ETV Bharat / state

ಸ್ಟೆಪ್ಲರ್ ಪಿನ್​ನಿಂದ ಶಿವಾಜಿ ಕಲಾಕೃತಿ: 'ಎಕ್ಸ್​ಕ್ಲೂಸಿವ್ ವರ್ಲ್ಡ್ ರೆಕಾರ್ಡ್' ಪಡೆದ ಮಂಗಳೂರಿನ ವಿದ್ಯಾರ್ಥಿನಿ - ಪಿನ್​​ನಿಂದ ಛತ್ರಪತಿ ಶಿವಾಜಿ ಕಲಾಕೃತಿ

ಮಂಗಳೂರಿನ ಚಿತ್ರ ಕಲಾವಿದೆಯೋರ್ವಳು ಕಲಾಕೃತಿಗೆ‌ 'ಎಕ್ಸ್​ಕ್ಲೂಸಿವ್ ವರ್ಲ್ಡ್​ ರೆಕಾರ್ಡ್' ತನ್ನದಾಗಿಸಿಕೊಂಡಿದ್ದಾಳೆ. ದ್ವಿತೀಯ ಬಿಕಾಂ ವಿದ್ಯಾರ್ಥಿನಿಗೆ ಮೆಡಲ್, ಪ್ರಶಸ್ತಿ ಫಲಕವನ್ನು ಅವರಿಗೆ ಪ್ರದಾನ ಮಾಡಲಾಗಿದೆ.

exclusive world record
ಎಕ್ಸ್​ಕ್ಲೂಸಿವ್ ವರ್ಲ್ಡ್ ರೆಕಾರ್ಡ್
author img

By

Published : Dec 5, 2021, 10:50 PM IST

ಮಂಗಳೂರು: ಸಾಧನೆ ಮಾಡಲು ಮನಸ್ಸು ಹಾಗೂ ಹುಮ್ಮಸ್ಸು ಇದ್ದಲ್ಲಿ ಏನು ಬೇಕಾದರೂ ಸಾಧಿಸಬಹುದು ಎನ್ನುವುದಕ್ಕೆ ಮಂಗಳೂರಿನ ಈ ಹುಡುಗಿಯೇ ಸಾಕ್ಷಿ. ‌ಈಕೆಗೆ ಚಿತ್ರಕಲೆ ಕರಗತವಾಗಿತ್ತು, ಓದಿನಲ್ಲಿಯೂ ಸದಾ ಮುಂದು, ಮೈಕ್ ಮುಂದೆ ನಿಂತರೆ ನಿರರ್ಗಳವಾಗಿ ಮಾತನಾಡಬಲ್ಲಳು. ಕ್ರೀಡೆಯಲ್ಲೂ ಆಸಕ್ತಳು, ಆದರೂ ಇನ್ನೂ ಏನಾದರೂ ಸಾಧಿಸಬೇಕೆಂಬ ಛಲ ಇವಳ ಹೆಸರು ದಾಖಲೆ ಪುಟಗಳನ್ನು ಸೇರುವಂತೆ ಮಾಡಿದೆ.

mangaluru girl
ವಿದ್ಯಾರ್ಥಿನಿ ಬಿಯಾಂಕಾ ವಾಯ್ಲಾ ಸಲ್ಡಾನಾ

ನಗರದ ಕಾವೂರು ನಿವಾಸಿ, ತ್ರಿಶಾ ಕಾಲೇಜಿನ‌ ದ್ವಿತೀಯ ಬಿಕಾಂ ವಿದ್ಯಾರ್ಥಿನಿ ಬಿಯಾಂಕಾ ವಾಯ್ಲಾ ಸಲ್ಡಾನಾ ಎಂಬುವರೇ ತಾನು ಮಾಡಿರುವ ಕಲಾಕೃತಿಗೆ‌ 'ಎಕ್ಸ್ ಕ್ಲೂಸಿವ್ ವರ್ಲ್ಡ್​ ರೆಕಾರ್ಡ್' ತನ್ನದಾಗಿಸಿಕೊಂಡವರು. ಇವರು ಕೇವಲ ಎರಡು ಗಂಟೆಗಳಲ್ಲಿ ಸ್ಟೆಪ್ಲರ್ ಪಿನ್ ಮೂಲಕ ಛತ್ರಪತಿ ಶಿವಾಜಿಯ ಕಲಾಕೃತಿಯನ್ನು ಮಾಡಿದ್ದಾರೆ.

ವಿದ್ಯಾರ್ಥಿನಿಗೆ ಎಕ್ಸ್​ಕ್ಲೂಸಿವ್ ವರ್ಲ್ಡ್ ರೆಕಾರ್ಡ್

ಇದನ್ನೂ ಓದಿ: ಕುಕ್ಕೆ ಸುಬ್ರಹ್ಮಣ್ಯ ಚಂಪಾಷಷ್ಠಿ ಮಹೋತ್ಸವದಂದು ಎಡೆಸ್ನಾನಕ್ಕಿಲ್ಲ ಅವಕಾಶ

ತಮ್ಮ ಗೆಳೆಯರೋರ್ವರ ಸಲಹೆಯಂತೆ ವರ್ಲ್ಡ್ ರೆಕಾರ್ಡ್ ದಾಖಲೆ ಮಾಡಲು ಬಿಯಾಂಕಾ ವಾಯ್ಲಾ ಸಲ್ಡಾನಾ ಯೋಜನೆ ಹಾಕಿದ್ದರು. ಅದರಂತೆ 5,362 ಸ್ಟೆಪ್ಲರ್ ಪಿನ್ಸ್​ನಿಂದ ಅವರು ಶಿವಾಜಿಯ ಕಲಾಕೃತಿಯನ್ನು ರಚಿಸಿದ್ದಾರೆ. ಮೊದಲ ಪ್ರಯತ್ನದಲ್ಲಿಯೇ ಯಶಸ್ವಿಯಾದ ಅವರು ಅದರ ವೀಡಿಯೋವನ್ನು ಎಲ್​​​ಬಿಇಟಿಸಿ ಸಂಸ್ಥೆಗೆ ಅಕ್ಟೋಬರ್ 24ಕ್ಕೆ ಕಳುಹಿಸಿದ್ದರು. ಅವರು ನವೆಂಬರ್ ಅಂತ್ಯಕ್ಕೆ ಈ ಕಲಾಕೃತಿಗೆ 'ಎಕ್ಸ್ ಕ್ಲೂಸಿವ್ ವರ್ಲ್ಡ್ ರೆಕಾರ್ಡ್'ನ್ನು 'ಹೆಚ್ಚಿನ ಪಿನ್​​ಗಳಿಂದ ಸೃಜನಾತ್ಮಕ ಭಾವಚಿತ್ರ' ವಿಭಾಗದಲ್ಲಿ ಘೋಷಣೆ ಮಾಡಿದ್ದರು. ಅದಾಗಿ ಒಂದೇ ವಾರಕ್ಕೆ ಮೆಡಲ್, ಪ್ರಶಸ್ತಿ ಫಲಕವನ್ನು ಅವರಿಗೆ ಪ್ರದಾನ ಮಾಡಲಾಗಿದೆ.

ಇದನ್ನೂ ಓದಿ: ಬಿಎಸ್​ಎಫ್​ ಯೋಧರಿಗೆ ವಿಶ್ವದರ್ಜೆಯ ತಂತ್ರಜ್ಞಾನ ಒದಗಿಸಲು ಕೇಂದ್ರ ಸಿದ್ಧ: ಅಮಿತ್​ ಶಾ ಅಭಯ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.