ETV Bharat / state

ಮಂಗಳೂರು: ಕೋವಿಡ್​ನಿಂದ ಮೃತಪಟ್ಟ ರೋಗಿಯ ಬ್ಯಾಂಕ್ ಖಾತೆಗೆ ಕನ್ನ ಹಾಕಿದ ಕೇರ್ ಟೇಕರ್! - ಕೋವಿಡ್ ರೋಗಿಯ ಕೇರ್ ಟೇಕರ್

ಕೋವಿಡ್ ಸೋಂಕಿಗೆ ಒಳಗಾಗಿದ್ದ ವ್ಯಕ್ತಿಯ ಕೇರ್​ ಟೇಕರ್​ ಆಗಿದ್ದವರು ಆ ವ್ಯಕ್ತಿಯ ಬ್ಯಾಂಕ್​ ಖಾತೆಗೆ ಕನ್ನ ಹಾಕಿದ್ದಾರೆ. ರೋಗಿಯ ಡೆಬಿಟ್​ ಕಾರ್ಡ್ ಕದ್ದು, ಹೇಗೋ​​ ನಂಬರ್​ ಪಡೆದು, ಚಿಕಿತ್ಸೆ ಫಲಕಾರಿಯಾಗದೇ ಸೋಂಕಿತ ಸಾವನ್ನಪ್ಪಿದ ಬಳಿಕ ಅವರ ಖಾತೆಯಿಂದ ಹಣ ಲಪಟಾಯಿಸಿರುವ ಪ್ರಕರಣ ಮಂಗಳೂರಿನಲ್ಲಿ ಬೆಳಕಿಗೆ ಬಂದಿದೆ.

mangalore
mangalore
author img

By

Published : Jun 6, 2021, 5:35 PM IST

ಮಂಗಳೂರು: ಕೇರ್ ಟೇಕರ್ ಆಗಿ ಕೆಲಸ ನಿರ್ವಹಿಸುತ್ತಿದ್ದವನೇ ಕೋವಿಡ್​ನಿಂದ ಮೃತಪಟ್ಟ ರೋಗಿಯ ಬ್ಯಾಂಕ್ ಖಾತೆಗೆ ಕನ್ನ ಹಾಕಿರುವ ಪ್ರಕರಣ ನಗರದಲ್ಲಿ ನಡೆದಿದೆ.

ಫೈಜಿರ ಎಂಬಾತ ಬ್ಯಾಂಕ್​ ಖಾತೆಗೆ ಕನ್ನ ಹಾಕಿರುವ ಆರೋಪಿ. ಆರೋಪಿ ಫೈಜಿರ ಕೋವಿಡ್ ಸೋಂಕಿಗೆ ತುತ್ತಾಗಿರುವ ವಿವಿನ್ ಸಿಕ್ವೇರಾ ಅವರಿಗೆ ಕೇರ್ ಟೇಕರ್ ಆಗಿ ಏಪ್ರಿಲ್ 30 ರಿಂದ ನೇಮಕರಾಗಿದ್ದರು. ಈ ಸಂದರ್ಭ ಅದು ಹೇಗೋ ವಿವಿನ್ ಸಿಕ್ವೇರಾ ಅವರ ಕೆನರಾ ಬ್ಯಾಂಕ್ ಡೆಬಿಟ್ ಕಾರ್ಡ್ ಪಿನ್ ನಂಬರ್ ಪಡೆದುಕೊಂಡಿದ್ದರು. ಆದರೆ ವಿವಿನ್ ಸಿಕ್ವೇರಾ ಅವರು ಚಿಕಿತ್ಸೆ ಫಲಕಾರಿಯಾಗದೆ ಮೇ 18ರಂದು ಮೃತಪಟ್ಟಿದ್ದರು.

ಇದೀಗ ವಿವಿನ್ ಸಿಕ್ವೇರಾ ಅವರ ಡೆಬಿಟ್ ಕಾರ್ಡ್ ನಾಪತ್ತೆಯಾಗಿದ್ದು, ಫೈಜಿರ ಡೆಬಿಟ್ ಕಾರ್ಡ್ ಅನ್ನು ಕಳವು ಮಾಡಿ ಮೇ 1 ರಿಂದ ಮೇ 26ರ ಮಧ್ಯೆ ಒಟ್ಟು 3.77 ಲಕ್ಷ ರೂ. ಡ್ರಾ ಮಾಡಿದ್ದಾರೆ ಎಂದು ವಿವಿನ್ ಸಿಕ್ವೇರಾ ಅವರ ಪತ್ನಿ ರೊವಿನಾ ಸಿಕ್ವೇರಾ ಅವರು ಕಂಕನಾಡಿ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಈ ಕುರಿತು ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.