ಪುತ್ತೂರು (ದಕ್ಷಿಣ ಕನ್ನಡ): ನೆರೆಮನೆಯ ವಿವಾಹಿತ ಮಹಿಳೆಯೊಂದಿಗಿನ ಪ್ರೇಮ ಸಂಬಂಧದ ವಿಚಾರದಲ್ಲಿ ಮರ್ಯಾದೆಗೆ ಅಂಜಿ ವಿವಾಹಿತ ವ್ಯಕ್ತಿಯೋರ್ವ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಏ. 3ರಂದು ನೆಟ್ಟಣಿಗೆ ಮೂಡ್ನೂರು ಗ್ರಾಮದ ವಜ್ರಮೂಲೆ ಎಂಬಲ್ಲಿ ನಡೆದಿದೆ. ನೆಟ್ಟಣಿಗೆ ಮುಡ್ನೂರು ಗ್ರಾಮದ ವಜ್ರಮೂಲೆ ದಿ. ಕೊರಗರವರ ಪುತ್ರ ಶೀನಪ್ಪ(50) ಆತ್ಮಹತ್ಯೆ ಮಾಡಿಕೊಂಡವರು.
ಮೃತರ ಪತ್ನಿ ನೀಡಿದ ದೂರಿನ ಮೇರೆಗೆ ಪುತ್ತೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಶೀನಪ್ಪ ಅವರು ಏ. 2ರಂದು ಕೆಲಸಕ್ಕೆ ಹೋಗದೇ ಮನೆಯಲ್ಲಿದ್ದರು, ಮಧ್ಯಾಹ್ನ ಮದ್ಯ ಸೇವನೆ ಮಾಡಿ ಬಂದು ನನಗೆ ಹಾಗೂ ಪುತ್ರಿಗೆ ಬಯ್ಯಲು ಆರಂಭಿಸಿದ್ದರು. ನಂತರ ಸಂಜೆ ಮೋಟಾರು ಸೈಕಲ್‌ನಲ್ಲಿ ಪೇಟೆಗೆ ಹೋಗಿ ಬಂದವರು ತನಗೆ ಏಕಾಏಕಿಯಾಗಿ ಕೈಯಿಂದ ತಲೆಗೆ, ಮುಖಕ್ಕೆ, ಬೆನ್ನಿಗೆ, ಕಾಲಿಗೆ ಹೊಡೆದು ಕಾಲಿನಿಂದ ಸೊಂಟಕ್ಕೆ ತುಳಿದಿದ್ದಾರೆ ಎಂದು ದೂರಿನಲ್ಲಿ ವಿವರಿಸಿದ್ದಾರೆ.
ಆ ವೇಳೆ ನಮ್ಮ 3 ಜನ ಮಕ್ಕಳು ಓಡಿಕೊಂಡು ಬಂದು ಹೊಡೆಯುವುದನ್ನು ತಡೆದಿದ್ದಾರೆ. ಬಳಿಕ ಅವರು ಕೋಪಗೊಂಡು ಬೈಕ್ ಹತ್ತಿ ಪೇಟೆಗೆ ಹೋದರು. ಇದೇ ವೇಳೆಗೆ ನಾನು ಹಾಗೂ ಮಕ್ಕಳು ಪಕ್ಕದ ಮನೆಯ ಮಹಿಳೆ ಬಳಿ ಹೋಗಿ ‘ನನ್ನ ಗಂಡನಲ್ಲಿ ಯಾಕೆ ಮಾತನಾಡುತ್ತೀಯಾ’ ಎಂದು ಕೇಳಿದಾಗ ಆ ಮನೆಯವರು ಹಾಗೂ ತಮ್ಮ ಮಧ್ಯೆ ಮಾತಿಗೆ ಮಾತು ಬೆಳೆದಿತ್ತು. ಆ ಬೊಬ್ಬೆ ಕೇಳಿ ನನ್ನ ಗಂಡ ಶೀನಪ್ಪ ನನಗೆ ಹಾಗೂ ಮಕ್ಕಳಿಗೂ ಹೊಡೆಯಲು ಯತ್ನಿಸಿದ್ದಾರೆ. ಆಗ ಅದೇ ಮಕ್ಕದ ಮನೆಯ ಮಹಿಳೆ ತಡೆದಿದ್ದರು.
