ಮಂಗಳೂರು: ದ.ಕ.ಜಿಲ್ಲೆಯ ಮಂಗಳೂರು ತಾಲೂಕಿನ ಜಪ್ಪಿನ ಮೊಗರು ಗ್ರಾಮದ ಜಪ್ಪು ಪಟ್ಟಣದ 31 ವರ್ಷದ ವ್ಯಕ್ತಿಯಲ್ಲಿ ಕೋವಿಡ್ 19 ಸೋಂಕು ಪತ್ತೆಯಾಗಿರುವ ಹಿನ್ನೆಲೆಯಲ್ಲಿ ಈ ಪ್ರದೇಶವನ್ನು ಕಂಟೇನ್ಮೆಂಟ್ ಝೋನ್ ಆಗಿ ಪರಿವರ್ತಿಸಿ ಸಂಪೂರ್ಣ ಸೀಲ್ ಡೌನ್ ಮಾಡಲಾಗಿದೆ ಎಂದು ಜಿಲ್ಲಾಧಿಕಾರಿ ಸಿಂಧೂ ಬಿ. ರೂಪೇಶ್ ತಿಳಿಸಿದ್ದಾರೆ.

ಪೂರ್ವದಲ್ಲಿ ಬಜಾಲ್ ಫೈಸಲ್ ನಗರ, ಪಶ್ಚಿಮದಲ್ಲಿ ಅರಬ್ಬಿ ಸಮುದ್ರ, ಉತ್ತರದಲ್ಲಿ ಬಿಕರ್ಣಕಟ್ಟೆ ಹಾಗೂ ದಕ್ಷಿಣದಲ್ಲಿ ಉಳ್ಳಾಲದವರೆಗೆ ಬಫರ್ ಝೋನ್ ಎಂದು ಘೋಷಣೆ ಮಾಡಲಾಗಿದೆ. ಈ ಬಫರ್ ಝೋನ್ ನಲ್ಲಿ 32,500 ಮನೆಗಳಿದ್ದು, 925 ಅಂಗಡಿಗಳು, 58 ಕಚೇರಿಗಳು ಒಳಗೊಂಡಿವೆ.