ETV Bharat / state

ಮಂಗಳೂರು ಪಬ್ ದಾಳಿ ಪ್ರಕರಣ: ವಿದ್ಯಾರ್ಥಿಗಳ ಪೈಕಿ 8 ಮಂದಿ ಅಪ್ರಾಪ್ತರು ಎಂದ ಕಮಿಷನರ್​ - ಮಂಗಳೂರು ಪಬ್ ದಾಳಿ ಸಂಬಂಧ ಪ್ರತಿಕ್ರಿಯೆ ನೀಡಿದ ಯು ಟಿ ಖಾದರ್

ಮಂಗಳೂರಿನ ಬಲ್ಮಠದಲ್ಲಿರುವ ರಿ ಸೈಕಲ್ ದಿ ಲಾಂಜ್ ಪಬ್ ನಲ್ಲಿ ನಿನ್ನೆ ರಾತ್ರಿ ನಗರದ ಕಾಲೇಜೊಂದರ ವಿದ್ಯಾರ್ಥಿಗಳು ಪಬ್ ನಲ್ಲಿ ಪಾರ್ಟಿ ಮಾಡುತ್ತಿದ್ದ ವೇಳೆ, ಬಜರಂಗದಳದ ಕಾರ್ಯಕರ್ತರು ದಾಳಿ ನಡೆಸಿದ್ದರು. ಇದಕ್ಕೆ ಪರ ವಿರೋಧದ ಚರ್ಚೆಗಳು ಭುಗಿಲೆದ್ದಿವೆ.

ಮಂಗಳೂರು ಪಬ್ ದಾಳಿ ಪ್ರಕರಣಕ್ಕೆ ಭಾರೀ ವಿರೋಧ
ಮಂಗಳೂರು ಪಬ್ ದಾಳಿ ಪ್ರಕರಣಕ್ಕೆ ಭಾರೀ ವಿರೋಧ
author img

By

Published : Jul 26, 2022, 9:09 PM IST

Updated : Jul 26, 2022, 9:32 PM IST

ಮಂಗಳೂರು: ನಗರದ ಬಲ್ಮಠದಲ್ಲಿ ನಿನ್ನೆ ರಾತ್ರಿ ಬಜರಂಗದಳದ ಕಾರ್ಯಕರ್ತರು ಪಬ್ ಪ್ರವೇಶಿಸಿ ಪಾರ್ಟಿ ಮಾಡುತ್ತಿದ್ದ ವಿದ್ಯಾರ್ಥಿಗಳನ್ನು ಹೊರಕಳುಹಿಸಿದ ಪ್ರಕರಣದಲ್ಲಿ ಪಬ್​​ನಲ್ಲಿದ್ದ 18 ಮಂದಿ ವಿದ್ಯಾರ್ಥಿಗಳಲ್ಲಿ 8 ಮಂದಿ ಅಪ್ರಾಪ್ತರು ಆಗಿದ್ದರು ಎಂದು ಮಂಗಳೂರು ಪೊಲೀಸ್ ಕಮಿಷನರ್ ಎನ್.ಶಶಿಕುಮಾರ್ ತಿಳಿಸಿದ್ದಾರೆ.

ಮಂಗಳೂರಿನ ಬಲ್ಮಠದಲ್ಲಿರುವ ರಿ ಸೈಕಲ್ ದಿ ಲಾಂಜ್ ಪಬ್ ನಲ್ಲಿ ನಿನ್ನೆ ರಾತ್ರಿ ನಗರದ ಕಾಲೇಜೊಂದರ ವಿದ್ಯಾರ್ಥಿಗಳು ಪಬ್​​​ನಲ್ಲಿ ಪಾರ್ಟಿ ಮಾಡುತ್ತಿದ್ದ ವೇಳೆ ಬಜರಂಗದಳದ ಕಾರ್ಯಕರ್ತರು ದಾಳಿ ನಡೆಸಿದ್ದರು.

