ETV Bharat / state

ಗುಂಡ್ಯ: ಕಾರಿನ ಮೇಲೆ ಮರ ಬಿದ್ದು ಹಾರಿಹೋಯ್ತು ವ್ಯಕ್ತಿಯ ಪ್ರಾಣ - ಕಾರು ರಿಪೇರಿ ವೇಳೆ ಮರ ಬಿದ್ದು ವ್ಯಕ್ತಿ ಮೃತ

ಕಾರಿನ ಮೇಲೆ ಮರ ಬಿದ್ದು ವ್ಯಕ್ತಿ ಮೃತಪಟ್ಟ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಗುಂಡ್ಯ ಸಮೀಪ ಸಂಭವಿಸಿದೆ.

Man dies after tree falls on car at gundya
ಕಾರಿನ ಮೇಲೆ ಮರ ಬಿದ್ದು ವ್ಯಕ್ತಿ ಸಾವು
author img

By

Published : Jan 2, 2022, 11:30 AM IST

ಗುಂಡ್ಯ(ದಕ್ಷಿಣ ಕನ್ನಡ): ಕಾರಿನ ಮೇಲೆ ಮರವೊಂದು ಬಿದ್ದು ವ್ಯಕ್ತಿ ಮೃತಪಟ್ಟ ಘಟನೆ ಶಿರಾಡಿ ಗ್ರಾಮದ ಗುಂಡ್ಯ ಸಮೀಪದ ಅಡ್ಡಹೊಳೆ ಎಂಬಲ್ಲಿ ಸಂಭವಿಸಿದೆ. ಕಾರಿನಲ್ಲಿ ತಾಂತ್ರಿಕ ದೋಷ ಕಂಡುಬಂದ ಕಾರಣ ಕೆಳಗಿಳಿದು ಪರಿಶೀಲಿಸುತ್ತಿದ್ದಾಗಲೇ ದುರಂತ ನಡೆದಿದೆ.

Man dies after tree falls on car at gundya
ಕಾರಿನ ಮೇಲೆ ಬಿದ್ದ ಮರ

ಘಟನೆಯಲ್ಲಿ ಕಾರು ಚಾಲಕ ಸುರೇಶ್ ಎಂಬವರು ಸ್ಥಳದಲ್ಲೇ ಮೃತಪಟ್ಟಿದ್ದು, ಮಹಿಳೆ ಹಾಗೂ ಇಬ್ಬರು ಮಕ್ಕಳು ಅಪಾಯದಿಂದ ಪಾರಾಗಿದ್ದಾರೆ. ರಾಷ್ಟ್ರೀಯ ಹೆದ್ದಾರಿ 75ರ ಮೂಲಕ ಬೆಂಗಳೂರು ಕಡೆಗೆ ತೆರಳುತ್ತಿದ್ದಾಗ ಶಬ್ದ ಕೇಳಿಬಂದ ಹಿನ್ನೆಲೆಯಲ್ಲಿ ಸುರೇಶ್ ಕಾರನ್ನು ನಿಲ್ಲಿಸಿ ಬಾನೆಟ್ ತೆಗೆದು ಪರಿಶೀಲನೆ ನಡೆಸುತ್ತಿದ್ದರು. ಅದೇ ವೇಳೆ ಹೆದ್ದಾರಿ ಬದಿಯಲ್ಲಿದ್ದ ಹಾಲುಮಡ್ಡಿ ಮರವು ಅವರ ಮೇಲೆ ಬಿದ್ದಿದೆ. ಘಟನೆಯಲ್ಲಿ ಕಾರು ಜಖಂಗೊಂಡಿದ್ದು, ಉಪ್ಪಿನಂಗಡಿ ಪೊಲೀಸರು ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

man-dies-after-tree-falls-on-car-at-gundya
ಮರಕ್ಕೆ ವ್ಯಕ್ತಿ ಬಲಿ

ಇದನ್ನೂ ಓದಿ: ಒಳಗೆ ಸೇರಿದರೆ ಗುಂಡು.. ಹುಡುಗಿಯ ರಂಪಾಟ ಕಂಡು ಪೊಲೀಸರೇ ಬೆಚ್ಚಿಬಿದ್ದರು-Video

ದಕ್ಷಿಣ ಕನ್ನಡ ಜಿಲ್ಲೆಯ ಗುಂಡ್ಯ, ಕುಕ್ಕೆ ಸುಬ್ರಹ್ಮಣ್ಯ, ಧರ್ಮಸ್ಥಳ ಸಂಚರಿಸುವ ರಸ್ತೆ ಬದಿಗಳಲ್ಲಿ ಹಾಲುಮಟ್ಟಿ ಸೇರಿದಂತೆ ಹಲವಾರು ಒಣಮರಗಳು ಬೀಳುವ ಸ್ಥಿತಿಯಲ್ಲಿದೆ. ಪ್ರಯಾಣಿಕರ ಜೀವಕ್ಕೆ ಎರವಾಗಿ ಪರಿಣಮಿಸುತ್ತಿರುವ ಇಂತಹ ಮರಗಳನ್ನು ತೆರವು ಮಾಡಬೇಕೆಂಬ ಆಗ್ರಹ ವ್ಯಕ್ತವಾಗಿದೆ.

ಇದನ್ನೂ ಓದಿ: ಬಿಹಾರ ಸಿಎಂ ನಿತೀಶ್ ಕುಮಾರ್‌ಗಿಂತ ಪುತ್ರ 5 ಪಟ್ಟು ಹೆಚ್ಚು ಶ್ರೀಮಂತ: ಹೀಗಿದೆ ಇಬ್ಬರ ಆಸ್ತಿ ವಿವರ..

ETV Bharat Logo

Copyright © 2025 Ushodaya Enterprises Pvt. Ltd., All Rights Reserved.