ಮಂಗಳೂರು: ವಿಶ್ವವಿದ್ಯಾನಿಲಯದ ಸಿಂಡಿಕೇಟ್ಗೆ ಇಬ್ಬರು ಸದಸ್ಯರನ್ನು ರಾಜ್ಯಪಾಲರು ಮೂರು ವರ್ಷದ ಅವಧಿಗೆ ನಾಮ ನಿರ್ದೇಶನ ಮಾಡಿದ್ದಾರೆ.
ಉಡುಪಿ ಜಿಲ್ಲೆಯ ಇಂದ್ರಾಳಿಯ ಪ್ರೊ. ಕರುಣಾಕರ್ ಎ. ಕೋಟೆಗಾರ್ ಹಾಗೂ ಮಂಗಳೂರಿನ ಮಣ್ಣಗುಡ್ಡದ ಗಾಂಧಿನಗರದ ರವಿಚಂದ್ರ ಪಿ.ಎಂ. ಎಂಬುವರನ್ನು ಸದಸ್ಯರನ್ನಾಗಿ ಆಯ್ಕೆ ಮಾಡಲಾಗಿದೆ. ಪ್ರೊ. ಕರುಣಾಕರ್ ಎ.ಕೋಟೆಗಾರ್ ಮಣಿಪಾಲ ವಿವಿಯಲ್ಲಿ ಪ್ರಾಧ್ಯಾಪಕರಾಗಿದ್ದು, ರವಿಚಂದ್ರ ಪಿ.ಎಂ. ವಕೀಲರಾಗಿದ್ದಾರೆ. ಈ ಇಬ್ಬರನ್ನೂ ರಾಜ್ಯಪಾಲರು ಮೂರು ವರ್ಷದ ಅವಧಿಗೆ ನಾಮ ನಿರ್ದೇಶನ ಮಾಡಿದ್ದಾರೆ.