ಈ ಹಿನ್ನೆಲೆಯಲ್ಲಿ ಪಾರ್ಟಿಯಲ್ಲಿ ಭಾಗವಹಿಸಿದ 18 ವಿದ್ಯಾರ್ಥಿಗಳ ಮಾಹಿತಿ ಕಲೆ ಹಾಕಿ ಇದರಲ್ಲಿ 8 ಮಂದಿ ಅಪ್ರಾಪ್ತರು ಇದ್ದರೆಂಬುದನ್ನು ಪೊಲೀಸರು ಕಂಡುಕೊಂಡಿದ್ದಾರೆ. ನಿಯಮದ ಪ್ರಕಾರ 21 ವರ್ಷದ ಒಳಗಿನವರಿಗೆ ಪಬ್ ಒಳಗೆ ಪ್ರವೇಶ ಇಲ್ಲದಿರುವುದರಿಂದ ಪಬ್ ವಿರುದ್ಧ ಕ್ರಮಕ್ಕೆ ಅಬಕಾರಿ ಇಲಾಖೆಗೆ ಸೂಚಿಸಲಾಗಿದೆ. ಈ ಘಟನೆ ಬಗ್ಗೆ ಯಾವುದೇ ದೂರು ದಾಖಲಾಗಿಲ್ಲ ಎಂದು ಅವರು ತಿಳಿಸಿದ್ದಾರೆ.

ಹಫ್ತಾ ವಸೂಲಿಯ ತಂತ್ರ: ಪಬ್ ದಾಳಿಗೆ‌ ಪ್ರತಿಕ್ರಿಯೆ ನೀಡಿರುವ ವಿಧಾನಸಭೆ ವಿಪಕ್ಷ ಉಪನಾಯಕ ಯುಟಿ ಖಾದರ್ ಅವರು ಬಜರಂಗದಳ ಕಾರ್ಯಕರ್ತರಿಂದ ನಡೆದ ಪಬ್ ದಾಳಿಯು ದಾರಿ ತಪ್ಪಿದ ಯುವಕರು ಹಫ್ತಾ ವಸೂಲಿಗಾಗಿ ಮಾಡಿರುವ ತಂತ್ರ ಎಂದು ಆರೋಪಿಸಿದ್ದಾರೆ. ಸಮಾಜಘಾತುಕ ಶಕ್ತಿಗಳು ವ್ಯಾಪಾರಸ್ಥರನ್ನು ಹಫ್ತಾಗಾಗಿ ಬೆದರಿಸುತ್ತದೆ. ಈ ಎಲ್ಲ ಘಟನೆಗಳಿಗೆ ರಾಜ್ಯ ಸರ್ಕಾರ ಹಾಗೂ ಸಿಎಂ ಬೊಮ್ಮಾಯಿ ಅವರ ಆ್ಯಕ್ಷನ್​​ಗೆ ರಿಯಾಕ್ಷನ್ ಹೇಳಿಕೆಯೇ ಪ್ರೇರಣೆ ಎಂದರು.

ಕಡಿವಾಣಕ್ಕೆ ವಿಹಿಂಪ ಆಗ್ರಹ: ಮಂಗಳೂರು ನಗರದಲ್ಲಿ ಪಬ್ ಡ್ಯಾನ್ಸ್ ಬಾರ್​​ಗಳಲ್ಲಿ ಕಾನೂನು ಮೀರಿ ಚಟುವಟಿಕೆಗಳು ನಡೆಯುತ್ತಿದೆ. ಪಾರ್ಟಿಯ ಹೆಸರಿನಲ್ಲಿ ಡ್ರಗ್ಸ್, ಗಾಂಜಾ, ಅಮಲು ಪದಾರ್ಥಗಳ ಸೇವನೆಯೊಂದಿಗೆ ಪಬ್, ಬಾರ್ ಗಳು ಅನೈತಿಕ ಕೇಂದ್ರಗಳಾಗುತ್ತಿದೆ. ಈ ಚಟುವಟಿಕೆಯಿಂದ ಹದಿಹರೆಯದ ಯುವಕ ಯುವತಿಯರು ಬಲಿಯಾಗುತ್ತಿದ್ದು, ಸಮಾಜದ ಸ್ವಾಸ್ಥ್ಯ ಹಾಳಾಗುತ್ತಿದೆ.

