ಮಂಗಳೂರು: ಕೋವಿಡ್ ಹಿನ್ನೆಲೆಯಲ್ಲಿ ಕಳೆದ ಎಂಟು ತಿಂಗಳಿನಿಂದ ಸ್ಥಗಿತಗೊಂಡಿದ್ದ ಮಂಗಳೂರು-ಕಾಸರಗೋಡು ಬಸ್ ಸಂಚಾರ ಇಂದಿನಿಂದ ಆರಂಭಗೊಂಡಿದೆ.
ಇಂದು ಮಂಗಳೂರಿನಿಂದ ಕಾಸರಗೋಡಿಗೆ ಲಾಲ್ಬಾಗ್ನ ಕೆಎಸ್ಆರ್ಟಿಸಿ ಬಸ್ ನಿಲ್ದಾಣದಿಂದ ಹಾಗೂ ಸ್ಟೇಟ್ಬ್ಯಾಂಕ್ನಲ್ಲಿರುವ ಸರ್ವೀಸ್ ಬಸ್ ನಿಲ್ದಾಣದಿಂದ ಸೇರಿ ಒಟ್ಟು 120 ಬಸ್ಗಳು ಓಡಾಟ ನಡೆಸಿವೆ. ಅದೇ ರೀತಿ ಕಾಸರಗೋಡಿನಿಂದಲೂ ಇಷ್ಟೇ ಬಸ್ಗಳು ಸಂಚಾರ ನಡೆಸಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಲಾಕ್ಡೌನ್ ತೆರವಿನ ಬಳಿಕ ಹಂತ ಹಂತವಾಗಿ ಬಸ್ ಸಂಚಾರಕ್ಕೆ ಅನುಮತಿ ನೀಡಿರುವುದರಿಂದ ಮಂಗಳೂರಿನಿಂದ ಹೊರಟ ಬಸ್ಗಳು ಕಾಸರಗೋಡಿನ ಗಡಿಭಾಗ ತಲಪಾಡಿವರೆಗೆ ಸಂಚಾರ ನಡೆಸುತ್ತಿದ್ದವು. ಇಂದಿನಿಂದ ಮಂಗಳೂರಿನಿಂದ ಕಾಸರಗೋಡಿಗೆ ಹಾಗೂ ಕಾಸರಗೋಡಿನಿಂದ ಮಂಗಳೂರಿಗೆ ಬಸ್ಗಳು ಸಂಚರಿಸಲು ಆರಂಭಗೊಂಡಿದೆ. ಇಂದು ಆರಂಭದ ದಿನವಾದ್ದರಿಂದ ಅಷ್ಟೊಂದು ಜನ ಪ್ರಯಾಣಿಕರು ಬಸ್ ನಲ್ಲಿ ಕಂಡು ಬರಲಿಲ್ಲ.