ನಂತರ ಶೀನಪ್ಪ ಅವರು ಮೋಟಾರು ಸೈಕಲ್‌ನಲ್ಲಿ ಹೋಗಿದ್ದಾರೆ. ರಾತ್ರಿ 8.30ರ ಸಮಯ ಮನೆಗೆ ಬಂದವರು ‘ಮೊಬೈಲ್ ಹಾಗು ಪರ್ಸ್ ಮನೆಯ ಒಳಗೆ ಇಟ್ಟು, ಮೋಟಾರು ಸೈಕಲ್ ಮನೆಯ ಅಂಗಳದಲ್ಲಿ ನಿಲ್ಲಿಸಿ ಹೋಗಿದ್ದಾರೆ. ರಾತ್ರಿ 10 ಗಂಟೆಯಾದರೂ ಮನೆಗೆ ಬಾರದೇ ಇದ್ದುದರಿಂದ ಸಂಶಯಗೊಂಡು ನೆರೆಯ ಮನೆಯ ಸುತ್ತಮುತ್ತ ಹುಡುಕಾಡಿದಾಗ ಎಲ್ಲಿಯೂ ಪತ್ತೆಯಾಗಲಿಲ್ಲ. ಬಳಿಕ ರಾತ್ರಿ ಹೊತ್ತು ತೋಟದ ಪಕ್ಕದಲ್ಲಿರುವ ಮಾವಿನ ಮರದ ಬಳಿ ಹೋಗಿ ನೋಡಿದಾಗ ಆತ್ಮಹತ್ಯೆ ಮಾಡಿಕೊಂಡಿರುವುದು ಕಂಡುಬಂದಿದೆ ಎಂದು ದೂರಿನಲ್ಲಿ ಮೃತರ ಪತ್ನಿ ವಿವರಿಸಿದ್ದಾರೆ.
ತನ್ನ ಗಂಡ ಹಾಗೂ ನೆರೆ ಮನೆಯ ಮಹಿಳೆ ಪ್ರೇಮ ಸಂಬಂಧ ವಿಚಾರ ಪತ್ನಿ ಹಾಗೂ ನೆರೆಹೊರೆಯವರಿಗೆ ಗೊತ್ತಾಗಿ ಮರ್ಯಾದೆಗೆ ಅಂಜಿ ಅವರು ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ಮೃತ ಶೀನಪ್ಪ ಅವರ ಪತ್ನಿ ಅವರು ನೀಡಿದ ದೂರಿನಂತೆ ಸಂಪ್ಯ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ: ಪಂಜಾಬ್ ಸೆಕ್ರೆಟರಿಯೇಟ್ನಲ್ಲಿ ಕರ್ತವ್ಯಕ್ಕೆ ನಿಯೋಜನೆಗೊಂಡಿದ್ದ ಕರ್ನಾಟಕದ ಯೋಧ ಆತ್ಮಹತ್ಯೆ
ಒಂದೇ ಕುಟುಂಬದ ನಾಲ್ವರು ಆತ್ಮಹತ್ಯೆ: ಇತ್ತೀಚೆಗೆ ಮಂಗಳೂರಿನ ಲಾಡ್ಜ್ ಒಂದರಲ್ಲಿ ಒಂದೇ ಕುಟುಂಬದ ನಾಲ್ವರು ಸಾಮೂಹಿಕವಾಗಿ ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿತ್ತು. ಮೈಸೂರು ಮೂಲದ ದೇವೇಂದ್ರ ಎನ್ನುವವರು ತಮ್ಮ ಪತ್ನಿ ಹಾಗೂ ಇಬ್ಬರು ಅವಳಿ ಹೆಣ್ಣು ಮಕ್ಕಳನ್ನು ಮೊದಲು ಹತ್ಯೆ ಮಾಡಿ, ನಂತರ ತಾವೂ ಕೂಡ ಆತ್ಮಹತ್ಯೆ ಮಾಡಿಕೊಂಡಿದ್ದರು ಎಂದು ಪೊಲೀಸ್ ಮೂಲಗಳು ತಿಳಿಸಿದ್ದವು.