ಪಾರ್ಟಿಯ ಹೆಸರಿನಲ್ಲಿ ತಡರಾತ್ರಿ ತನಕ ಪಬ್​ಗಳನ್ನು ತೆರೆದು ಮೋಜು ಮಸ್ತಿ ನಡೆಸುತ್ತಿದ್ದು,ತಕ್ಷಣ ಪೊಲೀಸ್ ಇಲಾಖೆ ನಗರದಲ್ಲಿ ಕಾನೂನು ಬಾಹಿರ ಚಟುವಟಿಕೆ ನಡೆಸುವ ಎಲ್ಲ ಪಬ್​​ಗಳ ವಿರುದ್ಧ ಕಠಿಣ ಕಾನೂನು ಕ್ರಮ ತೆಗೆದುಕೊಳ್ಳಲು ವಿಶ್ವ ಹಿಂದೂ ಪರಿಷತ್ ಬಜರಂಗದಳ ಆಗ್ರಹಿಸಿದೆ.

ದಾಳಿ ಮಾಡಿಲ್ಲ ಎಂದ ಬಜರಂಗದಳ: ಬಜರಂಗದಳ ಮುಖಂಡ ಪುನಿತ್ ಅತ್ತಾವರ ಮಾತನಾಡಿ, ಬಜರಂಗದಳದಿಂದ ಪಬ್ ಮೇಲೆ ದಾಳಿ ನಡೆದಿಲ್ಲ. ಇತ್ತೀಚೆಗೆ ವೈರಲ್ ಆದ ಕಿಸ್ಸಿಂಗ್ ಪ್ರಕರಣದ ವಿದ್ಯಾರ್ಥಿಗಳು ಅಲ್ಲಿಗೆ ಬಂದಿದ್ದರು ಎಂಬ ಮಾಹಿತಿ ಬಂದಿತ್ತು. ಅದರಂತೆ ಪಬ್​​ಗೆ ಬಜರಂಗದಳ ಕಾರ್ಯಕರ್ತರು ಹೋಗಿ ಮಾಹಿತಿ ನೀಡಿದ್ದಾರೆ. ಯಾರಿಗೂ ಹಲ್ಲೆಯನ್ನು ಮಾಡಿಲ್ಲ, ದಾಂಧಲೆಯನ್ನು ಮಾಡಿಲ್ಲ ಎಂದಿದ್ದಾರೆ.

ಪಬ್ ಅಟ್ಯಾಕ್ ನಡೆದಿಲ್ಲ ಎಂದ ಶಾಸಕ ಭರತ್ ಶೆಟ್ಟಿ : ಬಲ್ಮಠದ ಪಬ್ ಗೆ ಯಾವುದೇ ರೀತಿಯಲ್ಲಿ ಹಿಂದೂ ಸಂಘಟನೆ ಕಾರ್ಯಕರ್ತರು ದಾಳಿ ನಡೆಸಿಲ್ಲ. ಪಬ್ ಮ್ಯಾನೇಜರ್ ಮತ್ತು ಬೌನ್ಸರ್ ಜೊತೆ ಅಪ್ರಾಪ್ತ ವಿದ್ಯಾರ್ಥಿಗಳಿಗೆ ಮದ್ಯ ನೀಡುತ್ತಿದ್ದಾರೆಯೇ ಎಂದು ಪ್ರಶ್ನಿಸಿದ್ದಾರೆ ಅಷ್ಟೇ. ಈ ಬಗ್ಗೆ ಕಮಿಷನರ್ ಜೊತೆ ಚರ್ಚಿಸಿದ್ದೇನೆ. ಘಟನೆಯ ಬಗ್ಗೆ ಪಬ್ ಸಿಬ್ಬಂದಿ ವಿಚಾರಣೆ ನಡೆಯುತ್ತಿದ್ದು, ಸತ್ಯಸಂಗತಿ ಹೊರಬರಲಿದೆ. ಎಂದು ಮಂಗಳೂರು ಉತ್ತರ ಶಾಸಕ ಭರತ್ ಶೆಟ್ಟಿ ಪ್ರತಿಕ್ರಿಯಿಸಿದ್ದಾರೆ.

