ಬಂಟ್ವಾಳ : ಸಮಾನ ಮನಸ್ಕ ಯುವಕರ ತಂಡವೊಂದು ಮಂಗಳೂರು ವಿಮಾನ ನಿಲ್ದಾಣದ ಅಭಿವೃದ್ಧಿಗೆ ಆಯೋಜಿಸಿದ ಟ್ವೀಟ್ ಅಭಿಯಾನಕ್ಕೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಸುಮಾರು 900ಕ್ಕೂ ಅಧಿಕ ಟ್ವೀಟ್ ಮತ್ತು ರೀಟ್ವೀಟ್ಗಳು ದಾಖಲಾಗಿವೆ.
![tweet](https://etvbharatimages.akamaized.net/etvbharat/prod-images/8812862_vick.jpg)
ಮಂಗಳೂರಿನ ವಿಮಾನ ನಿಲ್ದಾಣದ ಸರ್ವಾಂಗೀಣ ಅಭಿವೃದ್ಧಿಗೆ ಪ್ರಧಾನಿ ಮೋದಿ ಹಾಗೂ ನಾಗರಿಕ ವಿಮಾನಯಾನ ಸಚಿವಾಲಯಕ್ಕೆ ತಲುಪುವಂತೆ ಮಾಡಲು ಈ ಯುವಕರ ತಂಡವೊಂದು ಆರಂಭಿಸಿದ ಟ್ವೀಟ್ ಅಭಿಯಾನಕ್ಕೆ ಉತ್ತಮ ಬೆಂಬಲ ವ್ಯಕ್ತವಾಗಿತ್ತು. ಸೆ.15ರ ಬೆಳಗ್ಗೆ 6ರಿಂದ ಸಂಜೆ 6ರವರೆಗೆ ಟ್ವಿಟರ್ ಅಭಿಯಾನ ನಡೆಸಲಾಗಿದೆ.
ಫ್ಲೈ ಫ್ರಂ ಐಎಕ್ಸ್ಇ ಎಂಬ ಹ್ಯಾಶ್ ಟ್ಯಾಗ್‌ನೊಂದಿಗೆ ಆಂಗ್ಲ ಪದದಲ್ಲಿ ಬರೆದು, ವಿಮಾನ ನಿಲ್ದಾಣಕ್ಕೆ ಹೆಚ್ಚು ವಿಮಾನ ಬರುವಂತಾಗುವ ಅಗತ್ಯ ಮತ್ತು ಮೂಲ ಸೌಕರ್ಯ ಅಭಿವೃದ್ಧಿ ವಿವರಿಸಿ, ಪ್ರಧಾನಮಂತ್ರಿ ಮೋದಿ, ನಾಗರಿಕ ವಿಮಾನಯಾನ ಸಚಿವಾಲಯ ಮತ್ತು ನಾಗರಿಕ ವಿಮಾನಯಾನ ಸಚಿವರಿಗೆ ಟ್ವೀಟ್ ಮಾಡಲಾಗಿತ್ತು.
ಇದನ್ನೂ ಓದಿ: ಮಂಗಳೂರು ಏರ್ಪೋರ್ಟ್ ಅಭಿವೃದ್ಧಿಗೆ ಒತ್ತಡ ಹೇರಲು ಟ್ವಿಟ್ಟರ್ ಅಭಿಯಾನ
ಶ್ರೀಕರ ಎಂಬ ಯುವಕ ಹಾಗೂ ಆತನ ಸ್ನೇಹಿತರು ಪ್ರಾರಂಭಿಸಿದ ಈ ಟ್ವೀಟ್ ಅಭಿಯಾನಕ್ಕೆ ಉಡುಪಿ ಮಾಜಿ ಶಾಸಕ ಪ್ರಮೋದ್ ಮಧ್ವರಾಜ್ ಸಹಿತ ಹಲವರು ಪ್ರತಿಕ್ರಿಯೆ ವ್ಯಕ್ತಪಡಿಸಿ ಬೆಂಬಲ ಸೂಚಿಸಿದ್ದರು.
ಇದು ನಮ್ಮ ಮೊದಲ ಪ್ರಯತ್ನವಾಗಿದೆ. ಉಡುಪಿ ಸಹಿತ ಜಿಲ್ಲೆಯ ಹಲವು ಭಾಗಗಳಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಸುಮಾರು 900 ರಷ್ಟು ಟ್ವೀಟ್, ರೀಟ್ವೀಟ್ಗಳು ದಾಖಲಾಗಿವೆ. ಮುಂದೆಯೂ ಇಂಥ ಪ್ರಯತ್ನ ಸಾಗಲಿದೆ ಎಂದು ಅಭಿಯಾನದ ರೂವಾರಿ ಶ್ರೀಕರ್ ಹೇಳಿದ್ದಾರೆ.