ETV Bharat / state

ತೆಲಂಗಾಣ, ಕತಾರ್​ ಗಾಳಿಪಟ ಉತ್ಸವದಲ್ಲಿ ಹಾರಲಿದೆ ಮಂಗಳೂರಿನ ಕಥಕ್ಕಳಿ ಗಾಳಿಪಟ - ಗಾಳಿಪಟ ಉತ್ಸವ

ತೆಲಂಗಾಣ, ಕತಾರ್​ನಲ್ಲಿ ನಡೆಯಲಿರುವ ಗಾಳಿಪಟ ಉತ್ಸವದಲ್ಲಿ ಟೀಂ ಮಂಗಳೂರಿನ ಕಥಕ್ಕಳಿ ಗಾಳಿಪಟವು ಹಾರಾಟ ನಡೆಸಲಿದೆ.

Kite Festival  Kathakali Kite  Kite Festival of Qatar  ಗಾಳಿಪಟ ಉತ್ಸವ  ಮಂಗಳೂರಿನ ಕಥಕ್ಕಳಿ ಗಾಳಿಪಟ
ತೆಲಂಗಾಣ, ಕತಾರ್​ ಗಾಳಿಪಟ ಉತ್ಸವದಲ್ಲಿ ಹಾರಲಿದೆ ಮಂಗಳೂರಿನ ಕಥಕ್ಕಳಿ ಗಾಳಿಪಟ
author img

By ETV Bharat Karnataka Team

Published : Jan 11, 2024, 4:14 PM IST

ಟೀಂ ಮಂಗಳೂರು ರೂವಾರಿ ಸರ್ವೇಶ್ ರಾವ್ ಮಾತನಾಡಿದರು.

ಮಂಗಳೂರು: ರಾಷ್ಟ್ರೀಯ, ಅಂತಾರಾಷ್ಟ್ರೀಯ ಮಟ್ಟದಲ್ಲಿ ಗಾಳಿಪಟ ಹಾರಾಟದಲ್ಲಿ ಖ್ಯಾತಿ ಹೊಂದಿರುವ ಮಂಗಳೂರಿನ 'ಟೀಂ ಮಂಗಳೂರು' ಇದೀಗ ತೆಲಂಗಾಣ, ಕತಾರ್​ನಲ್ಲಿ ನಡೆಯುವ ಗಾಳಿಪಟ ಉತ್ಸವದಲ್ಲಿ ಬೃಹತ್ ಗಾತ್ರದ ಕಥಕ್ಕಳಿ ಗಾಳಿಪಟ ಹಾರಿಸಲಿದೆ.

ಕಥಕ್ಕಳಿ ಗಾಳಿಪಟ ವಿಶೇಷತೆ ಏನು?: ಟೀಂ ಮಂಗಳೂರು ತಂಡದ ಸರ್ವೇಶ್ ರಾವ್ ಅವರ ನೇತೃತ್ವದಲ್ಲಿ ಈ ಕಥಕ್ಕಳಿ ಗಾಳಿಪಟ ಬಾನಂಗಳದಲ್ಲಿ ಹಾರಾಡಲಿದೆ. ತೆಲಂಗಾಣದಲ್ಲಿ ಜನವರಿ 13 ಮತ್ತು 14 ರಂದು ನಡೆಯುವ ಗಾಳಿಪಟ ಉತ್ಸವದಲ್ಲಿ ಮಂಗಳೂರಿನ ಕಥಕ್ಕಳಿ ಗಾಳಿಪಟ ಹಾರಲಿದೆ. 12 ಅಡಿ ಅಗಲ ಹಾಗೂ 38 ಅಡಿ ಉದ್ದವಿರುವ ಈ ಕಥಕ್ಕಳಿ ಗಾಳಿಪಟಕ್ಕೆ ಅಗತ್ಯವಿರುವ ರಿಪ್ ಸ್ಟಾಕ್ ನೈಲಾನ್ ಫ್ಯಾಬ್ರಿಕ್ ಮಟೀರಿಯಲ್ ಅನ್ನು ಇಂಗ್ಲೆಂಡ್​​ನಿಂದ ತರಿಸಲಾಗಿದೆ. ಇದು ಪ್ಯಾರಚೂಟ್ ತಯಾರಿಯಲ್ಲಿ ಬಳಕೆಯಾಗುವ ಬಟ್ಟೆಯಾಗಿದೆ. ಗಾಳಿಪಟಕ್ಕೆ ಅಗ್ಯವಿರುವ ಬಿದಿರನ್ನು ಗೋವಾ ರತ್ನಗಿರಿಯ ವೆನ್ ರೂಲಾದಿಂದ ತರಿಸಲಾಗಿದೆ‌. ಈ ಗಾಳಿಪಟ ತಯಾರಿಯಲ್ಲಿ ಯಾವುದೇ ಬಣ್ಣಗಳನ್ನು ಬಳಿಕ ಮಾಡಿಲ್ಲ. ಬದಲಾಗಿ ಬಣ್ಣದ ಬಟ್ಟೆಗಳಿಂದಲೇ ಈ ಗಾಳಿಪಟವನ್ನು ತಯಾರಿಸಲಾಗುತ್ತದೆ‌. ಈ ಗಾಳಿಪಟ ತಯಾರಿಗೆ ಸುಮಾರು ಆರು ತಿಂಗಳು ಶ್ರಮಪಡಲಾಗಿದೆ.

