ETV Bharat / state

ಮಂಗಳೂರು ಗೋಲಿಬಾರ್​ ಪ್ರಕರಣ: ಪ್ರತೀಕಾರವಾಗಿ ಪೊಲೀಸರ ಮೇಲೆ ಹಲ್ಲೆ ಮಾಡಿದ್ದ ಮಾಯಾ ಗ್ಯಾಂಗ್​ ಅಂದರ್​ - Mangalore

ಪೊಲೀಸ್ ಸಿಬ್ಬಂದಿ ಮೇಲೆ ಹಲ್ಲೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಆರಂಭದಲ್ಲಿ ಓರ್ವ ಅಪ್ರಾಪ್ತ ಬಾಲಕ ಮತ್ತು ಮುಹಮ್ಮದ್ ನವಾಜ್ ಎಂಬುವರನ್ನು ಬಂಧಿಸಲಾಗಿತ್ತು. ಇದೀಗ ಮಂಗಳೂರು ನಗರ ಪೊಲೀಸರು 6 ಮಂದಿಯನ್ನು ಬಲೆಗೆ ಕೆಡವಿದ್ದಾರೆ. ಪೊಲೀಸರ ಮೇಲೆ ದ್ವೇಷ ಸಾಧನೆಗೆ ಮುಂದಾಗಿದ್ದ ಈ ಗ್ಯಾಂಗ್​ ಈಗ ಅಂದರ್​ ಆಗಿದೆ.

mangalore
ಮಾಯಾ ಗ್ಯಾಂಗ್​ನ 6 ಮಂದಿ ಬಂಧನ
author img

By

Published : Jan 19, 2021, 3:34 PM IST

ಮಂಗಳೂರು: ನಗರದಲ್ಲಿ ಕಳೆದ ವರ್ಷ ನಡೆದ ಗೋಲಿಬಾರ್ ಪ್ರಕರಣಕ್ಕೆ ಸಂಬಂಧಿಸಿದಂತೆ ದ್ವೇಷ ಸಾಧಿಸಲು ಪೊಲೀಸ್ ಸಿಬ್ಬಂದಿ ಮೇಲೆ ಹಲ್ಲೆ ನಡೆಸಿದ ಆರು ಮಂದಿಯನ್ನು ಬಂಧಿಸಲಾಗಿದೆ ಎಂದು ಮಂಗಳೂರು ನಗರ ಪೊಲೀಸ್ ಕಮಿಷನರ್ ಶಶಿಕುಮಾರ್ ತಿಳಿಸಿದ್ದಾರೆ.

ಮಂಗಳೂರು ನಗರ ಪೊಲೀಸ್ ಕಮಿಷನರ್ ಶಶಿಕುಮಾರ್..

ಮಾಧ್ಯಮಗೋಷ್ಟಿಯಲ್ಲಿ ಮಾತನಾಡಿದ ಅವರು, ಮಂಗಳೂರಿನ ನ್ಯೂ ಚಿತ್ರಾ ಸಿನಿಮಾ ಮಂದಿರ ಬಳಿ ಡಿ.16 ರಂದು ಚೆಕ್ ಪೋಸ್ಟ್ ನಲ್ಲಿದ್ದ ಗಣೇಶ್ ಕಾಮತ್ ಎಂಬ ಪೊಲೀಸ್ ಸಿಬ್ಬಂದಿ ಮೇಲೆ ಹಲ್ಲೆ ನಡೆದಿತ್ತು. 2019ರ ಡಿ. 19 ರಂದು ಮಂಗಳೂರಿನಲ್ಲಿ ಸಿಎಎ ವಿರುದ್ಧ ಪ್ರತಿಭಟನೆ ನಡೆಸಿದ ಸಂದರ್ಭದಲ್ಲಿ ಇಬ್ಬರು ಪ್ರತಿಭಟನಕಾರರು ಸಾವಿಗೀಡಾಗಿದ್ದರು. ಸಾವನ್ನಪ್ಪಿದ್ದ ವ್ಯಕ್ತಿಯ ಪರಿಚಿತವಾಗಿದ್ದ ಮಾಯಾ ಗ್ಯಾಂಗ್ ಗೋಲಿಬಾರ್ ಘಟನೆಗೆ ಪ್ರತೀಕಾರವಾಗಿ ಈ ಕೃತ್ಯ ಎಸಗಿದ್ದು ಇದೀಗ ಬೆಳಕಿಗೆ ಬಂದಿದೆ ಎಂದು ತಿಳಿಸಿದರು.

