ಮಂಗಳೂರು: ಮ.ನ.ಪಾ ಮೇಯರ್ ಚುನಾವಣೆ ನಿಮಿತ್ತ ಚುನಾವಣಾಧಿಕಾರಿಯಾಗಿ ಆಗಮಿಸಿದ್ದ ಮೈಸೂರಿನ ವಿಭಾಗಾಧಿಕಾರಿಯವರ ಎರಡು ಕಾರುಗಳ ಮೇಲೆ ಸಂಚಾರ ನಿಯಮ ಉಲ್ಲಂಘನೆ ಆರೋಪದಡಿ ನಗರದ ಸಂಚಾರಿ ಪಶ್ಚಿಮ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಸಾಮಾಜಿಕ ಹೋರಾಟಗಾರ ಶಶಿಧರ್ ಶೆಟ್ಟಿ ಕಾರ್ಯದ ನಿಮಿತ್ತ ಪಾಲಿಕೆ ಕಚೇರಿಗೆ ಹೊರಟಾಗ ಎರಡು ಕಾರು ನೋ ಪಾರ್ಕಿಂಗ್ ಸ್ಥಳದಲ್ಲಿತ್ತು. ಹಾಗಾಗಿ, ಅವುಗಳ ಫೋಟೋ ತೆಗೆದು ಕೆಎಸ್ಪಿ ಆ್ಯಪ್ನಲ್ಲಿ ದೂರು ದಾಖಲಿಸಿದ್ದಾರೆ. ಮಧ್ಯಾಹ್ನದ ಹೊತ್ತಿಗೆ ಸಂಚಾರಿ ಪಶ್ಚಿಮ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.