ಮಂಗಳೂರು: ಮಂಗಳೂರು ಮಹಾನಗರ ಪಾಲಿಕೆಯ ವ್ಯಾಪ್ತಿಯ 60 ವಾರ್ಡ್ಗಳಿಗೆ ನವೆಂಬರ್ 12ರಂದು ನಡೆಯಲಿರುವ ಚುನಾವಣೆಗೆ ನಾಮಪತ್ರ ಸಲ್ಲಿಕೆ ಗುರುವಾರ ಮುಕ್ತಾಯವಾಗಿದೆ. ಕಾಂಗ್ರೆಸ್, ಬಿಜೆಪಿ, ಜೆಡಿಎಸ್ ಹಾಗೂ ಪಕ್ಷೇತರರು ಸೇರಿ ಒಟ್ಟು 236 ನಾಮಪತ್ರಗಳು ಸಲ್ಲಿಕೆಯಾಗಿದೆ.
ನವೆಂಬರ್ 2ರಂದು ನಾಮಪತ್ರ ಪರಿಶೀಲನೆ ಕಾರ್ಯ ನಡೆಯಲಿದ್ದು, ನವೆಂಬರ್ 4ರಂದು ನಾಮಪತ್ರ ಹಿಂದೆಗೆದುಕೊಳ್ಳಲು ಕೊನೆಯ ದಿನವಾಗಿದೆ. ನವೆಂಬರ್ 12ರಂದು ಬೆಳಗ್ಗೆ 7ರಿಂದ ಸಂಜೆ 5 ರವರೆಗೆ ಮತದಾನ ಪ್ರಕ್ರಿಯೆ ನಡೆಯಲಿದೆ.
ನಾಮಪತ್ರ ಸಲ್ಲಿಕೆಯ ವಿವರ ಇಂತಿದೆ:
- ಕಾಂಗ್ರೆಸ್ - 66
- ಬಿಜೆಪಿ - 94
- ಜೆಡಿಎಸ್ - 14
- ಸಿಪಿಐ - 1
- ಸಿಪಿಐಎಂ - 8
- ಎಸ್ ಡಿಪಿಐ - 10
- ಜೆಡಿಯು - 2
- ಡಬ್ಲ್ಯೂಪಿಐ - 3
- ಕರ್ನಾಟಕ ರಾಷ್ಟ್ರ ಸಮಿತಿ - 3
- ಪಕ್ಷೇತರರು - 35