ETV Bharat / state

6 ತಿಂಗಳ ಪ್ರಯತ್ನದಲ್ಲೇ ಮಿಸ್ ಟೀನ್ ಸೂಪರ್ ಗ್ಲೋಬ್ ಇಂಟರ್​ನ್ಯಾಷನಲ್ ಕಿರೀಟ ಮುಡಿಗೇರಿಸಿಕೊಂಡ ಮಂಗಳೂರಿನ ಯುವತಿ

ಯಶಸ್ವಿನಿ ದೇವಾಡಿಗ ಅವರು 15- 19 ವರ್ಷದೊಳಗಿನ ವಿಭಾಗದಲ್ಲಿ ಈ ಪ್ರಶಸ್ತಿ ಮುಡಿಗೇರಿಸಿಕೊಂಡಿದ್ದಾರೆ.

Yashashwini Devadiga
ಯಶಸ್ವಿನಿ ದೇವಾಡಿಗ
author img

By ETV Bharat Karnataka Team

Published : Oct 3, 2023, 11:05 AM IST

Updated : Oct 4, 2023, 12:26 PM IST

ಯಶಸ್ವಿನಿ ದೇವಾಡಿಗ

ಮಂಗಳೂರು: ಯಾವುದೇ ಸಾಧನೆ ಮಾಡಬೇಕಾದರೂ ಸಾಕಷ್ಟು ಶ್ರಮ ಪಡಬೇಕು. ಹಲವು ವರ್ಷಗಳ ಕಾಲ ಸಾಧನೆ ಮಾಡಬೇಕು. ಆದರೆ ಮಂಗಳೂರಿನ ಯುವತಿಯೊಬ್ಬಳು ಆರು ತಿಂಗಳ ಅವಧಿಯಲ್ಲಿ ಥಾಯ್ಲೆಂಡ್​ನಲ್ಲಿ ನಡೆದ ಮಿಸ್ ಟೀನ್ ಸೂಪರ್ ಗ್ಲೋಬ್ ಇಂಟರ್​ನ್ಯಾಷನಲ್ -2023 ಕಿರೀಟವನ್ನು ಮುಡಿಗೇರಿಸಿದ್ದಾರೆ. ಮಂಗಳೂರಿನ ಸುರತ್ಕಲ್​ನ ಕುಳಾಯಿಯ ಹೊನ್ನಕಟ್ಟೆಯ ಯಶಸ್ವಿನಿ ದೇವಾಡಿಗ ಈ ಸಾಧನೆ ಮಾಡಿದವರು.

ಯಶಸ್ವಿನಿ ದೇವಾಡಿಗ ಮಂಗಳೂರಿನ ಸುರತ್ಕಲ್​ನ ಗೋವಿಂದದಾಸ್ ಕಾಲೇಜಿನಲ್ಲಿ ದ್ವಿತೀಯ ಪಿಯುಸಿ ವಿದ್ಯಾರ್ಥಿನಿ. ಚಿಕ್ಕಂದಿನಿಂದಲೂ ಮಂಗಳೂರಿನ ಚೆಲುವೆ ಐಶ್ವರ್ಯ ರೈ ಸೇರಿದಂತೆ ಮಾಡೆಲಿಂಗ್​ನಲ್ಲಿ ಸಾಧನೆ ಮಾಡಿದವರನ್ನು ಬೆರಗುಗಣ್ಣಿನಿಂದ ನೋಡುತ್ತಿದ್ದ ಯಶಸ್ವಿನಿ ದೇವಾಡಿಗ ಯಾವತ್ತೂ ಈ ಫೀಲ್ಡ್​ಗೆ ಬಂದವರಲ್ಲ. ಆದರೆ, ಪ್ರಥಮ ಪಿಯುಸಿ ಮುಗಿದು ರಜೆಯ ಸಂದರ್ಭದಲ್ಲಿ ಮಿಸ್ ಟೀನ್ ಮಂಗಳೂರು ಸ್ಪರ್ಧೆಯ ವಿವರ ನೋಡಿದ ಅವರು ಆ ಸ್ಪರ್ಧೆಯಲ್ಲಿ ಭಾಗಿಯಾಗಿದ್ದರು.

