ETV Bharat / state

ಮೋದಿ ವಿರುದ್ಧ ಖಾದರ್ ಹೇಳಿಕೆಗೆ ಮಂಗಳೂರು ಬಿಜೆಪಿ ಜಿಲ್ಲಾಧ್ಯಕ್ಷ ತಿರುಗೇಟು

author img

By

Published : Jun 17, 2020, 6:59 PM IST

ಭಾರತ-ಚೀನಾ ಗಡಿಭಾಗದಲ್ಲಿ ದೇಶವನ್ನು ರಕ್ಷಿಸಲು ಸರ್ಕಾರ ಸಾಕಷ್ಟು ಪ್ರಯತ್ನ ಪಡುತ್ತಿದೆ. ಇಂತಹ ಸಂದರ್ಭದಲ್ಲೂ ಮಾಜಿ ಸಚಿವ ಯು. ಟಿ. ಖಾದರ್ ರಾಜಕೀಯ ಮಾಡಿ ತಮ್ಮ ಅಲ್ಪತನ ಪ್ರದರ್ಶಿಸುತ್ತಿದ್ದಾರೆ ಎಂದು ದ. ಕ. ಜಿಲ್ಲಾ ಬಿಜೆಪಿ ಜಿಲ್ಲಾಧ್ಯಕ್ಷ ಸುದರ್ಶನ್​ ಎಂ. ಮೂಡುಬಿದಿರೆ ಹೇಳಿದರು.

Mangalore BJP district president gave recounter to U. T. Khadar
ಖಾದರ್ ಮೋದಿ ವಿರುದ್ಧದ​ ಹೇಳಿಕೆಗೆ ಮಂಗಳೂರು ಬಿಜೆಪಿ ಜಿಲ್ಲಾಧ್ಯಕ್ಷ ತಿರುಗೇಟು

ಮಂಗಳೂರು: ಗಡಿಭಾಗದಲ್ಲಿ ದೇಶವನ್ನು ರಕ್ಷಿಸಲು ಸರ್ಕಾರ ಸಾಕಷ್ಟು ಪ್ರಯತ್ನ ಪಡುತ್ತಿದೆ. ಇಂತಹ ಸಂದರ್ಭದಲ್ಲೂ ಮಾಜಿ ಸಚಿವ ಯು. ಟಿ. ಖಾದರ್ ರಾಜಕೀಯ ಮಾಡಿ ತಮ್ಮ ಅಲ್ಪತನ ಪ್ರದರ್ಶಿಸುತ್ತಿದ್ದಾರೆ ಎಂದು ದ. ಕ. ಜಿಲ್ಲಾ ಬಿಜೆಪಿ ಜಿಲ್ಲಾಧ್ಯಕ್ಷ ಸುದರ್ಶನ್​ ಎಂ. ಮೂಡುಬಿದಿರೆ ಹೇಳಿದರು.

ನಗರದ ಕೊಡಿಯಾಲ್ ಬೈಲ್ ನಲ್ಲಿರುವ ಬಿಜೆಪಿ ಕಚೇರಿಯಲ್ಲಿ‌ ಮಾತನಾಡಿದ ಅವರು, ಲಡಾಖ್ ಗಡಿ ಭಾಗದಲ್ಲಿ ಸೈನಿಕರು ಹುತಾತ್ಮರಾಗಿರುವುದರ ಕುರಿತು ಮಾಜಿ ಸಚಿವ ಖಾದರ್ 'ಈಗೆಲ್ಲಿ ಹೋಗಿದ್ದಾರೆ 56 ಇಂಚು ಎದೆಯ ಮೋದಿ' ಎಂಬ ಹೇಳಿಕೆ ನೀಡಿದ್ದು, ಈ ಹೇಳಿಕೆ ಅಸಮಂಜಸವಾಗಿದೆ. ಸೈನಿಕರ ಹತ್ಯೆಯಾಗಿರುವ ಸಂದರ್ಭದಲ್ಲಿ ಇಂತಹ ಹೇಳಿಕೆ ನೀಡಬಾರದು ಎಂದು ತಿರುಗೇಟು ನೀಡಿದರು.

ನಮ್ಮ 20 ಸೈನಿಕರ ಬಲಿದಾನಕ್ಕೆ ಬದಲಾಗಿ ಚೀನಾದ 43 ಸೈನಿಕರ ಹತ್ಯೆಯಾಗಿರುವ ವಿಷಯ ಖಾದರ್ ಅವರಿಗೆ ತಿಳಿದಿಲ್ಲ ಅನಿಸುತ್ತದೆ. ಕಾಂಗ್ರೆಸ್ ನಾಯಕರು ಮೋದಿಯವರ 56 ಇಂಚು ಎದೆಯ ಬಗ್ಗೆ ಪ್ರಸ್ತಾಪಿಸುತ್ತಿದ್ದಾರೆ. ಮೋದಿಯವರ 56 ಇಂಚು ಎದೆಗಾರಿಕೆಯ ಪರಿಣಾಮ ಗಡಿ ದಾಳಿಯ ಸಂದರ್ಭ ನಮ್ಮ ಸೈನಿಕರು ಸೂಕ್ತ ಉತ್ತರ ನೀಡುತ್ತಿದ್ದಾರೆ. 56 ಇಂಚು ಎದೆಗಾರಿಕೆಯ ಪರಿಣಾಮ ಜಮ್ಮುವಿನಲ್ಲಿ 370 ಕಾಯ್ದೆ ಜಾರಿ, ತ್ರಿವಳಿ ತಲಾಖ್ ರದ್ದು, ಸಿಎಎ ಕಾಯ್ದೆ ಜಾರಿಯಾಗಿದೆ. ಮೋದಿಯವರ ನಾಯಕತ್ವವನ್ನು ದೇಶ ಮಾತ್ರವಲ್ಲ ಜಗತ್ತಿನ ನಾಯಕರು ಒಪ್ಪಿಕೊಳ್ಳುತ್ತಿದ್ದಾರೆ. ಇಂತಹ ಸಂದರ್ಭದಲ್ಲಿ ಖಾದರ್ ಕೀಳುಮಟ್ಟದ ರಾಜಕೀಯ ಮಾಡುತ್ತಿದ್ದಾರೆ ಎಂದು ಸುದರ್ಶನ್ ಮೂಡುಬಿದಿರೆ ಆರೋಪಿಸಿದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.