ಮಂಗಳೂರು: ಮಂಗಳೂರು ನಗರ ಪೊಲೀಸ್ ಕಮೀಷನರ್ ಸಂದೀಪ್ ಪಾಟೀಲ್ ಅವರನ್ನು ವರ್ಗಾವಣೆ ಮಾಡಲಾಗಿದೆ. ನೂತನ ಕಮೀಷನರ್ ಆಗಿ ಸುಬ್ರಹ್ಮಣ್ಯೇಶ್ವರ ರಾವ್ ಅವರನ್ನು ನೇಮಿಸಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.
ಸಂದೀಪ್ ಪಾಟೀಲ್ ಅವರನ್ನ ಬೆಂಗಳೂರು ನಗರದ ಅಪರಾಧ ವಿಭಾಗದ ಜಂಟಿ ಪೊಲೀಸ್ ಕಮೀಷನರ್ ಆಗಿ ನೇಮಕ ಮಾಡಲಾಗಿದೆ.
ಮಂಗಳೂರು ಕಮೀಷನರ್ ಆಗಿ ಕಾರ್ಯನಿರ್ವಹಿಸಿದ ಸಂದೀಪ್ ಪಾಟೀಲ್ ತಮ್ಮ ಅಲ್ಪಾವಧಿಯಲ್ಲಿ ಅಕ್ರಮ ಜೂಜು, ಮಟ್ಕಾ, ಬೆಟ್ಟಿಂಗ್ ಮಟ್ಟ ಹಾಕಿದ್ದರು. ಮಂಗಳೂರಿನ ಸಂಚಾರ ನಿರ್ವಹಣೆಯಲ್ಲಿ ಕಠಿಣ ಕ್ರಮ ಜಾರಿಗೊಳಿಸಿದ್ದರು. ರೌಡಿಗಳಿಗೆ ಸಿಂಹಸ್ವಪ್ನವಾಗಿ, ಹಳೆಯ ಪ್ರಕರಣಗಳನ್ನು ಭೇದಿಸಿ , ಜನಸ್ನೇಹಿಯಾಗಿ ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದರು.
ಬೆಂಗಳೂರು ಗುಪ್ತಚರ ವಿಭಾಗದ ಡಿಐಜಿಪಿ ಆಗಿದ್ದ ಎ. ಸುಬ್ರಹ್ಮಣ್ಯೇಶ್ವರ ರಾವ್ ಅವರನ್ನು ಮಂಗಳೂರು ನಗರ ಪೊಲೀಸ್ ಕಮೀಷನರ್ ಆಗಿ ನಿಯುಕ್ತಿಗೊಳಿಸಲಾಗಿದೆ. ಈ ಹಿಂದೆ ಎ ಸುಬ್ರಹ್ಮಣ್ಯೇಶ್ವರ ರಾವ್ ಅವರು ದ.ಕ ಜಿಲ್ಲಾ ಎಸ್ ಪಿ ಯಾಗಿ ಕಾರ್ಯನಿರ್ವಹಿಸಿದ್ದರು.