ETV Bharat / state

ಪಬ್ಲಿಕ್ ಟಾಯ್ಲೆಟ್​ನಲ್ಲಿ ಮಹಿಳಾ ಪ್ರೊಫೆಸರ್​ ಫೋನ್ ನಂಬರ್ ಬರೆದು ವಿಕೃತಿ : ಖಾಸಗಿ ಕಾಲೇಜಿನ ಮೂವರ ಸೆರೆ

ಸುಮಾರು ಒಂದು ವರ್ಷದಿಂದ ಇಂತಹ ಮಾನಹಾನಿಯಿಂದ ನೊಂದ ಶಿಕ್ಷಕಿ ಮಂಗಳೂರು ನಗರ ಪೊಲೀಸರಿಗೆ ದೂರು ನೀಡಿದ್ದರು. ಈ ದೂರಿನ ಮೇರೆಗೆ ಬೆಳ್ತಂಗಡಿ ತಾಲೂಕಿನ ಲಾಯಿಲದ ಪ್ರಕಾಶ್ ಶೆಣೈ, ಬಂಟ್ವಾಳ ಸಿದ್ದಕಟ್ಟೆಯ ಪ್ರದೀಪ್ ಪೂಜಾರಿ, ಉಡುಪಿ ಜಿಲ್ಲೆ ಹೆಬ್ರಿ ತಾಲೂಕಿನ ನಡ್ಪಾಲುವಿನ ತಾರಾನಾಥ ಬಿ.ಎಸ್.ಶೆಟ್ಟಿ ಎಂಬುವರನ್ನು ಬಂಧಿಸಲಾಗಿದೆ..

ಮಂಗಳೂರಿನಲ್ಲಿ ಖಾಸಗಿ ಕಾಲೇಜಿನ ಮೂವರ ಬಂಧನ
ಮಂಗಳೂರಿನಲ್ಲಿ ಖಾಸಗಿ ಕಾಲೇಜಿನ ಮೂವರ ಬಂಧನ
author img

By

Published : Apr 20, 2022, 3:09 PM IST

Updated : Apr 20, 2022, 3:44 PM IST

ಮಂಗಳೂರು : ಹಿರಿಯ ಮಹಿಳಾ ಪ್ರೊಫೆಸರ್​ವೊಬ್ಬರ ಫೋನ್ ನಂಬರ್ ಪಬ್ಲಿಕ್ ಟಾಯ್ಲೆಟ್​ನಲ್ಲಿ ಬರೆದು ಮಾನಹಾನಿಕಾರ ಪತ್ರ, ಪೋಸ್ಟರ್​ ಅಂಟಿಸಿ ಮಾನಸಿಕ ಕಿರುಕುಳ ನೀಡಿದ ಆರೋಪದ ಮೇಲೆ ಬಂಟ್ವಾಳದ ಖಾಸಗಿ ಕಾಲೇಜಿನ ಮೂವರು ಶಿಕ್ಷಕರನ್ನು ಮಂಗಳೂರು ನಗರ ಪೊಲೀಸರು ಬಂಧಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಮಂಗಳೂರು ನಗರ ಪೊಲೀಸ್ ಕಮೀಷನರ್ ಶಶಿಕುಮಾರ್, ಬಂಟ್ವಾಳ ಖಾಸಗಿ ಕಾಲೇಜಿನ ಪ್ರೊಫೆಸರ್ ಆಗಿ ಸದ್ಯ ಡೆಪ್ಯುಟೇಶನ್​ನಲ್ಲಿರುವ ಮಹಿಳಾ ಪ್ರೊಫೆಸರ್ ವಿರುದ್ದ ಆರಂಭದಲ್ಲಿ ಅವರ ಪರಿಚಯದ ಶಿಕ್ಷಕರಿಗೆ, ಶಿಕ್ಷಣ ಇಲಾಖೆಯ ಉನ್ನತ ದರ್ಜೆ ಅಧಿಕಾರಿಗಳಿಗೆ ಆರೋಪಿಗಳು ಮಾನಹಾನಿಕಾರ ಪತ್ರವನ್ನು ಬರೆದಿದ್ದರು.