ಹೇಗೆ ಸಿದ್ಧವಾಗಿದೆ ಈ ಗಾಳಿಪಟ?: ಕಲಾವಿದ, ಪರಿಸರವಾದಿ ದಿನೇಶ್ ಹೊಳ್ಳ ಅವರು ಕಥಕ್ಕಳಿ ಗಾಳಿಪಟಕ್ಕೆ ಅಗತ್ಯವಿರುವ ನಕಾಶೆ ರಚಿಸಿ, ಕಲರ್ ಕಾಂಬಿನೇಷನ್ ಅನ್ನು ಆಯ್ಕೆ ಮಾಡಿದ್ದಾರೆ. ಸರ್ವೇಶ್ ರಾವ್ ಅವರ ನಿರ್ದೇಶನದಲ್ಲಿ ತಂಡವು ಈ ಗಾಳಿಪಟ ರಚಿಸಿದೆ. ತೆಲಂಗಾಣದ ಗಾಳಿಪಟ ಉತ್ಸವದ ಬಳಿಕ, ಈ ಗಾಳಿಪಟ ಜನವರಿ 24ರಿಂದ ಫೆಬ್ರವರಿ 4ರ ವರೆಗೆ ಕತಾರ್ ನಲ್ಲಿ ಈ ಗಾಳಿಪಟ ಹಾರಲಿದೆ. ಜೊತೆಗೆ ಅಯೋಧ್ಯೆಯಲ್ಲಿಯೂ ಗಾಳಿಪಟ ಹಾರಾಟಕ್ಕೆ ಅವಕಾಶ ದೊರೆಯುವ ಸಾಧ್ಯತೆಯೂ ಇದೆ ಎಂದು ಹೇಳುತ್ತಾರೆ 'ಟೀಂ ಮಂಗಳೂರು' ರೂವಾರಿ ಸರ್ವೇಶ್ ರಾವ್.

'ಟೀಂ ಮಂಗಳೂರು' ಹಲವು ಬಾರಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಗಾಳಿಪಟ ಹಾರಾಟ ನಡೆಸಿದೆ. ಇವರಲ್ಲಿ ಕಥಕ್ಕಳಿ ಸೇರಿದಂತೆ ಯಕ್ಷಗಾನ, ಗರುಡ, ವಿಭೀಷಣ, ಬಟರ್ ಫ್ಲೈ ಮುಂತಾದ ಗಾಳಿಪಟಗಳು ಹಾರಾಟ ನಡೆಸಿವೆ. ಈವರೆಗೆ ಈ ತಂಡ ಫ್ರಾನ್ಸ್, ಜರ್ಮನಿ, ಇಂಗ್ಲೆಂಡ್, ಆಸ್ಟ್ರೇಲಿಯಾ, ಟರ್ಕಿ, ಕಾಂಬೋಡಿಯ, ಉಕ್ರೇನ್, ಕುವೈತ್, ಥಾಯ್ಲೆಂಡ್​ ಸೇರಿದಂತೆ ವಿವಿಧೆಡೆ ಸಾಂಪ್ರದಾಯಿಕ ಶೈಲಿಯ ಗಾಳಿಪಟ ಹಾರಿಸಿದೆ.

ಈ ಬಾರಿ ಫೆಬ್ರವರಿ ಮಧ್ಯಭಾಗದ ಬಳಿಕ ಮಂಗಳೂರಿನ ಪಣಂಬೂರು ಬೀಚ್​ನಲ್ಲಿ ಟೀಂ ಮಂಗಳೂರು, ಅಂತಾರಾಷ್ಟ್ರೀಯ ಮಟ್ಟದ ಗಾಳಿಪಟ ಉತ್ಸವವನ್ನು ಆಯೋಜಿಸುವ ಚಿಂತನೆ ನಡೆಸುತ್ತಿದೆ. ಈ ಬಗ್ಗೆ ಜಿಲ್ಲಾಧಿಕಾರಿಯವರು ಸ್ಪಂದನೆ ನೀಡಿದ್ದು, ಎಲ್ಲವೂ ಅಂದುಕೊಂಡಂತೆ ಆದಲ್ಲಿ ಮಂಗಳೂರಿನಲ್ಲಿಯೂ ದೇಶ ಹಾಗೂ ವಿದೇಶಗಳ ಗಾಳಿಪಟಗಳು ಹಾರಾಟ ನಡೆಸುವುದು ನಿಶ್ಚಿತ.

ಇದನ್ನೂ ಓದಿ: ಸ್ವಚ್ಛ ಸರ್ವೇಕ್ಷಣ ಪ್ರಶಸ್ತಿ ಪ್ರಕಟ: ಸತತ ಏಳನೇ ಬಾರಿಗೆ ಇಂದೋರ್ 'ದೇಶದ ಸ್ವಚ್ಛ ನಗರಿ'

ETV Bharat Logo

Copyright © 2025 Ushodaya Enterprises Pvt. Ltd., All Rights Reserved.