ಮಂಗಳೂರು: ಮೆಸ್ಕಾಂ ವಿಜಿಲೆನ್ಸ್ ಅಧಿಕಾರಿಯೊಬ್ಬರು ಗ್ರಾಹಕರೋರ್ವರಿಗೆ ಸ್ಕೇಲ್ನಲ್ಲಿ ಹಲ್ಲೆ ಮಾಡಿರುವ ಘಟನೆ ನಡೆದಿದೆ. ಗ್ರಾಹಕರ ಮೊಬೈಲ್ನಲ್ಲೇ ಹಲ್ಲೆ ನಡೆಸಿರುವ ದೃಶ್ಯ ಸೆರೆಯಾಗಿದೆ.
ನಗರದ ಅತ್ತಾವರ ಮೆಸ್ಕಾಂ ವಿಭಾಗದಲ್ಲಿ ಪ್ರವೀಣ್ ಬಂಗೇರ ಎಂಬವರು ವಿಜಿಲೆನ್ಸ್ ಅಧಿಕಾರಿಯಾಗಿದ್ದು, ಅವರ ಬಳಿಗೆ ಬಂದ ಗ್ರಾಹಕರೋರ್ವರು 'ತಮಗೆ ಕರೆ ಮಾಡಿದ್ದೆ, ಆದರೆ ತಾವು ಕರೆ ಎತ್ತಿಲ್ಲ' ಎಂದು ಹೇಳಿದ್ದಾರೆ. ಈ ಸಂದರ್ಭ ಮಾತಿಗೆ ಮಾತು ಬೆಳೆದು ಗ್ರಾಹಕ ಏಕಾಏಕಿ 'ಫೋನ್ ಕರೆ ಸ್ವೀಕರಿಸದ ತಮ್ಮನ್ನು ದೊಣ್ಣೆಯಿಂದ ಹೊಡೆಯಬೇಕು' ಎಂದಿದ್ದಾರೆ.
ಇದರಿಂದ ಕುಪಿತಗೊಂಡ ವಿಜಿಲೆನ್ಸ್ ಅಧಿಕಾರಿ ಅಲ್ಲೇ ಇದ್ದ ಸ್ಟೀಲ್ ಸ್ಕೇಲ್ನಲ್ಲಿ ಗ್ರಾಹಕರಿಗೆ ನಾಲ್ಕೈದು ಏಟು ಹೊಡೆದಿದ್ದಾರೆ. ಅಲ್ಲದೆ ತಮಗೆ ತಾಕತ್ತಿದ್ದರೆ ದೊಣ್ಣೆಯಿಂದ ಹೊಡೆದು ನೋಡು' ಎಂದು ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ.ಇದೀಗ ಈ ವಿಡಿಯೋ ವೈರಲ್ ಆಗಿದೆ.