ಪೊಲೀಸ್ ಸಿಬ್ಬಂದಿ ಮೇಲೆ ಹಲ್ಲೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಆರಂಭದಲ್ಲಿ ಓರ್ವ ಅಪ್ರಾಪ್ತ ಬಾಲಕ ಮತ್ತು ಮುಹಮ್ಮದ್ ನವಾಜ್ ಎಂಬುವರನ್ನು ಬಂಧಿಸಲಾಗಿತ್ತು. ಇದೀಗ ಮಂಗಳೂರು ನಗರ ಪೊಲೀಸರು ಆರು ಮಂದಿಯನ್ನು ಬಂಧಿಸಿದ್ದಾರೆ. ಮಂಗಳೂರಿನ ಕುದ್ರೋಳಿಯ ಅನೀಶ್ ಅಶ್ರ (22), ಅಬ್ದುಲ್ ಖಾದರ್ ಫಹಾದ್ (23), ಶೇಖ್ ಮಹಮ್ಮದ್ ಹ್ಯಾರಿಸ್ ಯಾನೆ ಜಿಗ್ರಿ (31), ಮುಹಮ್ಮದ್ ಖಾಯೀಸ್ (24), ರಾಹೀಲ್ ಯಾನೆ ಚೋಟು ರಾಹಿಲ್ (18), ಮುಹಮ್ಮದ್ ನವಾಜ್ (30) ಬಂಧಿತ ಆರೋಪಿಗಳು. ಪ್ರಕರಣದಲ್ಲಿ ಈವರೆಗೆ ಬಂಧಿತರ ಸಂಖ್ಯೆ 8ಕ್ಕೆ ಏರಿಕೆಯಾಗಿದೆ ಎಂದು ಕಮಿಷನರ್ ಶಶಿಕುಮಾರ್ ಹೇಳಿದರು.

ಓದಿ: ಪೊಲೀಸ್ ಸಿಬ್ಬಂದಿ ಮೇಲೆ ಹಲ್ಲೆ ಪ್ರಕರಣ: ಸಿಸಿಟಿವಿ ದೃಶ್ಯ ಆಧರಿಸಿ ಆರೋಪಿಗಳಿಗಾಗಿ ಶೋಧ

ಮಾಯಾ ಗ್ಯಾಂಗ್ ಕೃತ್ಯ:
ಪೊಲೀಸ್ ಸಿಬ್ಬಂದಿ ಗಣೇಶ್ ಕಾಮತ್ ಅವರಿಗೆ ಹಲ್ಲೆ ಮಾಡಿರುವ ಪ್ರಕರಣದಲ್ಲಿ ಬಂಧಿತರಾಗಿರುವವರು ಮಾಯಾ ಗ್ಯಾಂಗ್ ಎಂಬ ತಂಡ ಕಟ್ಟಿಕೊಂಡಿದ್ದರು. ಮಾಯ ಗ್ಯಾಂಗ್ , ಮಾಯಾ ಟ್ರೂಪ್, ಮಾಯಾ ಟೀಮ್ ಎಂದು ಕರೆಸಿಕೊಳ್ಳುತ್ತಿದ್ದ ಈ ತಂಡ ಆರಂಭದಲ್ಲಿ ಡಿ.19 ರಂದು ಪೊಲೀಸ್ ಮೇಲೆ ಹಲ್ಲೆಗೆ ಸ್ಕೆಚ್ ಹಾಕಿತ್ತು. ಆದರೆ ಡಿ.19 ಕ್ಕೆ ಪೊಲೀಸರು ಅಲರ್ಟ್ ಇರುತ್ತಾರೆ ಎಂದು ಡಿ.16 ಕ್ಕೆ ಈ ಕೃತ್ಯ ಮಾಡಿದೆ ಎಂದು ತಿಳಿಸಿದರು.

ಅಪ್ರಾಪ್ತನ ಮೂಲಕ ಕೃತ್ಯ ನಡೆಸಿದ ತಂಡ:
ಪೊಲೀಸ್ ಮೇಲೆ ಹಲ್ಲೆ ನಡೆಸಿದ ಬಳಿಕ ಪೊಲೀಸರಿಗೆ ಸಿಕ್ಕಿಬಿದ್ದರೆ ಸಮಸ್ಯೆಯಾಗಲಿದೆ ಎಂದು ಅರಿತ ಈ ತಂಡ ತಮ್ಮ ಗ್ಯಾಂಗ್​​ನಲ್ಲಿದ್ದ ಅಪ್ರಾಪ್ತ ಬಾಲಕನ ಮೂಲಕ ಹಲ್ಲೆ ನಡೆಸಿದ್ದಾರೆ. ಅದರಂತೆ 16 ವರ್ಷದ ಅಪ್ರಾಪ್ತ ಬಾಲಕ ಈ ಕೃತ್ಯವನ್ನು ಎಸಗಿದ್ದಾನೆ ಎಂದರು.

