ETV Bharat / state

ಸಂತೆಗೆ ತಡೆ ನೀಡಿದ ಅಧಿಕಾರಿಗಳು.. ಸಂಕಷ್ಟದಲ್ಲಿ ವ್ಯಾಪಾರಸ್ಥರು

ಈಗಾಗಲೇ ಐದು ತಿಂಗಳಿನಿಂದ ಸ್ಥಗಿತಗೊಂಡ ವ್ಯಾಪಾರದಿಂದ ಜೀವನ ಸಾಗಿಸುವುದು ಕಷ್ಟವಾಗಿದೆ. ಈಗ ತರಕಾರಿ, ಹಣ್ಣುಗಳ ಬಾಕ್ಸ್​ಗಳನ್ನು ಅನ್‌ಲೋಡ್ ಮಾಡಿಕೊಂಡಿದ್ದೇವೆ. ಇದರಿಂದ ಮತ್ತೆ ನಷ್ಟ ಅನುಭವಿಸಬೇಕಾಗುತ್ತದೆ ಎಂಬುದು ವ್ಯಾಪಾರಸ್ಥರು ಅಳಲು..

author img

By

Published : Sep 2, 2020, 7:20 PM IST

Market commencement after DC order
ಸಂತೆಗೆ ತಡೆ ನೀಡಿದ ಅಧಿಕಾರಿಗಳು

ಸುರತ್ಕಲ್ : ಅನ್​ಲಾಕ್​ ಬಳಿಕ ಮಾರುಕಟ್ಟೆಗೆ ಸರಕು ಸಮೇತ ಬಂದಿದ್ದ ವ್ಯಾಪಾರಸ್ಥರನ್ನು ತಡೆದು ಜಿಲ್ಲಾಧಿಕಾರಿ ಆದೇಶವಿಲ್ಲದೇ ಯಾವುದೇ ವ್ಯಾಪಾರ ನಡೆಸುವಂತಿಲ್ಲ ಎಂದು ಪೊಲೀಸರು, ಕೋವಿಡ್​ ನಿಯಂತ್ರಣಾಧಿಕಾರಿಗಳು ತಡೆದ ಘಟನೆ ಸುರತ್ಕಲ್ ಮಾರುಕಟ್ಟೆಯಲ್ಲಿ ನಡೆದಿದೆ.

ಸಂತೆಗೆ ತಡೆ ನೀಡಿದ ಅಧಿಕಾರಿಗಳು

ಲಾಕ್​ಡೌನ್​ಗೂ​ ಮುಂಚೆ ಭಾನುವಾರ ಮತ್ತು ಬುಧವಾರ ಇಲ್ಲಿ ಸಂತೆ ನಡೆಯುತ್ತಿದೆ. ಅದೇ ರೀತಿ ಇಂದು ಅನೇಕ ವ್ಯಾಪಾರಸ್ಥರು ಆಗಮಿಸಿದ್ದರು. ಈಗಾಗಲೇ ಐದು ತಿಂಗಳಿನಿಂದ ಸ್ಥಗಿತಗೊಂಡ ವ್ಯಾಪಾರದಿಂದ ಜೀವನ ಸಾಗಿಸುವುದು ಕಷ್ಟವಾಗಿದೆ. ಈಗ ತರಕಾರಿ, ಹಣ್ಣುಗಳ ಬಾಕ್ಸ್​ಗಳನ್ನು ಅನ್‌ಲೋಡ್ ಮಾಡಿಕೊಂಡಿದ್ದೇವೆ. ಇದರಿಂದ ಮತ್ತೆ ನಷ್ಟ ಅನುಭವಿಸಬೇಕಾಗುತ್ತದೆ ಎಂದು ವ್ಯಾಪಾರಸ್ಥರು ಅಳಲು ತೋಡಿಕೊಂಡರು.

ಸಾರ್ವಜನಿಕ ಸ್ಥಳವಾಗಿದ್ದು, ಜನಸಂದಣಿ ಹೆಚ್ಚಾಗುವ ಭೀತಿ ಇದೆ. ಇದರಿಂದ ಸಾಮಾಜಿಕ ಅಂತರ ಕಾಪಾಡಲು ಸಾಧ್ಯವಾಗುವುದಿಲ್ಲ. ಹಾಗಾಗಿ ಮುಂದಿನ ಆದೇಶದವರೆಗೂ ವ್ಯಾಪಾರ ನಡೆಸಬಾರದು ಎಂದು ತಿಳಿಸಿದರು. ಎಲ್ಲಾ ಕಡೆ ವ್ಯಾಪಾರ ಮಳಿಗೆಗಳು, ಅಂಗಡಿಗಳು ಆರಂಭವಾಗಿವೆ. ಆದರೆ, ನಮಗೆ ಮಾತ್ರ ಇನ್ನೂ ಅನುಮತಿ ನೀಡುತ್ತಿಲ್ಲ. ಇದರಿಂದ ಜೀವನೋಪಾಯಕ್ಕೆ ತೊಂದರೆ ಉಂಟಾಗಿದೆ ಎಂದು ಮನವಿ ಮಾಡಿದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.