ETV Bharat / state

ವೇದಾಧ್ಯಯನ, ಪೌರೋಹಿತ್ಯಕ್ಕೂ ಸೈ.. ಗಮನಸೆಳೆದ ಬಂಟ್ವಾಳದ ಬಾಲಕಿ ಅನಘಾ

ಹೆಚ್ಚಾಗಿ ಪುರುಷರು ಮಾತ್ರ ಮಾಡುವ ಪೌರೋಹಿತ್ಯ ಕಾರ್ಯದಲ್ಲಿ ಬಾಲಕಿಯೊಬ್ಬಳು ತೊಡಗಿಸಿಕೊಂಡು ಗಮನ ಸೆಳೆದಿದ್ದಾಳೆ. ಮನೆಯಲ್ಲೇ ವೇದ ಪಾಠ ನಡೆಯುವುದರಿಂದ ಬಾಲಕಿಯ ಆಸಕ್ತಿಗೆ ಅದು ಪೂರಕ ವಾತಾವರಣ ನಿರ್ಮಿಸಿಕೊಟ್ಟಿದೆ.

Meet the Bantwal Girl who is Master in Vedha Practice
ವೇದಾಧ್ಯಯನ ತೊಡಗಿರುವ ಅನಘಾ
author img

By

Published : Jun 27, 2021, 10:34 AM IST

Updated : Jun 27, 2021, 10:14 PM IST

ಬಂಟ್ವಾಳ(ದಕ್ಷಿಣ ಕನ್ನಡ) : ವೇದಾಧ್ಯಯನ, ಪೌರೋಹಿತ್ಯದಲ್ಲಿ ಹುಡುಗಿಯರು ಕಾಣಸಿಗುವುದು ಅತಿವಿರಳ. ಆದರೆ, ಇಲ್ಲೋರ್ವ ಬಾಲಕಿ ಸ್ವಇಚ್ಛೆಯಿಂದ ಪೌರೋಹಿತ್ಯದಲ್ಲಿ ತೊಡಗಿಸಿಕೊಂಡಿದ್ದಾಳೆ. ರಾಜ್ಯ ಧಾರ್ಮಿಕ ಪರಿಷತ್ತಿನ ಸದಸ್ಯರೂ ಆಗಿರುವ ತಾಲೂಕಿನ ಕಶೆಕೋಡಿಯ ಸೂರ್ಯನಾರಾಯಣ ಭಟ್ಟರ ಪುತ್ರಿ ಅನಘಾ, ವೇದಾಧ್ಯಯನ ಮಾಡಿದ್ದು, ತಂದೆ ಜೊತೆ ಮದುವೆ ಸಮಾರಂಭಗಳಲ್ಲಿ ಸಹಾಯಕಳಾಗಿ ಪೌರೋಹಿತ್ಯ ಮಾಡುವಷ್ಟು ಸಮರ್ಥಳಾಗಿದ್ದಾಳೆ.

ವೇದಾಧ್ಯಯನ ತೊಡಗಿರುವ ಅನಘಾ

ಬಂಟ್ವಾಳ ತಾಲೂಕಿನ ದಾಸಕೋಡಿ ಸಮೀಪ ಕಶೆಕೋಡಿಯ ಪುರೋಹಿತ, ವೈದಿಕ ಮನೆತನದ ಸೂರ್ಯನಾರಾಯಣ ಭಟ್ಟರ ಮನೆಯಲ್ಲಿ ನಿತ್ಯವೂ ವೇದಾಧ್ಯಯನ ನಡೆಯುತ್ತದೆ. ಜೊತೆಗೆ ಸಂಗೀತ, ಗೀತಾಧ್ಯಯನಕ್ಕೂ ಮಕ್ಕಳು ಬರುತ್ತಾರೆ. ವೈದಿಕ ಮನೆತನ ಅನಘಾಗೆ ಇದು ಪೂರಕ ವಾತಾವರಣ ಕಲ್ಪಿಸಿಕೊಟ್ಟಿದೆ.

ಬಾಲ್ಯದಲ್ಲೇ ವೇದ ಪಾಠವನ್ನು ಆಸಕ್ತಿಯಿಂದ ಗಮನಿಸುತ್ತಿದ್ದ ಅನಘಾ, ತಂದೆಯ ಜೊತೆ ವೇದಾಭ್ಯಾಸ ಮಾಡುವ ಕುರಿತು ಕೇಳಿಕೊಂಡಾಗ, ಸಂತೋಷದಿಂದಲೇ ಮಗಳಿಗೆ ಪಾಠ ಹೇಳಲು ಆರಂಭಿಸಿದ್ದರು. ಅನಘಾಳ ತಮ್ಮ ಆದಿತ್ಯಕೃಷ್ಣ ಈಗಾಗಲೇ ವೇದಾಭ್ಯಾಸ, ಪೌರೋಹಿತ್ಯದಲ್ಲಿ ಸಾಕಷ್ಟು ಆಸಕ್ತಿ ತೋರಿದ್ದು, ಅಭ್ಯಾಸನಿರತನಾಗಿದ್ದಾನೆ.

ಓದಿ : ಧರ್ಮಾತೀತವಾಗಿ 'ಗ್ರಾಮಸೇತು' ನಿರ್ಮಾಣ; ಕೈಜೋಡಿಸಿದ ಚರ್ಚ್ ಧರ್ಮಗುರು

ಮೊದಲೇ ಆಸಕ್ತಿ ಇತ್ತು, ಮನೆಯಲ್ಲಿ ಅದಕ್ಕೆ ಪೂರಕ ವಾತಾವರಣ ಇತ್ತು. ಹಾಗಾಗಿ, ವೇದಾಧ್ಯಯನದಲ್ಲಿ ತೊಡಗಿಸಿಕೊಂಡೆ. ಸಂಸ್ಕೃತ ಭಾಷೆ, ವೇದಭ್ಯಾಸವನ್ನು ಇನ್ನಷ್ಟು ಮಾಡಬೇಕಿದೆ ಎನ್ನುತ್ತಾಳೆ ಬಾಲಕಿ ಅನಘಾ.

ಅನಘಾ ವೇದಾಧ್ಯಯನದಲ್ಲಿ ನಿರತಳಾಗಿರುವುದನ್ನು ಕಂಡು ಆರ್​ಎಸ್​ಎಸ್​ ಮುಖಂಡ ಕಲ್ಲಡ್ಕ ಪ್ರಭಾಕರ ಭಟ್ ಖುಷಿಪಟ್ಟಿದ್ದಾರೆ. ಶಾಲೆಯಲ್ಲಿ ಹೆಣ್ಣು ಮಕ್ಕಳಿಗೆ ಸ್ಫೂರ್ತಿಯಾಗಿ ಇನ್ನಷ್ಟು ಅಧ್ಯಯನ ಮುಂದುವರಿಸಲು ಸಲಹೆ ನೀಡಿದ್ದಾರೆ. ಇದರಿಂದ ಅನಘಾಗೆ ಮತ್ತಷ್ಟು ಪ್ರೋತ್ಸಾಹ ದೊರಕಿತು ಎನ್ನುತ್ತಾರೆ ಅನಘಾಳ ತಂದೆ ಕಶೆಕೋಡಿ ಸೂರ್ಯನಾರಾಯಣ ಭಟ್.

Last Updated : Jun 27, 2021, 10:14 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.