ಮಂಗಳೂರು: ನಗರದ ಹೊರವಲಯದ ಅಡ್ಯಾರ್ ಎಂಬಲ್ಲಿ ಕೋವಿಡ್ ನಿಯಮವನ್ನು ಉಲ್ಲಂಘಿಸಿ ಮದುವೆ ಮನೆಯಲ್ಲಿ ರಿಸೆಪ್ಸನ್ ಪಾರ್ಟಿ ನಡೆಸಿ ಡ್ಯಾನ್ಸ್ ಕಾರ್ಯಕ್ರಮ ಆಯೋಜಿಸಿದ್ದ ಮದುಮಗನ ವಿರುದ್ದ ಮಂಗಳೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅಡ್ಯಾರ್ನ ಗುಡ್ಡೆಮನೆ ಎಂಬಲ್ಲಿನ ರಂಜಿತ್ ಶೆಟ್ಟಿಗಾರ್ ಅವರ ಮದುವೆ ಮೇ 9 ರಂದು ಬಂಟ್ವಾಳದ ಸಿದ್ದಕಟ್ಟೆಯಲ್ಲಿ ನಡೆದಿತ್ತು. ಈ ಮದುವೆ ಕಾರ್ಯಕ್ರಮಕ್ಕೆ ತೆರಳಿ ಮದುವೆ ಕಾರ್ಯಕ್ರಮದಲ್ಲಿ ಭಾಗವಹಿಸಲು ಅಡ್ಯಾರ್ ಗ್ರಾಮ ಪಂಚಾಯಿತಿ ಪಿ ಡಿ ಓ ಕೃಷ್ಣ ನಾಯ್ಕ್ ಹೆಚ್ ಅವರು 25 ಮಂದಿಗೆ ಅನುಮತಿ ನೀಡಿದ್ದರು.
ಆದರೆ, ಮದುವೆ ಕಾರ್ಯಕ್ರಮ ಮುಗಿಸಿದ ನಂತರ ಮನೆಯಲ್ಲಿ ರಿಸೆಪ್ಸನ್ ಪಾರ್ಟಿ ಆಯೋಜಿಸಲಾಗಿದೆ. ಮೈಕ್ ಅಳವಡಿಸಿ ಸಾರ್ವಜನಿಕರನ್ನು ಸೇರಿಸಿ ಡ್ಯಾನ್ಸ್ ಮಾಡಿದ್ದು, ಇದರ ವಿಡಿಯೋ ಇಂದು ವೈರಲ್ ಆಗಿದೆ. ಈ ವಿಡಿಯೋ ಆಧಾರದ ಮೇಲೆ ಅಡ್ಯಾರ್ ಪಿ ಡಿ ಓ ಅವರು ಮಂಗಳೂರು ಗ್ರಾಮಾಂತರ ಠಾಣೆಗೆ ದೂರು ನೀಡಿದ್ದು, ಮದುಮಗನ ವಿರುದ್ಧ ಪ್ರಕರಣ ದಾಖಲಾಗಿದೆ.
ಓದಿ: ಸೋಂಕಿತ ಮಹಿಳೆಯ ಶವ ಸಾಗಾಟಕ್ಕೆ ಗ್ರಾಮಸ್ಥರ ಹಿಂದೇಟು: ಪಿಪಿಇ ಕಿಟ್ ಧರಿಸಿ ಕೈ ಜೋಡಿಸಿದ ತಹಶೀಲ್ದಾರ್!