Yashashwini Devadiga
ಯಶಸ್ವಿನಿ ದೇವಾಡಿಗ

ಆ ಸ್ಪರ್ಧೆಯಲ್ಲಿ ಅವರು ಮೊದಲ ರನ್ನರ್ ಅಫ್ ಆಗಿ ಕಿರೀಟ ಮುಡಿಗೇರಿಸಿಕೊಂಡಿದ್ದರು. ಬಳಿಕ ಹೈದರಾಬಾದ್​ನಲ್ಲಿ ನಡೆದ ರಾಷ್ಟ್ರಮಟ್ಟದ ಸ್ಪರ್ಧೆಯಲ್ಲಿಯೂ ಕಿರೀಟ ಮುಡಿಗೇರಿಸಿದ್ದರು. ಅಲ್ಲಿಂದ ವಿಶ್ವ ಮಟ್ಟಕ್ಕೆ ಆಯ್ಕೆಯಾಗಿ ಮಿಸ್ಟರ್ ಮತ್ತು ಮಿಸ್ ಟೀನ್ ಸೂಪರ್ ಗ್ಲೋಬ್ ಜೂನಿಯರ್ ಮಾಡೆಲ್ ಇಂಟರ್​ನ್ಯಾಷನಲ್ ಸ್ಪರ್ಧೆಯಲ್ಲಿ ಭಾಗಿಯಾಗಿ ಕಿರೀಟ ಪಡೆದುಕೊಂಡಿದ್ದಾರೆ. ಈ ಸ್ಪರ್ಧೆಯ 15 ರಿಂದ 19 ವರ್ಷದೊಳಗಿನ ಕೆಟಗರಿಯಲ್ಲಿ ಅವರು ಕಿರೀಟ ಮುಡಿಗೇರಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.

ಈ ಸ್ಪರ್ಧೆಗೆ 15ಕ್ಕೂ ಅಧಿಕ ದೇಶಗಳಿಂದ 50ಕ್ಕೂ ಅಧಿಕ ಸ್ಪರ್ಧಿಗಳು ಸ್ಪರ್ಧಾರ್ಥಿಗಳಿದ್ದರು. ನಾಲ್ಕು ದಿನಗಳಲ್ಲಿ ಈ ಸ್ಪರ್ಧೆ ನಡೆದಿತ್ತು. ಈ ಸ್ಪರ್ಧೆಯಲ್ಲಿ ಎಲ್ಲಾ ಸ್ಪರ್ಧಿಗಳು ಅವರವರ ದೇಶದ ಸಾಂಪ್ರದಾಯಿಕ ಉಡುಗೆಯನ್ನು ತೊಟ್ಟು ಪ್ರದರ್ಶಿಸಿದ್ದರು. ಜೊತೆಗೆ ಸಾಂಪ್ರದಾಯಿಕ ಆಹಾರವನ್ನು ಪ್ರದರ್ಶಿಸಬೇಕಿತ್ತು. ಜೊತೆಗೆ ತಮ್ಮಲ್ಲಿರುವ ಅಸಾಧಾರಣ ಪ್ರತಿಭೆಯನ್ನು ಪ್ರದರ್ಶಿಸಬೇಕಿತ್ತು. ನಾಲ್ಕನೇ ದಿನ ಫೈನಲ್ ಹಂತದ ಸ್ಪರ್ಧೆ ನಡೆದಿತ್ತು.

