ದಕ್ಷಿಣ ಕನ್ನಡ: ಬಿಜೆಪಿ, ಆರ್ಎಸ್ಎಸ್ಗೆ ಆಗಸ್ಟ್ 15 ಸ್ವಾತಂತ್ರ್ಯ ದಿನವಲ್ಲ. ಅವರಿಗೆ ಇನ್ನೂ ಸ್ವಾತಂತ್ರ್ಯ ಬಂದಿಲ್ಲ. ಮುಸ್ಲಿಮರು ದೇಶಬಿಟ್ಟು ಹೋದ ಮೇಲೆ ಅವರಿಗೆ ಸ್ವಾತಂತ್ರ್ಯ ಎಂದು ಹೇಳುತ್ತಿದ್ದಾರೆ. ಹಾಗಾದ್ರೆ ಕೆಂಪು ಕೋಟೆಯಲ್ಲಿ ಬಾವುಟ ಹಾರಿಸುವ ನಿಮಗೆ ಯಾವ ಸ್ವಾತಂತ್ರ್ಯ ದಿನ ಎಂದು ಕೇಂದ್ರದ ವಿರುದ್ಧ ಮಾಜಿ ಸಚಿವ ವೈ.ಎಸ್.ವಿ.ದತ್ತ ಕಿಡಿಕಾರಿದರು.
ತಾಲೂಕಿನ ಆತೂರುದಲ್ಲಿ ಕೇಂದ್ರ ಸರ್ಕಾರದ ಸಿಎಎ ವಿರೋಧಿಸಿ ಸಂವಿಧಾನ ಉಳಿಸಿ-ದೇಶ ರಕ್ಷಿಸಿ ಎಂಬ ಅಡಿಬರಹದಲ್ಲಿ ನಡೆದ ಬೃಹತ್ ಪ್ರತಿಭಟನೆ ಉದ್ದೇಶಿಸಿ ಮಾತನಾಡಿದರು.
ದೊಡ್ಡ ಶಕ್ತಿ ಅಥವಾ ಸರ್ವಾಧಿಕಾರಿ ನಡೆಯನ್ನು ಮಟ್ಟಹಾಕುವ ತಾಕತ್ತು ಜನಾಂದೋಲನಕ್ಕೆ ಇದೆ. ಪೌರತ್ವ ತಿದ್ದುಪಡಿ ಕಾಯ್ದೆಯ ವಿರುದ್ಧ ದೇಶದಲ್ಲೆಡೆ ನಡೆಯುತ್ತಿರುವ ಪ್ರತಿಭಟನೆಯನ್ನು ಗಮನಿಸಿದಾಗ ಜಯ ನಮ್ಮದಾಗಲಿದೆ ಎಂದು ಭರವಸೆ ನೀಡಿದರು.
ಹಿರಿಯ ಪತ್ರಕರ್ತ ಶಶಿಧರ್ ಭಟ್ ಮಾತನಾಡಿ ನ್ಯಾಯಾಂಗವನ್ನು ಬಳಸಿಕೊಂಡು ಹಿಂದೂ ರಾಷ್ಟ್ರಕ್ಕೆ ಮುನ್ನುಡಿ ಬರೆಯುತ್ತಿದ್ದಾರೆ. ಹಿಟ್ಲರ್ ಮನಸ್ಥಿತಿಯನ್ನು ಹೊಂದಿರುವ ಮೋದಿ ಮತ್ತು ಅಮಿತ್ ಶಾರನ್ನು ವಿರೋಧಿಸಿದರೆ ದೇಶದ್ರೋಹ ಎಸಗಿದಂತೆ ಬಿಂಬಿಸುತ್ತಿದ್ದಾರೆ ಎಂದು ಹೇಳಿದರು.