ETV Bharat / state

ಪ್ರೀತಿಯ ಬೆಕ್ಕಿನೊಂದಿಗೆ ತಾಯ್ನಾಡಿಗೆ ಮರಳಿದ ಮಂಗಳೂರು ವಿದ್ಯಾರ್ಥಿನಿ - ಉಕ್ರೇನ್​ನಿಂದ ಮರಳಿದ ಮಂಗಳೂರು ವಿದ್ಯಾರ್ಥಿನಿ

ಉಕ್ರೇನ್​ನಿಂದ ಮಂಗಳೂರಿಗೆ ಹಿಂದಿರುಗಿದ ವಿದ್ಯಾರ್ಥಿನಿ ತನ್ನೊಂದಿಗೆ ಸಾಕಿದ ಬೆಕ್ಕನ್ನು ಕರೆ ತಂದಿದ್ದಾಳೆ.

Mangalore student return from Ukraine along with cat
ಬೆಕ್ಕಿನ ಜೊತೆ ಉಕ್ರೇನ್​ನಿಂದ ಮಂಗಳೂರಿಗೆ ಆಗಮಿಸಿದ ವಿದ್ಯಾರ್ಥಿನಿ
author img

By

Published : Mar 7, 2022, 6:01 PM IST

ಮಂಗಳೂರು: ಯುದ್ಧಪೀಡಿತ ಉಕ್ರೇನ್​ನಿಂದ ಮರಳಿದ ವಿದ್ಯಾರ್ಥಿನಿಯೋರ್ವಳು ತಾನು ಸಾಕಿದ ಬೆಕ್ಕನ್ನು ತನ್ನ ಜೊತೆ ಕರೆ ತಂದಿದ್ದಾಳೆ.

ಬೆಕ್ಕಿನ ಜೊತೆ ಉಕ್ರೇನ್​ನಿಂದ ಮಂಗಳೂರಿಗೆ ಆಗಮಿಸಿದ ವಿದ್ಯಾರ್ಥಿನಿ

ದೇರಳಕಟ್ಟೆಯ ಲಕ್ಷಿತಾ ಪುರುಷೋತ್ತಮ್ ಹೆಚ್ಚಿನ ವಿದ್ಯಾಭ್ಯಾಸಕ್ಕಾಗಿ ಉಕ್ರೇನ್​ಗೆ ತೆರಳಿದ್ದಳು. ಆದರೆ ಉಕ್ರೇನ್​ನಲ್ಲಿ ಆರಂಭವಾಗಿರುವ ಯುದ್ಧದಿಂದ ಎಲ್ಲಾ ಕನ್ನಡಿಗರು ತಾಯ್ನಾಡಿಗೆ ಮರಳುತ್ತಿದ್ದಾರೆ. ನಿನ್ನೆ ಬೆಂಗಳೂರಿನ ವಿಮಾನ ನಿಲ್ದಾಣಕ್ಕೆ ಬಂದಿದ್ದ ಯುವತಿ ಇಂದು ರಸ್ತೆ ಮಾರ್ಗವಾಗಿ ನಗರವನ್ನು ತಲುಪಿದ್ದು, ಜಿಲ್ಲಾಧಿಕಾರಿಗಳನ್ನು ಭೇಟಿ ಮಾಡಿ ಧನ್ಯವಾದ ಅರ್ಪಿಸಿದಳು.

ಉಕ್ರೇನ್​​ನಲ್ಲಿ ಲೀಸಾ ಎಂಬೆಸರಿನ ಬೆಕ್ಕನ್ನು ಕುಟುಂಬವೊಂದರಿಂದ ದತ್ತು ಪಡೆದಿದ್ದೆ. ಹತ್ತು ತಿಂಗಳಿನಿಂದ‌ ಈ ಬೆಕ್ಕು ನನ್ನೊಂದಿಗೆ ವಾಸವಾಗಿತ್ತು. ಅದನ್ನು ಬಿಟ್ಟು ಬರಲು ಮನಸಾಗದೆ ನನ್ನೊಂದಿಗೆ ಕರೆದುಕೊಂಡು ಬಂದಿದ್ದೇನೆ. ವಿಮಾನದಲ್ಲಿ ಬೆಕ್ಕನ್ನು ಕರೆದುಕೊಂಡು ಬರುವಾಗ ಯಾವುದೇ ಸಮಸ್ಯೆ ಆಗಿಲ್ಲ. ಉಕ್ರೇನ್​​​ನಲ್ಲಿ ಮತ್ತೆ ಪರಿಸ್ಥಿತಿ ಸಹಜಸ್ಥಿತಿಗೆ ಬಂದರೆ ಮತ್ತೆ ಅಲ್ಲಿಗೆ ಹೋಗಿ ವಿದ್ಯಾಭ್ಯಾಸ ಪೂರ್ಣಗೊಳಿಸುವೆ ಎಂದು ಯುವತಿ ಹೇಳಿದರು.

ಇದನ್ನೂ ಓದಿ: ಲಗೇಜ್​ಗಿಂತ 'ಕ್ಯಾಂಡಿ' ಮುಖ್ಯ: ಲಗೇಜ್​ ಅಲ್ಲೇ ಬಿಟ್ಟು, ಉಕ್ರೇನ್​ನಿಂದ ಭಾರತಕ್ಕೆ ಶ್ವಾನ ಕರೆತಂದ ವಿದ್ಯಾರ್ಥಿನಿ!

For All Latest Updates

TAGGED:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.