ETV Bharat / state

ಮಳಲಿ ಮಸೀದಿ ವಿವಾದ: ನ್ಯಾಯಾಲಯದ ವ್ಯಾಪ್ತಿ ಬಗ್ಗೆ ಇಂದು ತೀರ್ಪು ಸಾಧ್ಯತೆ

ಮಳಲಿ ಮಸೀದಿ ವಿವಾದ. ಪ್ರಕರಣ ವಕ್ಫ್ ಟ್ರಿಬ್ಯುನಲ್​​ನಲ್ಲಿ ನಡೆಯಬೇಕೋ ಅಥವಾ ಸಿವಿಲ್ ಕೋರ್ಟ್​ನಲ್ಲಿ ನಡೆಯಬೇಕೋ ಎಂಬ ಬಗ್ಗೆ ಮಂಗಳೂರಿನ 3ನೇ ಹೆಚ್ಚುವರಿ ಸಿವಿಲ್‌ ನ್ಯಾಯಾಲಯದಿಂದ ಇಂದು ತೀರ್ಪು ಹೊರ ಬರುವ ಸಾಧ್ಯತೆ.

Malali mosque
ಮಳಲಿ ಮಸೀದಿ
author img

By

Published : Nov 9, 2022, 10:01 AM IST

ಮಂಗಳೂರು: ನಗರದ ಹೊರವಲಯದಲ್ಲಿರುವ ಗಂಜಿಮಠ ಬಳಿಯ ಮಳಲಿ ಮಸೀದಿ ವಿವಾದ ಪ್ರಕರಣದಲ್ಲಿ ಮಂಗಳೂರಿನ 3ನೇ ಹೆಚ್ಚುವರಿ ಸಿವಿಲ್‌ ನ್ಯಾಯಾಲಯದಿಂದ ಇಂದು ತೀರ್ಪು ಹೊರ ಬರುವ ಸಾಧ್ಯತೆ ದಟ್ಟವಾಗಿದೆ.

ಮಳಲಿ ಮಸೀದಿ ನವೀಕರಣದ ವೇಳೆ ಹಿಂದೂ ದೇವಾಲಯ ಶೈಲಿಯ ಪಾರಂಪರಿಕ ಕಟ್ಟಡ ಪತ್ತೆಯಾಗಿತ್ತು. ಆ ಬಳಿಕ ಹಿಂದೂ ಸಂಘಟನೆಗಳು ಮಳಲಿ ಭಜನಾ ಮಂದಿರದಲ್ಲಿ ತಾಂಬೂಲ ಪ್ರಶ್ನೆ ಇಟ್ಟಿತ್ತು. ಈ ತಾಂಬೂಲ ಪ್ರಶ್ನೆಯಲ್ಲಿ ಆ ಜಾಗದಲ್ಲಿ ಹಿಂದೆ ಶಿವನಿಗೆ ಸಂಬಂಧಿಸಿದ ಗುರು ಪೀಠವಿತ್ತು ಎಂಬ ಅಂಶ ಉಲ್ಲೇಖವಾಗಿತ್ತು. ಈ ಹಿನ್ನೆಲೆಯಲ್ಲಿ ಮಸೀದಿ ಇರುವ ಸ್ಥಳದ ಬಗ್ಗೆ ವಿಹೆಚ್​ಪಿ ಸರ್ವೇಗೆ ನ್ಯಾಯಾಲಯಕ್ಕೆ ಅರ್ಜಿ ಹಾಕಿತ್ತು.

ಇದನ್ನೂ ಓದಿ: ಮಳಲಿ ಮಸೀದಿ ದೇಗುಲ ಶೈಲಿ ಪತ್ತೆ ಪ್ರಕರಣ: ಜೂನ್​ 14ಕ್ಕೆ ವಿಚಾರಣೆ ಮುಂದೂಡಿದ ಕೋರ್ಟ್​​

ಅಲ್ಲದೇ ಮಸೀದಿ ನವೀಕರಣಕ್ಕೆ ತಡೆಕೋರಿಯೂ ವಿಹೆಚ್​​ಪಿ ಅರ್ಜಿ ಹಾಕಿತ್ತು. ಆದರೆ ಈ ಅರ್ಜಿಯು ವಕ್ಫ್ ಟ್ರಿಬ್ಯುನಲ್ ವ್ಯಾಪ್ತಿಗೆ ಬರಲಿದೆ ಎಂದು ಮಸೀದಿ ಆಡಳಿತ ಮಂಡಳಿ ಪರ ವಕೀಲರು ವಾದಿಸಿದ್ದರು. ಈ ಪ್ರಕರಣ ವಕ್ಫ್ ಟ್ರಿಬ್ಯುನಲ್​​ನಲ್ಲಿ ನಡೆಯಬೇಕೋ ಅಥವಾ ಸಿವಿಲ್ ಕೋರ್ಟ್​ನಲ್ಲಿ ನಡೆಯಬೇಕೋ ಎಂಬ ಬಗ್ಗೆ ನ್ಯಾಯಾಲಯದ ತೀರ್ಪು ಬರುವ ಸಾಧ್ಯತೆ ಇದೆ.

ಇದನ್ನೂ ಓದಿ: ಮಳಲಿ ಮಸೀದಿ ವಿವಾದ: ನ.9ಕ್ಕೆ ತೀರ್ಪನ್ನು ಕಾಯ್ದಿರಿಸಿದ ನ್ಯಾಯಾಲಯ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.