ETV Bharat / state

ದ.ಕ. ಜಿಲ್ಲೆಯಲ್ಲಿ‌ ವಾರದ ಲಾಕ್ ಡೌನ್ ಇಂದಿಗೆ ಅಂತ್ಯ!

author img

By

Published : Jul 22, 2020, 4:26 PM IST

ಕೊರೊನಾ ಸೋಂಕು ತಡೆಗೆ ಘೋಷಣೆಯಾದ ಲಾಕ್ ಡೌನ್ ಪರಿಣಾಮ ಜಿಲ್ಲೆ ಒಂದು ವಾರಗಳ ಕಾಲ ಸ್ತಬ್ಧವಾಗಿತ್ತು. ಜಿಲ್ಲಾಡಳಿತ ಜಾರಿಗೊಳಿಸಿರುವ ಲಾಕ್ ಡೌನ್ ಇಂದು ರಾತ್ರಿಗೆ ಅಂತ್ಯಗೊಳ್ಳಲಿದೆ.

Mangalore lockdown
Mangalore lockdown

ಮಂಗಳೂರು: ಕೊರೊನಾ ಸೋಂಕು ಹೆಚ್ಚುತ್ತಿರುವ ಹಿನ್ನೆಲೆ, ದ.ಕ. ಜಿಲ್ಲೆಯಾದ್ಯಂತ ಒಂದು ವಾರ ಕಾಲ ಜಿಲ್ಲಾಡಳಿತ ಜಾರಿಗೊಳಿಸಿರುವ ಲಾಕ್ ಡೌನ್ ಇಂದು ರಾತ್ರಿಗೆ ಅಂತ್ಯಗೊಳ್ಳಲಿದೆ. ಇಂದು ಜಿಲ್ಲೆಯಲ್ಲಿ ಸಂಪೂರ್ಣ ಸ್ತಬ್ಧ ವಾತಾವರಣ ಕಂಡುಬಂದಿದೆ.

ಬೆಳಗ್ಗೆ 8 ರಿಂದ 11 ರವರೆಗೆ ಲಾಕ್ ಡೌನ್ ಸಡಿಲಿಕೆ ಇದ್ದ ಸಂದರ್ಭದಲ್ಲಿ ಖಾಸಗಿ ವಾಹನಗಳ ಸಂಚಾರ ನಿರಾತಂಕವಾಗಿ ನಡೆಯುತ್ತಿತ್ತು. ಅದೇ ರೀತಿ ಮಾರುಕಟ್ಟೆ, ದಿನಸಿ ಅಂಗಡಿಗಳಲ್ಲಿಯೂ ಜನಸಂಖ್ಯೆ ಕಂಡು ಬಂದಿತ್ತು. ಆದರೆ 11 ಗಂಟೆಯ ಬಳಿಕ ಜಿಲ್ಲೆ ಸ್ತಬ್ಧವಾಗಿದೆ. ಮಧ್ಯಾಹ್ನದ ಬಳಿಕ ವಾಹನಗಳ ಓಡಾಟವಿಲ್ಲದೇ, ಜನಸಂಚಾರವೂ ಇಲ್ಲದೆ ರಸ್ತೆಗಳು ಬಿಕೋ ಎನ್ನುತ್ತಿದ್ದವು.

ಲಾಕ್ ಡೌನ್ ವಿನಾಯಿತಿ ಬಳಿಕ ಕಠಿಣ ಬಂದ್ ಜಾರಿಗೊಳ್ಳುವ ಪರಿಣಾಮ ಪೊಲೀಸರು ಎಲ್ಲಾ ಖಾಸಗಿ ವಾಹನಗಳಿಗೆ ತಡೆವೊಡ್ಡಿ, ತಪಾಸಣೆ ನಡೆಸಿ ಬಳಿಕ ತುರ್ತುಸೇವೆಗಳ ವಾಹನಗಳ ಸಂಚಾರಕ್ಕೆ ಅನುವು ಮಾಡುತ್ತಿದ್ದರು.‌ ಅನಗತ್ಯವಾಗಿ ಸಂಚರಿಸುವ ವಾಹನಗಳನ್ನು ಹಿಂದಕ್ಕೆ ಕಳುಹಿಸುತ್ತಿದ್ದರು. ಒಟ್ಟಿನಲ್ಲಿ ಮಧ್ಯಾಹ್ನದ ಬಳಿಕ ಜಿಲ್ಲೆ ಸಂಪೂರ್ಣ ಸ್ತಬ್ಧಗೊಂಡಿರುವ ದೃಶ್ಯ ಕಂಡು ಬಂದಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.