ಡಿವೈಎಫ್ಐ ಖಂಡನೆ: ಪಬ್ ಮೇಲೆ ಬಜರಂಗ ದಳದ ದಾಳಿ ಕುರಿತು ಪೊಲೀಸ್ ಕಮಿಷನರ್ ತುಂಬಾ ಮೃದುವಾಗಿ ಪ್ರತಿಕ್ರಿಯಿಸಿದ್ದಾರೆ. ಲೈಸನ್ಸ್ ಹೊಂದಿರುವ ಯಾವುದೇ ರೆಸ್ಟೋರೆಂಟ್, ಪಬ್ ಗಳಿಗೆ ತೆರಳಿ ಅಲ್ಲಿನ ಗ್ರಾಹಕರನ್ನು ಹೊರಗೆ ಕರೆಸುವ, ಪರಿಶೀಲನೆ ನಡೆಸುವ ಅಧಿಕಾರ ಸಂಘಟನೆಗಳಿಗೆ ಕೊಟ್ಟವರು ಯಾರು?

ಈ ಅಧಿಕಾರ ಬಜರಂಗ ದಳಕ್ಕೆ ಮಾತ್ರವಾ,‌ ಅಥವಾ ಬೇರೆ ರಾಜಕೀಯ ಕಾರ್ಯಕರ್ತರಿಗೂ ಈ ಅವಕಾಶ ಇದೆಯೆ? ಬೇರೆ ಸಂಘಟನೆಗಳು ಇದೇ ರೀತಿ ನಡೆದು ಕೊಂಡರೆ ಕಮೀಷನರ್ ಪ್ರತಿಕ್ರಿಯೆ ಹೀಗೆಯೆ ಇರುತ್ತದೆಯೆ? ಬೀದಿಯಲ್ಲಿ ವಿದ್ಯಾರ್ಥಿ, ವಿದ್ಯಾರ್ಥಿನಿಯರನ್ನು ಮಾಧ್ಯಮಗಳ ಮುಂದೆ ಅವಾಚ್ಯ ಶಬ್ದಗಳಿಂದ ನಿಂದಿಸಿದ ಬಜರಂಗ ದಳದ ಕಾರ್ಯಕರ್ತರ ಮೇಲೆ ಕ್ರಿಮಿನಲ್ ಮೊಕದ್ದಮೆ ದಾಖಲಾಗಲೇಬೇಕು.

ಅಂದ ಹಾಗೆ ಮಂಗಳೂರಿನ ವೀರಾಧಿ ವೀರ ಶಾಸಕರುಗಳು ಈ ಕುರಿತು ಏ‌ನಾದರು ಪ್ರತಿಕ್ರಿಯಿಸಿದರಾ ? ಬಜರಂಗ ದಳದ ನಿಲುವು ಸರಿ ಅಂತಾದರೆ ಮಂಗಳೂರಿನ ಎಲ್ಲ ಪಬ್​​ಗಳ ಬಾಗಿಲು ಮುಚ್ಚಿಸಲು ಒಂದು ದೃಢ ತೀರ್ಮಾನವನ್ನು ಬಿಜೆಪಿ ಪಕ್ಷ, ಶಾಸಕರುಗಳು, ಸಂಸದ ನಳಿನ್ ಕುಮಾರ್ ಕಟೀಲ್ ರು ತೆಗೆದುಕೊಳ್ಳಲಿ ಎಂದು ಡಿವೈಎಫ್ಐ ರಾಜ್ಯಾಧ್ಯಕ್ಷ ಮುನೀರ್ ಕಾಟಿಪಳ್ಳ ಆಗ್ರಹ ಮಾಡಿದ್ದಾರೆ.