ಮಂಗಳೂರಿನಲ್ಲಿ ಖಾಸಗಿ ಕಾಲೇಜಿನ ಮೂವರ ಬಂಧನ

ಆ ಬಳಿಕ ವಿವಿಧ ಕಡೆಯ ಪಬ್ಲಿಕ್ ಟಾಯ್ಲೆಟ್​ನಲ್ಲಿ ಈ ಪ್ರೊಫೆಸರ್ ಫೋನ್ ನಂಬರ್ ಹಾಕಿ ಇವರು ಕಡಿಮೆ ದರದಲ್ಲಿ ವೇಶ್ಯಾವಾಟಿಕೆ ಮಾಡುತ್ತಾರೆ ಎಂದು ಬರೆದಿದ್ದರು ಅಂತಾ ತಿಳಿಸಿದರು. ಅಲ್ಲದೇ, ವಿವಿಧ ಕಡೆ ಅಶ್ಲೀಲವಾಗಿ ಬರೆದು ಪೋಸ್ಟರ್​ಗಳನ್ನು ಹಾಕಿದ್ದರು.

ಸುಮಾರು ಒಂದು ವರ್ಷದಿಂದ ಇಂತಹ ಮಾನಹಾನಿಯಿಂದ ನೊಂದ ಶಿಕ್ಷಕಿ ಮಂಗಳೂರು ನಗರ ಪೊಲೀಸರಿಗೆ ದೂರು ನೀಡಿದ್ದರು. ಈ ದೂರಿನ ಮೇರೆಗೆ ಬೆಳ್ತಂಗಡಿ ತಾಲೂಕಿನ ಲಾಯಿಲದ ಪ್ರಕಾಶ್ ಶೆಣೈ, ಬಂಟ್ವಾಳ ಸಿದ್ದಕಟ್ಟೆಯ ಪ್ರದೀಪ್ ಪೂಜಾರಿ, ಉಡುಪಿ ಜಿಲ್ಲೆ ಹೆಬ್ರಿ ತಾಲೂಕಿನ ನಡ್ಪಾಲುವಿನ ತಾರಾನಾಥ ಬಿ.ಎಸ್.ಶೆಟ್ಟಿ ಎಂಬುವರನ್ನು ಬಂಧಿಸಲಾಗಿದೆ.

ಈ ಆರೋಪಿಗಳು ಬಂಟ್ವಾಳ ಖಾಸಗಿ ಕಾಲೇಜಿನ ಸಂಚಾಲಕ ಹಾಗೂ ಪ್ರಾಧ್ಯಾಪಕರುಗಳಾಗಿದ್ದಾರೆ. ಆದರೆ, ಈ ಕೃತ್ಯವೆಸಗಲು ನಿಖರ ಕಾರಣ ತಿಳಿದು ಬಂದಿಲ್ಲ. ಈ ಬಗ್ಗೆ ತನಿಖೆ ಮುಂದುವರಿದಿದೆ ಎಂದು ತಿಳಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಸಂತ್ರಸ್ತ ಮಹಿಳಾ ಪ್ರೊಫೆಸರ್, ನನ್ನ ಬಗ್ಗೆ ಮಾನಹಾನಿಕರ ಪತ್ರ ಬರೆದಂದಿನಿಂದ ನೆಮ್ಮದಿ ಇಲ್ಲದಂತಾಗಿದೆ. ಪೊಲೀಸರಿಗೆ ದೂರು ನೀಡಿದ ಬಳಿಕ ಧೈರ್ಯ ತುಂಬಿದರು. ದೂರು ನೀಡುವಾಗಲೇ ಇವರ ಬಗ್ಗೆ ಪೊಲೀಸರಲ್ಲಿ ಅನುಮಾನ ವ್ಯಕ್ತಪಡಿಸಿದ್ದೆ. ಅದೀಗ ನಿಜವಾಗಿದೆ ಎಂದರು.

ಇದನ್ನೂ ಓದಿ: ಸ್ನಾನಕ್ಕೆಂದು ತೆರಳಿದ್ದ ಆಶ್ರಮದ ಬಾಲಕಿಯರು.. ಕಾಲುವೆ ನೀರಿನ ರಭಸಕ್ಕೆ ನಾಲ್ವರು ನೀರುಪಾಲು

Last Updated : Apr 20, 2022, 3:44 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.