Yashashwini Devadiga
ಯಶಸ್ವಿನಿ ದೇವಾಡಿಗ

ಅಂತಿಮ ಸುತ್ತಿನಲ್ಲಿ ಪ್ರಥಮ ಸ್ಥಾನ ಪಡೆದ ಯಶಸ್ವಿನಿ ದೇವಾಡಿಗ ಮಿಸ್ ಟೀನ್ ಸೂಪರ್ ಗ್ಲೋಬ್ ಇಂಟರ್​ನ್ಯಾಷನಲ್ -2023 ಕಿರೀಟವನ್ನು ಮುಡಿಗೇರಿಸಿದ್ದಾರೆ. ಮಂಗಳೂರಿನ ಕುಳಾಯಿ ನಿವಾಸಿಯಾಗಿರುವ ಯಶಸ್ವಿನಿ ದೇವಾಡಿಗ ದೇವದಾಸ ದೇವಾಡಿಗ - ಮೀನಾಕ್ಷಿ ದೇವಾಡಿಗ ದಂಪತಿಯ ಪುತ್ರಿ. ಇವರು ಸುರತ್ಕಲ್ ಗೋವಿಂದದಾಸ್ ಪಿಯು ಕಾಲೇಜಿನ ದ್ವಿತೀಯ ಪಿಯುಸಿ ವಿದ್ಯಾರ್ಥಿನಿ.

ಯಶಸ್ವಿನಿ ದೇವಾಡಿಗ ಹೇಳುವುದಿಷ್ಟು: ಮಿಸ್ಟರ್ ಮತ್ತು ಮಿಸ್ ಟೀನ್ ಸೂಪರ್ ಗ್ಲೋಬ್ ಜೂನಿಯರ್ ಮಾಡೆಲ್ ಇಂಟರ್​ನ್ಯಾಷನಲ್ ಸ್ಪರ್ಧೆಯಲ್ಲಿ ಮೊದಲ ದಿನ 15 ವಿವಿಧ ದೇಶಗಳ 50 ಸ್ಪರ್ಧಿಗಳ ಜೊತೆಗೆ, ತೀರ್ಪುಗಾರರು ಮತ್ತು ನಿರ್ದೇಶಕರೊಂದಿಗೆ ಶುಭಾಶಯಗಳನ್ನು ವಿನಿಮಯ ಮಾಡಿದರೆ, ಎರಡನೆ ದಿನದಲ್ಲಿನ ಪರಿಚಯದ ಭಾಗವಾಗಿ ಸಫಾರಿ ಪ್ರಪಂಚದ ಪ್ರವಾಸವಿತ್ತು. ಅದೇ ದಿನ ಪರಿಚಯ ಮತ್ತು ಸಂದರ್ಶನದ ಸುತ್ತಿನ ರಾಷ್ಟ್ರೀಯ ಪ್ರದರ್ಶನವನ್ನು ನಡೆಸಲಾಯಿತು. ಅಲ್ಲಿ ಭಾಗವಹಿಸುವವರೆಲ್ಲರೂ ಆಯಾ ದೇಶಗಳ ಅವರ ಸಂಪ್ರದಾಯ ಮತ್ತು ಸಂಸ್ಕೃತಿಗೆ ಅನುಗುಣವಾಗಿ ಉಡುಗೆ ತೊಟ್ಟು ಮತ್ತು ವಿವಿಧ ದೇಶಗಳ ಎಲ್ಲ ಸ್ಪರ್ಧಿಗಳು ಪ್ರದರ್ಶನದಲ್ಲಿ ಪ್ರಸ್ತುತಪಡಿಸಲು ಆಯಾ ದೇಶಗಳ ಪ್ರಸಿದ್ಧ ಆಹಾರಗಳನ್ನು ತರಬೇಕಾಗಿತ್ತು. 3ನೇ ದಿನ ಟ್ಯಾಲೆಂಟ್ ಸುತ್ತಿನ ಜೊತೆಗೆ ಗ್ರೂಮಿಂಗ್ ಸೆಷನ್​ಗಳು ನಡೆದವು. ಅಲ್ಲಿ ಭಾಗವಹಿಸಿದವರೆಲ್ಲರೂ ತಮ್ಮ ಅಸಾಧಾರಣ ಪ್ರತಿಭೆ ಪ್ರದರ್ಶಿಸಿದರು. 4ನೇ ದಿನದ ಫೈನಲ್​ ರಾಷ್ಟ್ರೀಯ ವೇಷಭೂಷಣ ಸುತ್ತು ಮತ್ತು ಸಂಜೆ ಗೌನ್ ಸುತ್ತು ಇತ್ತು ಎಂದರು.

