ಮಂಗಳೂರು: ಮರುವಾಯಿ ಮೀನಿನ ಪದಾರ್ಥ ತಿಂದು ಹಲವರು ಅಸ್ವಸ್ಥರಾಗಿದ್ದ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಕಳೆದ ಶನಿವಾರ ಈ ಘಟನೆ ನಡೆದಿದೆ. ಮಂಗಳೂರಿನ ಗಂಜಿಮಠ, ಕುಪ್ಪೆಪದವು, ಕುಳವೂರು, ಮುತ್ತೂರು ಪರಿಸರದಲ್ಲಿ ಈ ಘಟನೆ ನಡೆದಿದೆ.

ಸ್ಥಳೀಯ ಮೀನು ಮಾರಾಟಗಾರನಿಂದ ಪಡೆದ ಮರುವಾಯಿ ಮೀನನ್ನು ಮನೆಯಲ್ಲಿ ಪದಾರ್ಥ ಮಾಡಿ ತಿಂದವರು ಅಸ್ವಸ್ಥರಾದ್ದಾರೆ. ಈ ಪದಾರ್ಥ ತಿಂದ ಕೆಲವೇ ಹೊತ್ತಿನಲ್ಲಿ ಕೆಲವರಿಗೆ ತಲೆ ಸುತ್ತು ಬರಲು ಆರಂಭಿಸಿದ್ದು, ಎದ್ದು ನಿಲ್ಲಲು ಸಾಧ್ಯವಾಗದ ಪರಿಸ್ಥಿತಿ ಬಂದಿತ್ತು. ಕೆಲವರ ಕಣ್ಣು ಮಂಜಾಗಿ ಕಣ್ಣು ತೆರೆಯಲು ಅಸಾಧ್ಯವಾಗಿತ್ತು. ಇನ್ನೂ ಕೆಲವರಿಗೆ ಹೊಟ್ಟೆನೋವು ಕಾಣಿಸಿಕೊಂಡಿತ್ತು.
ಓದಿ: ICC Test Rankings: ಆಸ್ಟ್ರೇಲಿಯಾ ಫಸ್ಟ್.. ಮೂರನೇ ಸ್ಥಾನಕ್ಕೆ ಕುಸಿದ ಟೀಂ ಇಂಡಿಯಾ
ಅಸ್ವಸ್ಥರಾದ ಕೆಲವರು ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಂಡಿದ್ದಾರೆ. ಮೀನು ಕೆಡದಂತೆ ಬಳಸುವ ರಾಸಾಯನಿಕದಿಂದ ಈ ಅಸ್ವಸ್ಥತೆ ಉಂಟಾಗಿರಬಹುದೆಂದು ಹೇಳಲಾಗಿದೆ.