ಮಂಗಳೂರು ಪಬ್ ದಾಳಿ ಪ್ರಕರಣ: ವಿದ್ಯಾರ್ಥಿಗಳ ಪೈಕಿ 8 ಮಂದಿ ಅಪ್ರಾಪ್ತರು ಎಂದ ಕಮಿಷನರ್​

ಸಂಘ ಪರಿವಾರ ವಿರುದ್ಧ ಪೋಲಿಸ್ ಇಲಾಖೆಯ ಮೃದು ಧೋರಣೆ : ಪಬ್ ನಲ್ಲಿ ಪಾರ್ಟಿ ಮಾಡಿದ್ದಾರೆ ಎಂಬ ಆರೋಪದಲ್ಲಿ ನಿನ್ನೆ ರಾತ್ರಿ ಬಲ್ಮಠ ಸಮೀಪದ ಪಬ್ ಗೆ ದಾಳಿ ನಡೆಸಿದ ಬಜರಂಗದಳದ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕೆಂದು‌ ಎಸ್‌ಡಿಪಿಐ ದ.ಕ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಅನ್ವರ್ ಸಾದಾತ್ ಬಜತ್ತೂರು ಒತ್ತಾಯಿಸಿದ್ದಾರೆ.

ವಿಧ್ಯಾರ್ಥಿಗಳು ಪಬ್ ನಲ್ಲಿ ಪಾರ್ಟಿ ನಡೆಸಿರುವುದು ಸರಿಯಾ ತಪ್ಪಾ ಎಂಬುದನ್ನು ತೀರ್ಪು ನೀಡಿ ಇವರಿಗೆ ದಾಳಿ ನಡೆಸಲು ಅಧಿಕಾರ ನೀಡಿದವರು ಯಾರು ?.ನೈತಿಕತೆಯ ಹೆಸರಿನಲ್ಲಿ ಅನೈತಿಕ ಪೊಲೀಸ್ ಗಿರಿಯನ್ನ ಭಜರಂಗದಳದವರು ಮಾಡುವುದಾದರೆ ರಾಜ್ಯದ ಪೊಲೀಸ್ ಇಲಾಖೆ ಹಾಗೂ ನ್ಯಾಯಾಲಯಗಳ ಕೆಲಸ ಏನು?ಭಜರಂಗದಳದ ವರ್ತನೆ, ಬಾಯಲ್ಲಿ ಅಸಹ್ಯ,ಆಶ್ಲೀಲ ಪದಗಳನ್ನು ಬಳಸಿ ನಿಂದಿಸುವ ಹಾಗೂ ದಾಳಿ ನಡೆಸುವ ಕೃತ್ಯವು ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದ್ದರು.

ಇವರ ವಿರುದ್ಧ ಮಂಗಳೂರು ಆಯುಕ್ತರು ಮೃದು ಧೋರಣೆ ಹೊಂದಲು ಹಾಗೂ ಈ ಘಟನೆಯಲ್ಲಿ ಇವರ ತಪ್ಪೇ ಇಲ್ಲ ಎಂಬಂತ ರೀತಿಯಲ್ಲಿ ಹೇಳಿಕೆ ನೀಡಲು ಕಾರಣವೇನು?. ಸಂಘಪರಿವಾರ ವಿರುದ್ಧ ಪೋಲಿಸ್ ಇಲಾಖೆಯ ಮೃದು ಧೋರಣೆಯೇ ಇಂತಹ ಅನೈತಿಕ ಪೋಲಿಸ್‌ಗಿರಿ ಹೆಚ್ಚಾಗಲು ಕಾರಣ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ್ದಾರೆ.

ಇದನ್ನೂ ಓದಿ: ಪಬ್‌ನಲ್ಲಿ ವಿದ್ಯಾರ್ಥಿಗಳ ಪಾರ್ಟಿಗೆ ಬಜರಂಗದಳ ತಡೆ; ಮಂಗಳೂರು ಪೊಲೀಸ್ ಆಯುಕ್ತರು ಹೇಳಿದ್ದೇನು?

Last Updated : Jul 26, 2022, 9:32 PM IST

For All Latest Updates

TAGGED:

ETV Bharat Logo

Copyright © 2024 Ushodaya Enterprises Pvt. Ltd., All Rights Reserved.