Yashashwini Devadiga
ಯಶಸ್ವಿನಿ ದೇವಾಡಿಗ

ಯಶಸ್ವಿನಿ ದೇವಾಡಿಗ ತಾಯಿ ಹೇಳಿದ್ದು ಹೀಗೆ: ಯಶಸ್ವಿನಿ ದೇವಾಡಿಗ ತಾಯಿ ಮೀನಾಕ್ಷಿ ದೇವದಾಸ್ ಈಟಿವಿ ಭಾರತ ಜೊತೆಗೆ ಮಾತನಾಡಿ, ಇದು ನಮಗೆ ಹೊಸತು. ನಮ್ಮ ಸಂಸ್ಕೃತಿಯನ್ನು ಬಿಟ್ಟು ಹೋಗಬಾರದೆಂದು ಹೇಳಿದ್ದೇನೆ. ಅವಳು ಕೂಡ ಯಾವುದು ಸರಿ.. ಯಾವುದು ತಪ್ಪು.. ಎಂದು ಸ್ವತಃ ನಿರ್ಧಾರ ಮಾಡುತ್ತಾಳೆ. ಅಂತರಾಷ್ಟ್ರೀಯ ಸ್ಪರ್ಧೆಯಲ್ಲಿಯೂ ತನ್ನ ಮೂಗುತಿಯನ್ನು ಆಕೆ ತೆಗೆದಿಲ್ಲ. ಆಕೆಯ ಸಾಧನೆ ನನಗೆ ತುಂಬಾ ಖುಷಿಯಾಗಿದೆ. ಇಷ್ಟು ದೊಡ್ಡ ಕೆಲಸ ಮಾಡಿದ್ದಾಳೆ. ಅವಳು ಯಾವುದೇ ವಿಚಾರದಲ್ಲಿ ಕಠಿಣ ಪರಿಶ್ರಮ ಪಡುತ್ತಾಳೆ. ಈ ವಿಚಾರದಲ್ಲಿ ಕೂಡ ತುಂಬಾ ಪರಿಶ್ರಮ ಪಟ್ಟಿದ್ದಾಳೆ ಎಂದು ಹೇಳಿದರು.

ಎಲ್ಲ ತೀರ್ಪುಗಳ ನಂತರ ಮಿಸ್ ಯಶಸ್ವಿನಿ ದೇವಾಡಿಗ ಕುಳಾಯಿ ಅವರು ಮಿಸ್ ಟೀನ್ ಸೂಪರ್ ಗ್ಲೋಬ್ ಇಂಟರ್​ನ್ಯಾಷನಲ್ 2023 ಕಿರೀಟ ಮುಡಿಗೇರಿಸಿಕೊಂಡರು. 16 ವರ್ಷ ವಯಸ್ಸಿನ ಯಶಸ್ವಿನಿ ದೇವಾಡಿಗ ಅವರಿಗೆ ಇನ್ನು 18 ವರ್ಷದ ಬಳಿಕವಷ್ಟೆ ಮಾಡೆಲಿಂಗ್ ಸ್ಪರ್ಧೆಯಲ್ಲಿ ಭಾಗವಹಿಸಲು ಸಾಧ್ಯವಾಗಲಿದೆ. ಮಿಸ್ ಇಂಡಿಯಾ, ಮಿಸ್ ಯುನಿವರ್ಸ್ ಮಿಸ್ ವರ್ಲ್ಡ್ ಸ್ಪರ್ಧೆಯಲ್ಲಿ ಭಾಗವಹಿಸುವ ಅವಕಾಶವಿದ್ದು ಆ ಸ್ಪರ್ಧೆಯಲ್ಲಿ ಭಾಗವಹಿಸುವ ನಿರೀಕ್ಷೆ ಹೊಂದಿದ್ದಾರೆ.

ಇದನ್ನೂ ಓದಿ: ಮಿಸ್​ ಆಗಿದ್ದಾಗ ಮಿಸ್​ ಮಾಡ್ಕೊಂಡ ಕನಸು ಮಿಸೆಸ್​ ಆದ್ಮೇಲೆ ನನಸು!

Last Updated : Oct 4, 2023, 12:26 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.