಕರು ಮಂಗಳೂರು ನಗರದಲ್ಲಿ ಬದುಕು ಕಟ್ಟಿಕೊಂಡಿದ್ದರು‌. ಆದರೆ, ಇದೀಗ ರಾಜ್ಯ ಸರ್ಕಾರ 14 ದಿನಗಳ ಲಾಕ್​ಡೌನ್ ಘೋಷಣೆ ಮಾಡಿದ್ದು, ಎಲ್ಲರೂ ಸಾಮಾನು ಸರಂಜಾಮುಗಳೊಂದಿಗೆ ತಮ್ಮ ಊರುಗಳಿಗೆ ಪ್ರಯಾಣ ಬೆಳೆಸಿದ್ದಾರೆ. ಕರ್ಫ್ಯೂ ಹಿನ್ನೆಲೆ ಕೆಲಸಗಳಿಲ್ಲದಿರುವುದರಿಂದ ಎಲ್ಲರೂ ತಮ್ಮ ಊರುಗಳಿಗೆ ಪ್ರಯಾಣ ಬೆಳೆಸಿದ್ದಾರೆ. ರಾಯಚೂರು, ಕುಷ್ಟಗಿ, ಗದಗ, ಬಾದಾಮಿ, ಬಿಜಾಪುರ ಮುಂತಾದ ಕಡೆಗಳಿಗೆ ಹೊರಟಿರುವ ವಲಸಿಗ ಕಾರ್ಮಿಕರು ಕೆಎಸ್​ಆರ್​ಟಿಸಿ ಬಸ್​ ನಿಲ್ದಾಣದಲ್ಲಿ ಜಮಾಯಿಸಿದ್ದಾರೆ.

Last Updated : Apr 26, 2021, 6:19 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.