ಪೊಲೀಸರಿಗೆ ದಾರಿ ತಪ್ಪಿಸಿದ ಆರೋಪಿ:

ಪೊಲೀಸ್ ಸಿಬ್ಬಂದಿಗೆ ಹಲ್ಲೆ ನಡೆಸಿದ ಬಳಿಕ ಆರೋಪಿಗಳಲ್ಲಿ ಓರ್ವನಾದ ಮುಹಮ್ಮದ್ ನವಾಜ್ ಎಂಬಾತ ಪೊಲೀಸರ ದಾರಿ ತಪ್ಪಿಸುವ ಕೆಲಸ ಮಾಡುತ್ತಿದ್ದ. ಪೊಲೀಸರಿಗೆ ಆರೋಪಿಗಳನ್ನು ಹಿಡಿಯಲು ಸಹಾಯ ಮಾಡುತ್ತಿದ್ದೇನೆ ಎಂದು ಬಿಂಬಿಸಿ ಯಾರದೋ ಹೆಸರನ್ನು ಪೊಲೀಸರಿಗೆ ನೀಡಿ ದಾರಿ ತಪ್ಪಿಸುತ್ತಿದ್ದ.

ನೈಟ್ರೋವಿಟ್ ಮೂಲನ ನಶೆಯೇರಿಸುತ್ತಿದ್ದ ಆರೋಪಿಗಳು:

ಆರೋಪಿಗಳು ಡ್ರಗ್ಸ್ ದಾಸರಾಗಿದ್ದು, ಮಾದಕ ಮಾತ್ರೆಯನ್ನು ನಿರಂತರ ಸೇವನೆ ಮಾಡುತ್ತಿದ್ದರು. ಮಾಯಾ ಗ್ಯಾಂಗ್​​ನಲ್ಲಿದ್ದ ಮುಹಮ್ಮದ್ ನವಾಜ್ ಮೆಡಿಕಲ್ ನಲ್ಲಿ ಉದ್ಯೋಗಿಯಾಗಿದ್ದು ಈತ ಮಾತ್ರೆಗಳನ್ನು ಆರೋಪಿಗಳಿಗೆ ನೀಡುತ್ತಿದ್ದ. ತನಿಖೆ ವೇಳೆ ಈತ ಹಲವರಿಗೆ ಮಾತ್ರೆಗಳನ್ನು ವೈದ್ಯರ ಪ್ರಿಸ್ಕ್ರಿಪ್ಷನ್ ಇಲ್ಲದೆ ನೀಡುತ್ತಿರುವುದು ಬೆಳಕಿಗೆ ಬಂದಿದೆ. ಒಂದು ಮಾತ್ರೆಗೆ ರೂ 60 ಇದ್ದು, ಒಂದು ಸ್ಟ್ರಿಪ್ ಮಾತ್ರೆಗೆ ರೂ‌ 600 ದರವಿದೆ. ಈತನಲ್ಲಿಗೆ ಬಂದ ಗ್ರಾಹಕರು 600 ರೂಪಾಯಿ ಕೊಟ್ಟು ಮಾತ್ರೆ ಕೊಡಿ ಅಂದರೆ‌ ಈತ ಅವರಿಗೆ ನೀಡುತ್ತಿದ್ದ. ಮೆಡಿಕಲ್ ಸ್ಟೋರ್ ಮೇಲೆ ಕ್ರಮಕ್ಕೆ ಸೂಚಿಸಲಾಗುವುದು ಎಂದು ಪೊಲೀಸ್​ ಆಯುಕ್ತರು ಹೇಳಿದರು.

ಮಾಯಾ ಗ್ಯಾಂಗ್​​ನೊಂದಿಗೆ ಇನ್ನೊಂದು ತಂಡ:

ಪೊಲೀಸ್ ಮೇಲೆ ಹಲ್ಲೆ ನಡೆಸಿದ ಪ್ರಕರಣದಲ್ಲಿ ಮಾಯಾಗ್ಯಾಂಗ್ ನೊಂದಿಗೆ ಇನ್ನೊಂದು ಗ್ಯಾಂಗ್ ಜೊತೆಗಿರುವುದು ಪೊಲೀಸ್ ತನಿಖೆ ವೇಳೆ ತಿಳಿದು ಬಂದಿದೆ. ಈ ಗ್ಯಾಂಗ್​​ನ ಬಗ್ಗೆ ಈಗಾಗಲೇ ಮಾಹಿತಿ ಪಡೆಯಲಾಗಿದ್ದು, ಪ್ರಕರಣದಲ್ಲಿ ಭಾಗಿಯಾಗಿರುವ ಆರೋಪಿಗಳನ್ನು ಶೀಘ್ರವೇ ಬಂಧಿಸಲಾಗುವುದು ಎಂದು ಪೊಲೀಸ್ ಕಮಿಷನರ್ ಶಶಿಕುಮಾರ್ ಮಾಹಿತಿ ನೀಡಿದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.